36.7 C
ಪುತ್ತೂರು, ಬೆಳ್ತಂಗಡಿ
March 16, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಜೆಸಿಐ ಉಜಿರೆ ಸಿಟಿ ವತಿಯಿಂದ ಮಹಿಳಾ ದಿನಾಚರಣೆ -ಸಾಧಕ ಮಹಿಳೆಯರಿಗೆ ಸನ್ಮಾನ

ಜೆಸಿಐ ಉಜಿರೆ ಸಿಟಿ ವತಿಯಿಂದ, ಪ್ರಗತಿ ಮಹಿಳಾ ಮಂಡಲ ಇವರ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರಗತಿಪರ ಕೃಷಿಕರಾಗಿ ಸಾಧನೆಗೈದ ಜಯಶ್ರೀ ಪ್ರಕಾಶ್ ಅಪ್ರಮೇಯ ಇವರನ್ನು ವಾವ್ ಉಮೆನ್ ಆಫ್ ವರ್ಥ್ ಅವಾರ್ಡ್ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಓಮನ ಇವರ ಸುಧೀರ್ಘ ಸೇವೆ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಸಾಧನೆಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಜೇಸಿಐ ವಲಯ ನಿರ್ದೇಶಕ ರಂಜಿತ್ ಎಚ್ ಡಿ ಹಾಗೂ ವಲಯದ ತರಬೇತಿ ವಿಭಾಗದ ಸಂಯೋಜಕಿ ಆಶಾಲತಾ ಪ್ರಶಾಂತ್ ಉಪಸ್ಥಿತರಿದ್ದು ಜೆಸಿಐಯ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿ ಮಹಿಳಾ ದಿನಾಚರಣೆಗೆ ಶುಭ ಕೋರಿದರು.

ಘಟಕದ ಅಧ್ಯಕ್ಷ ಮೊಹಮ್ಮದ್ ಮಿರ್ಷಾದ್ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಜೇಸಿ ಸದಸ್ಯ ಅಬ್ದುಲ್ ಖಾದರ್ ಮಹಿಳಾ ದಿನಾಚರಣೆಗೆ ಶುಭ ಕೋರಿ ಸನ್ಮಾನ ಪತ್ರವನ್ನು ವಾಚಿಸಿದರು.

ಅಭಿನಂದನ ಕಾರ್ಯಕ್ರಮದ ಬಳಿಕ ಮಹಿಳೆಯರಿಗೆ ಆತ್ಮ ರಕ್ಷಣೆ ಕುರಿತು ಮಾಹಿತಿ ಕಾರ್ಯಗಾರವನ್ನು ಸಬ್ ಇನ್ಸ್ಪೆಕ್ಟರ್ ಓಮನಾರವರು ನಡೆಸಿಕೊಟ್ಟರು. ಮಹಿಳೆಯರಿಗೆ ಮನೋರಂಜನಾ ಆಟ ಸ್ಪರ್ಧೆಗಳನ್ನು ನಡೆಸಲಾಯಿತು. ಸುಮಿತ್ರಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಬೆಳ್ತಂಗಡಿ ಘಟಕದ ಪೂರ್ವಾಧ್ಯಕ್ಷ ಪ್ರಶಾಂತ್ ಲಾಯಿಲ ಅಧ್ಯಕ್ಷ ಜಿತೇಶ್ ಜೆಸಿ ಸದಸ್ಯರು ಪ್ರಗತಿ ಮಹಿಳಾ ಮಂಡಲದ ಸದಸ್ಯರು ಭಾಗವಹಿಸಿದ್ದರು.

ಅಬ್ದುಲ್ ಖಾದರ್ ಕಾರ್ಯಕ್ರಮಕ್ಕೆ ಶುಭಕೋರಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕದ ಮಹಿಳಾ ಜೆ ಸಿ ವಿಭಾಗದ ಸಂಯೋಜಕಿ ಹೇಮಾವತಿ ಕೆ ಸ್ವಾಗತಿಸಿದರು. ಆತ್ಮಿಕ ವಿ.ಕೆ ರಾಜ್ ರವರ ಜೇಸಿವಾಣಿ ವಾಚಿಸಿದರು. ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಮೇ 25ರಂದು ಆಯೋಜಿಸಿರುವ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ : ಪಿ ಕುಶಾಲಪ್ಪ ಗೌಡ ಪೂವಾಜೆ

Suddi Udaya

ಪುಂಜಾಲಕಟ್ಟೆ ಕೆ ಪಿ ಎಸ್ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿ ಪರಿಷತ್ ರಚನೆ

Suddi Udaya

ಕಾಜೂರು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕಳೆಂಜ ಶ್ರೀ ಸದಾಶಿವ ದೇವಸ್ಥಾನದ ಶ್ರೀ ಶಾಸ್ತರ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಬಡ್ಡಿ ಪಂದ್ಯಾಟ: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

Suddi Udaya

ವಿಧಿವಿಜ್ಞಾನ ಕ್ಷೇತ್ರ ಉದ್ಯೋಗಕ್ಕಾಗಿ ನಡೆಸಿದ ಫೋರೆನ್ಸಿಕ್‌ ಸೈನ್ಸ್‌ ಅರ್ಹತಾ ಪರೀಕ್ಷೆಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Suddi Udaya
error: Content is protected !!