September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಬೆಳ್ತಂಗಡಿ: ಸಂತೆಕಟ್ಟೆ ವಾಣಿಜ್ಯ ಕಟ್ಟಡಕ್ಕೆ ಮಳೆ ನೀರು ಸೋರದಂತೆ ಶೀಟ್ ಅಳವಡಿಸಲು ತಹಶೀಲ್ದಾರರಿಗೆ ಮನವಿ

ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ನಗರ ಪಂಚಾಯತ್ ಬೆಳ್ತಂಗಡಿಯವರಿಂದ ನಿರ್ಮಿಸಲ್ಪಟ್ಟ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದ ಕಟ್ಟಡವು ಮಳೆಗಾಲದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದ್ದು ಮಳೆ ನೀರು ಸೋರದಂತೆ ಶೀಟ್ ಅಳವಡಿಸುವ ಕುರಿತು ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ.

ವ್ಯಾಪಾರ ವ್ಯವಹಾರದಲ್ಲಿ ಎಷ್ಟೇ ಕಷ್ಟ ನಷ್ಟಗಳು ಆದರೂ ನಗರ ಪಂಚಾಯತಿಗೆ ಆದರೆ ಪಾವತಿಯಾಗಬೇಕಾದ ಬಾಡಿಗೆಯನ್ನು ಆದಷ್ಟು ಕ್ಲಪ್ತ ಸಮಯದಲ್ಲಿ ತೆರುತ್ತಿದ್ದೇವೆ. ಮಳೆಗಾಲದಲ್ಲಿ ನೀರಿನ ಸೋರಿಕೆಯಿಂದ ನಾವು ಬಹಳಷ್ಟು ಹಣವನ್ನು ಖರ್ಚು ಮಾಡಿ ಮಾಡಿದ ಇಂಟಿರಿಯರ್, ಫಾಲ್ ಸೀಲಿಂಗ್, ವಿದ್ಯುತ್ ಉಪಕರಣಗಳಿಗೆ ಹಾನಿಯಾಗುತ್ತಿದೆ. ಆದ್ದರಿಂದ ಮಳೆಗಾಲ ಆರಂಭದ ಮೊದಲೇ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಂಡು ಇದರಿಂದ ನಮಗೆ ಮುಕ್ತಿ ನೀಡಬೇಕಾಗಿ ಬಾಡಿಗೆದಾರರು ಮನವಿಯಲ್ಲಿ ತಿಳಿಸಿರುತ್ತಾರೆ.

Related posts

ಸುದೇಮುಗೇರು ಅಂಗನವಾಡಿಯಲ್ಲಿ 80ನೇ ವರ್ಷದ ಸ್ವಾತ್ರಂತ್ರೋತ್ಸವ

Suddi Udaya

ಬೆಳ್ತಂಗಡಿ:ಸಿರಿ ಕೇಂದ್ರ ಕಛೇರಿಯಲ್ಲಿ ಸಮಗ್ರ ಆರೋಗ್ಯ ತಪಾಸಣಾ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಮ್. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ಎಚ್‌.ಪಿ.ವಿ. ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಪಾಲಿಟೆಕ್ನಿಕ್:‌ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣ ಕುರಿತು ಕಾರ್ಯಾಗಾರ

Suddi Udaya

ಅಳದಂಗಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

Suddi Udaya

ಆಟೋ ರಿಕ್ಷಾ ಮಗುಚಿಬಿದ್ದು ಮೃತಪಟ್ಟ ಬಾಲಕನ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಭೇಟಿ

Suddi Udaya
error: Content is protected !!