ಉಜಿರೆ: ಬಿ.ಸಿ. ರೋಡ್‌ನಲ್ಲಿ ಸ್ಪರ್ಶ ಕಲಾಮಂದಿರದಲ್ಲಿ ಮಾ. 26, 27 ಮತ್ತು 28 ರಂದು ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ವಿಶ್ವನಾಥ, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಅಶೋಕ ಶೆಟ್ಟಿ ಸರಪಾಡಿ, ಅಬೂಬಕ್ಕರ್ ಅಮ್ಮುಂಜೆ, ದೇವಪ್ಪ ಕುಲಾಲ್, ರಜನಿ ಚಿಕ್ಕಯ್ಯಮಠ, ವಿ. ಸು. ಭಟ್, ಬಂಟ್ವಾಳ, ಸುಭಾಶ್ಚಂದ್ರ ಜೈನ್ ಮತ್ತು ಹರ್ಷೇಂದ್ರ ಜೈನ್ ಮಾಳ ಉಪಸ್ಥಿತರಿದ್ದರು.












