ಬೆಳ್ತಂಗಡಿ: ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ಯಲ್ಲಿ ಗ್ರಾಹಕರ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣವನ್ನು ವಂಚನೆ ಮಾಡಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಸೊಸೈಟಿಯಲ್ಲಿ ಇಂದಿನ ಮಹಜರು ಕಾರ್ಯ ಅಂತ್ಯ ಮಾಡಿ ವಾಪಸ್ ತೆರಳಿದ್ದಾರೆ.
ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಗೆ ಬೆಂಗಳೂರಿನ ಸಿಐಡಿ ಡಿಪೋಸಿಟ್ ಫ್ರಾಂಡ್ ವಿಂಗ್ ಅಧಿಕಾರಿಗಳ ತಂಡ ಮಾ.17 ರಂದು ಬೆಳಗ್ಗೆ 11 ಗಂಟೆಗೆ ಆಗಮಿಸಿ ಸರಕಾರಿ ಪಂಚರ ಸಮ್ಮುಖದಲ್ಲಿ ಸಂಜೆ 7:45 ಗಂಟೆವರೆಗೆ ಮಹಜರು ಮಾಡಿ ವಾಪಸ್ ತೆರಳಿದ್ದು ನಾಳೆ ಮತ್ತೆ ಮಹಜರು ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಬೆಂಗಳೂರು ಸಿಐಡಿ ಡೆಪೋಸಿಟ್ ಫ್ರಾಂಡ್ ವಿಂಗ್ ಇನ್ಸ್‌ಪೆಕ್ಟರ್ ಹರೀಶ್, ಎಎಸ್ಐ ಶಂಕರ್, ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ಕಿರಣ್, ಶಿವರಾಜ್, ಬೆಳ್ತಂಗಡಿ ಕಂದಾಯ ಇಲಾಖೆಯ ಎಸ್.ಡಿ.ಎ ಪ್ರಜ್ವಲ್, ಗ್ರಾಮ ಆಡಳಿತಾಧಿಕಾರಿ ಸತೀಶ್ , ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಇಲಾಖೆಯ ಸಿಡಿಒ ಎನ್.ಜೆ.ಗೋಪಾಲ್, ದೂರುದಾರ ದಯಾನಂದ್ ನಾಯಕ್, ಸಿಐಡಿ ವಾಹನ ಚಾಲಕ ಸುಂದರ್ ಮಹಜರು ವೇಳೆ ಜೊತೆಯಲ್ಲಿದ್ದರು.












