September 7, 2026
ಅಭಿನಂದನೆಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ನಿವೃತ್ತ ಸಾಧಕ ಯೋಧ ಪ್ರಶಸ್ತಿ ಸ್ವೀಕರಿಸಿ ಆಗಮಿಸಿದ ಲ| ಡಾ.ಗೋಪಾಲಕೃಷ್ಣ ಕಾಂಚೋಡು: ಉಜಿರೆಯಲ್ಲಿ ಭವ್ಯವಾದ ಸ್ವಾಗತ – ಅಭಿನಂದನೆ

ಉಜಿರೆ: ನಿವೃತ್ತ ಯೋಧರಿಗೆ ಭಾರತೀಯ ಸೇನೆಯ ಮಹಾ ದಂಡನಾಯಕರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಯವರು ನೀಡುವ “ನಿವೃತ್ತ ಸಾಧಕ ಯೋಧ” ಪ್ರಶಸ್ತಿಗೆ ಭಾಜನರಾದ ಲ| ಡಾ.ಗೋಪಾಲಕೃಷ್ಣ ಕಾಂಚೋಡು ರವರು ಇಂದು ದೆಹಲಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಉಜಿರೆಗೆ ಆಗಮಿಸಿದ ಸಂದರ್ಭದಲ್ಲಿ ಭವ್ಯವಾದ ಸ್ವಾಗತದೊಂದಿಗೆ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉಷಾಕಿರಣ್ ಕಾರಂತ್, ಪುಷ್ಪಾವತಿ ಆರ್ ಶೆಟ್ಟಿ, ಉಜಿರೆ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಅರವಿಂದ ಕಾರಂತ್, ಪ್ರಸ್ತುತ ಅಧ್ಯಕ್ಷರಾದ ಪ್ರಸಾದ್ ಬಿಎಸ್, ಉಪಾಧ್ಯಕ್ಷರಾದ ಪ್ರಭಾಕರ ಜೈನ್, ರಮಾನಂದ, ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್, ವಿಶ್ವನಾಥ್ ಭಂಡಾರಿ, ರೋಟರಿ ಕ್ಲಬ್ ಕಾರ್ಯದರ್ಶಿ ದಯಾಕರ್, ವಾರ್ಡ್ ಅಧ್ಯಕ್ಷ ವಿಶ್ವನಾಥ್ ನಾಯ್ಕ್, ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್, ವರ್ತಕರ ಸಂಘದ ಇತರ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಅಭಿನಂದಿಸಿದರು.

ಭಾರತೀಯ ಸೇನೆಯಲ್ಲಿ ಪೂರ್ಣ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ವಿಶೇಷವಾಗಿ ಸಮಾಜಕ್ಕೆ ಆದರ್ಶಪ್ರಾಯವಾದ ರೀತಿಯಲ್ಲಿ ಮಾದರಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಪ್ರಶಸ್ತಿ ನೀಡಲಾಗಿದ್ದು, ಡಾ.ಗೋಪಾಲಕೃಷ್ಣ ಕಾಂಚೋಡು ರವರು ದಕ್ಷಿಣ ಭಾರತದಿಂದ ಆಯ್ಕೆಯಾದ ಪ್ರಥಮ ಏಕೈಕ ವ್ಯಕ್ತಿಯಾಗಿರುತ್ತಾರೆ.

Related posts

ಕಕ್ಕಿಂಜೆಯಲ್ಲಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಳಾಂತರಿತ ಶಾಖೆ ಉದ್ಘಾಟನೆ

Suddi Udaya

ಆ.10-12: ಲಾಯಿಲದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ : ಆಕಾಶಕಾಯಗಳ ವೀಕ್ಷಣೆ

Suddi Udaya

ಬೆಳಾಲು ಶ್ರೀ ಧ.ಮಂ.ಅ.ಪ್ರೌಢ ಶಾಲೆಯಲ್ಲಿ ಆಟಿದ ಲೇಸು ಕಾರ್ಯಕ್ರಮ

Suddi Udaya

ಫೆ.27-29: ಶಿಬಾಜೆ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya
error: Content is protected !!