July 23, 2026
ಗ್ರಾಮಾಂತರ ಸುದ್ದಿವರದಿ

ವೇಣೂರು: ನಿಯತಿ ನೃತ್ಯ ನಿಕೇತನ ವತಿಯಿಂದ ಭರತನಾಟ್ಯ ತರಗತಿ ಪ್ರಾರಂಭ

ವೇಣೂರು: ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಭರತನಾಟ್ಯ ಕಲೆ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಿಯತಿ ನೃತ್ಯ ನಿಕೇತನ ವತಿಯಿಂದ ಭರತನಾಟ್ಯ ತರಗತಿಗೆ ಮಾ.19ರಂದು ಚಾಲನೆ ನೀಡಲಾಯಿತು.

ವೇಣೂರು ಜೆ.ಪಿ ಟವರ್ಸ್‌ನಲ್ಲಿ ನಡೆದ ಈ ಕಾರ್ಯಕ್ರಮವು ಗುರುವರ್ಯರ ಆಶೀರ್ವಾದದೊಂದಿಗೆ ಶುಭಾರಂಭಗೊಂಡಿತು. ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಮಾರ್ಗದರ್ಶನದಲ್ಲಿ ವಿದುಷಿ ನಿಶಾ ಪ್ರಸಾದ್ ಮಾಣೂರು ಇವರ ನೇತೃತ್ವದಲ್ಲಿ ಆರಂಭವಾದ ಈ ತರಗತಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕರು, ಭರತನಾಟ್ಯವು ಕೇವಲ ನೃತ್ಯವಲ್ಲದೆ, ಅದು ಭಾವ, ರಾಗ, ತಾಳಗಳ ಸಮನ್ವಯವಾಗಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು. ಪೋಷಕರು ಮತ್ತು ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಉಪಕ್ರಮವನ್ನು ಶ್ಲಾಘಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲೆಗಳ ತರಗತಿಗಳು ಪ್ರಾರಂಭವಾಗುತ್ತಿರುವುದು ಸಂಸ್ಕೃತಿ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಜೆಪಿ ಟವರ್ ನ ಮಾಲೀಕರಾದ ಜಗದೀಶ್ಚಂದ್ರ ಡಿ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.

ವಿದುಷಿ ನಿಶಾ ಪ್ರಸಾದ್ ಮಾಣೂರು ಇವರ ನೇತೃತ್ವದಲ್ಲಿ ನಿಯತಿ ನೃತ್ಯ ನಿಕೇತನದ ಶಾಖೆಯು ವೇಣೂರಿನಲ್ಲಿ ಉದ್ಘಾಟನೆಗೊಂಡು , ಶಂಕರ್ ಭಟ್ ಇವರ ನಿರೂಪಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಯತಿ ಭಟ್ ಇವರು ಪ್ರಾರ್ಥಿಸಿ ಪ್ರಸಾದ್ ಎಮ್ ಕೆ ಇವರು ಧನ್ಯವಾದವನ್ನು ಸಮರ್ಪಿಸಿದರು. ಪೋಷಕರಾದ ಜಯಂತಿ ಭಟ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Related posts

ಕೊಕ್ರಾಡಿ ಸರಕಾರಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ ನೋಬರ್ಟ್ ಮಾರ್ಟಿಸ್ ರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯಿತ್ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿ ಆಯ್ಕೆ

Suddi Udaya

ಫೆ.3-7: ಶ್ರೀ ಕ್ಷೇತ್ರ ಓಡೀಲು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಮಣಿಪುರದಲ್ಲಿ ಮಹಿಳೆಯರ ಮೇಲಾದ ದೌಜ೯ನ್ಯಕ್ಕೆ ಖಂಡನೆ – ಬೆಳ್ತಂಗಡಿ ಕ್ರೈಸ್ತ ಸಂಘಟನೆಗಳ ಒಕ್ಕೂಟಗಳಿಂದ ಬೃಹತ್ ಪ್ರತಿಭಟನೆ- ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ – ಮಣಿಪುರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹ- ಜಡಿಮಳೆಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಭಾಗಿ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಹಳದಿ ದಿನ ಆಚರಣೆ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!