September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಯುದ್ದ ಖಂಡಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ‌ ಪ್ರತಿಭಟನೆ

ಬೆಳ್ತಂಗಡಿ: ಇಡೀ ಜಗತ್ತಿನ‌ ತೈಲ ಉತ್ಪಾದನೆ, ವಿತರಣೆಯ ಸಂಪೂರ್ಣ ಹಿಡಿತ ತನ್ನ ಹಸ್ತ ಬರಲು ಅಮೇರಿಕ ನಡೆಸುವ ಈ ಅಕ್ರಮ ಯುದ್ದಗಳ ತಡೆಯಲು ಭಾರತ ಮುಂದಾಗಬೇಕೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಯಾಧವ ಶೆಟ್ಟಿ ಅಗ್ರಹಿಸಿದರು.

ಅವರು ಇಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು , ಎಐಕೆಎಸ್, ಡಿ.ವೈಎಪ್‌.ಐ., ಜೆ.ಎಂ.ಎಸ್, ಡಿ.ಎಚ್.ಎಸ್. ಆದಿವಾಸಿ ಮೊದಲಾದ ಸಂಘಟನೆಗಳು ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುವ ಯುದ್ದ ಖಂಡಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿ ಮಾತಾಡುತ್ತಿದ್ದರು.

ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಮಾತಾಡುತ್ತಾ ಒಂದು ದೇಶ ಮತ್ತೊಂದು ದೇಶದ ಸಾರ್ವಭೌಮತೆಯ ಮೇಲೆ‌ ದಾಳಿ ನಡೆಸುವುದು ಅಮೇರಿಕಾದ ಸರ್ವಾದಿಕಾರಿ ನಡೆಯಾಗಿದೆ ಎಂದರು.‌

ಅಮೇರಿಕಾದ ಸರ್ವಾಧಿಕಾರಿ ನಡೆಯನ್ನು ಬೆಂಬಲಿಸುವುದು ಎಂದರೆ ಅದರ ಗುಲಾಮಗಿರಿಗೆ ಬಲಿಯಾದಂತೆ ಆಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡು ದೇಶದ ಸ್ವಾಬಿಮಾನದ ಗೌರವ ಉಳಿಸಬೇಕಿದೆ ಎಂದರು.

ಶ್ಯಾಮರಾಜ್ ಸ್ವಾಗತಿಸಿ, ಡಿ.ಎಚ್.ಎಸ್. ರಾಜ್ಯ ನಾಯಕಿ ಈಶ್ವರಿ ವಂದಿಸಿದರು. ಅಜಿ.ಎಂ.ಜೋಸ್, ಹಿರಿಯ ಮುಖಂಡರಾದ ಲಕ್ಷ್ಮಣ ಗೌಡ, ಜಯಶ್ರಿ, ಪುಷ್ಪ, ಮಹಿಳಾ ಮುಖಂಡರಾದ ಕಿರಣಪ್ರಭಾ , ಕುಮಾರಿ, ಡಿ.ವೈ.ಎಪ್.ಐ ಮುಖಂಡರಾದ ಅಭಿಷೇಕ್, ಆದಿವಾಸಿ ಸಂಘಟನೆಯ ಪ್ರವೀಣ್ ಎಂಕೆ. ಕಟ್ಟಡ ಸಂಘದ ಲೋಕೇಶ್, ಅಶ್ವಿತ, ಅಪ್ಸ, ಮೊದಲಾದವರು ಇದ್ದರು. ಕೊನೆಗೆ ತಹಶಿಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಆಗ್ರಹ ಪತ್ರ ನೀಡಲಾಯ್ತು.

Related posts

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಉದ್ಯಮಿ ಕಿರಣಚಂದ್ರ ಪುಷ್ಪಗಿರಿ ಭೇಟಿ

Suddi Udaya

ಮಹಿಳಾ ಸಬಲೀಕರಣದ ಭಾಗವಾಗಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಲಿಂಗ ಸಮಾನತೆಯ ಕುರಿತು ತರಬೇತಿ

Suddi Udaya

ಶ್ರೀ ಧ.ಮಂ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಭಾರತೀಯ ಆಯುರ್ವಿಜ್ಞಾನ ಸಂಪದ ಸಂಸ್ಥಾನ, ಹೈದರಾಬಾದ್ ನಡುವೆ ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರ ಹಸ್ತಾಂತರ

Suddi Udaya

ಉಜಿರೆ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ ; ಸರ್ವಧರ್ಮ ಸಮನ್ವಯ ಸಭೆ

Suddi Udaya

ಬೆಳ್ತಂಗಡಿ ತಾಲೂಕಿನ ಪಂಚ ಗ್ಯಾರಂಟಿ ಸಮಾವೇಶ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!