September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶ್ರೀ ವಿಶ್ವಕರ್ಮ ಸೇವಾ ಸಂಘದ ಮಹಾಸಭೆ ಹಾಗೂ ವಿಶ್ವಕರ್ಮ ಪೂಜೆ

ವೇಣೂರು :ಶ್ರೀ ವಿಶ್ವಕರ್ಮ ಸೇವಾ ಸಂಘದ 34ನೇ ವರ್ಷದ ಮಹಾಸಭೆ ಹಾಗೂ ಶ್ರೀ ವಿಶ್ವಕರ್ಮ ಪೂಜೆಯು ಮಾ.22ರಂದು ಸಂಘದಲ್ಲಿ ಜರಗಿತು.

ಹಂಸ ವುಡ್ ಇಂಡಸ್ಟ್ರೀಸ್ ಬೆಳ್ತಂಗಡಿ ಇದರ ಮಾಲಕ ಬಿ ಕೆ ಸತೀಶ್ ಆಚಾರ್ಯ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾಜ ಬಾಂಧವರಿಗೆ ಹಲವಾರು ವಿಚಾರಗಳ ಮಾಹಿತಿಯನ್ನು ನೀಡುವುದರ ಜೊತೆಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ (ಲಿ) ಕೊಟ್ಟಾರ ಚೌಕಿ ಮಂಗಳೂರು ಇದರ ನಿರ್ದೇಶಕ ಮಂಜುನಾಥ ಆಚಾರ್ಯ ಅಳದಂಗಡಿ, ಶ್ರೀ ಕಾಳಿಕಾ ಡಿಜಿಟಲ್ ಪ್ರಿಂಟ್ಸ್ ಮೂಡಬಿದಿರೆ ಇದರ ಮಾಲಕಿ ಶಾಂತಲಾ ಸೀತಾರಾಮ ಅಚಾರ್ಯ, ಬ್ರಹ್ಮಶ್ರೀ ಎನ್ ಕೇಶವ ಪುರೋಹಿತ್ ಮೂಡಬಿದಿರೆ ಭಾಗವಹಿಸಿದ್ದರು.

ಸಂಘದ ಗೌರವಾಧ್ಯಕ್ಷ ಶ್ರೀಧರ ಅಚಾರ್ಯ ಖಂಡಿಗ, ಅಧ್ಯಕ್ಷ ಸತೀಶ ಆಚಾರ್ಯ ಕೈರೋಳಿ, ಶ್ರೀ ಕಾಳಿಕಾಂಬ ಮಹಿಳಾ ಮಂಡಳಿ ಇದರ ಅಧ್ಯಕ್ಷೆ ಮಾಲತಿ ರತ್ನಾಕರ ಉಪಸ್ಥಿತ ರಿದ್ದರು .

ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಸುಧಾಕರ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಸತೀಶ್ ಆಚಾರ್ಯ ಧನ್ಯವಾದವಿತ್ತರು. ಬಿ ಹರಿಶ್ಚಂದ್ರ ಆಚಾರ್ಯ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿಯಿಂದ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ರವರ ಭೇಟಿ : ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ

Suddi Udaya

ಬೆಳಾಲು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಡಿಕ್ಕಿ ಹೊಡೆದು ವಾಹನ ಸಹಿತ ಚಾಲಕ ಪರಾರಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ

Suddi Udaya

ಕನಾ೯ಟಕ ಯಕ್ಷಗಾನ ಅಕಾಡೆಮಿ ನೂತನ ಸದಸ್ಯರ ನೇಮಕ

Suddi Udaya

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!