September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ ಎಸ್‌ಡಿಎಂ ಶಾಲೆಯಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಉದ್ಘಾಟನೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.

ಅತಿಥಿಗಳಾಗಿ ಅಖಿಲ ಕರ್ನಾಟಕ ಜನಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬದುಕು ಸಣ್ಣದು.ಅದನ್ನು ರುಚಿಕರ ಮಾಡುವುದು ವಿದ್ಯಾರ್ಥಿಗಳಾದ ನಿಮ್ಮ ಕೈಲಿ ಇದೆ. ಉತ್ತಮ ಸಂಸ್ಕಾರ ಕೊಟ್ಟಷ್ಟು ಬದುಕು ಬೆಲೆ ಬಾಳುತ್ತದೆ. ಮಾದಕ ವ್ಯಸನಗಳು ಮಜಾ ಅಲ್ಲ ಅದು ಸಜಾ ಎಂದು ತಿಳಿಯಬೇಕು. ಶರೀರ ಎಂಬುದು ಒಂದು ಫ್ಯಾಕ್ಟರಿಯ ಹಾಗೆ. ಹೀಗಿರುವಾಗ ಆಹಾರ ನಮ್ಮನ್ನು ಉಳಿಸಿ ಬೆಳೆಸಿ ಶಕ್ತಿ ಕೊಡುವ ಹಾಗಿರಬೇಕು. ಮಕ್ಕಳ ಆಟ ಮನೆಯ ಜಗಲಿಯ ಮೇಲೆ ಇರಬೇಕು. ಮೊಬೈಲ್ನಲ್ಲಿ ಅಲ್ಲ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ನಿರ್ದೇಶಕ ಯಶವಂತ್ ಬೆಳ್ತಂಗಡಿ ಉಪಸ್ಥಿತರಿದ್ದರು. ಭಾರ್ಗವಿ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಸ್ವಾಗತಿಸಿ, ಅರ್ಘ್ಯ ಅತಿಥಿಗಳ ಕಿರುಪರಿಚಯ ಮಾಡಿ ಕಲ್ಪಿತ ಧನ್ಯವಾದವಿತ್ತರು.

Related posts

ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ ಜೆಸಿಐ ವತಿಯಿಂದ ಎಕ್ಸೆಲ್ ಕಾಲೇಜಿನ ಚೇರ್ಮನ್ ಸುಮಂತ್ ಕುಮಾರ್ ಜೈನ್ ರಿಗೆ ಅಭಿನಂದನೆ

Suddi Udaya

ಸಿಎಎ ಕಾಯಿದೆ ಅನುಷ್ಠಾನ: ಬಿಜೆಪಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

Suddi Udaya

ಕೊಕ್ಕಡ: ರಿಕ್ಷಾ ಚಾಲಕ ಮಾಲಕರ ಸಂಘದಿಂದ ಚರಂಡಿ ದುರಸ್ತಿ

Suddi Udaya

ನಿಡ್ಲೆ ಸರಕಾರಿ ಪ್ರೌಢ ಶಾಲೆಯ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಹೊಸಂಗಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನನ್ನ ಗಿಡ ನನ್ನ ಮರ’ ಮತ್ತು ‘ನನ್ನ ನೆಲ ನನ್ನ ಜಲ’ ವಿನೂತನ ಸಪ್ತಾಹ

Suddi Udaya
error: Content is protected !!