July 24, 2026
ಅಪರಾಧ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರ ದಾಳಿ

ಬೆಳ್ತಂಗಡಿ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮುರದಮೇಲು ಎಂಬಲ್ಲಿ ಮಾ.27 ರಂದು ಸುಮಾರು ಬೆಳಿಗ್ಗೆ 10:15 ಗಂಟೆ ವೇಳೆಗೆ ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕವಾಗಿ ಬಾಳು (ಸಣ್ಣ ಕತ್ತಿ) ಕಟ್ಟಿ ಅವುಗಳನ್ನು ಎದುರು-ಬದುರಾಗಿ ಹಾರಿಸಿ ಕಾದಾಟ ಮಾಡಲು ಬಿಟ್ಟು ಹಣವನ್ನು ಪಣವಾಗಿಟ್ಟುಕೊಂಡು ಸಂಘಟನಾತ್ಮಕವಾಗಿ ಕೋಳಿ ಅಂಕ ಜೂಜಾಟವಾಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸರ್ಮರ್ಥ ಆರ್ ಗಾಣಿಗೇರ ನೇತೃತ್ವದ ಎಎಸ್ಐ ಪೌಲೋಸ್ ತಂಡದ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ 4 ಆರೋಪಿಗಳಾದ ಪ್ರಶಾಂತ್, ಶಶಿಕುಮಾರ್,ಹೊನ್ನಪ್ಪ ಗೌಡ, ಜನಾರ್ಧನ ಎಂಬವರನ್ನು ವಶಕ್ಕೆ ಪಡೆದು ಅವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ರೂ 2250 ರೂಪಾಯಿ ಹಣ, 2 ಬಾಳು (ಸಣ್ಣ ಕತ್ತಿ) ಅಂದಾಜು ಮೌಲ್ಯ ರೂ 50 ರೂಪಾಯಿ, 4 ಪ್ಲಾಸ್ಟಿಕ್ ಚೀಲ (ಬೆಲೆ ಬಾಳುವುದಿಲ್ಲ), ಕೆಂಪು ಹುರಿಯ ಜಾತಿಯ 4, ಮೈಪ ಜಾತಿಯ 4, ಬೊಳ್ಳೆ ಜಾತಿಯ 1, ನೀಲ ಜಾತಿಯ 2, ಮಂಜಲ ಜಾತಿಯ 1, ಕಾವೆ ಜಾತಿಯ 2 ಕೋಳಿಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡ ನಗದು ರೂ 2250, 14 ಕೋಳಿಗಳ ಅಂದಾಜು ಮೌಲ್ಯ 6700 ರೂಪಾಯಿ, ಬಾಳು (ಸಣ್ಣ ಕತ್ತಿ) ಅಂದಾಜು ಮೌಲ್ಯ 50 ರೂಪಾಯಿ ಆಗಿದ್ದು ಸ್ವಾಧೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ 9000 ರೂಪಾಯಿ ಅಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 112 BNS & 87 KP Act R/w 11(1)(m)(ii),11(1)(n),Prevention of Animal cruelty Act -1960 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ಭಾಗವಹಿಸಿದರು.

Related posts

12 ವರ್ಷಗಳ ಮೋದಿ ನೇತೃತ್ವ – ಹೊಸ ಭಾರತದ ಆತ್ಮವಿಶ್ವಾಸದ ಪಯಣ: ಅನಿಲ್ ಕುಮಾರ್ ಯು

Suddi Udaya

ಸುಲ್ಕೇರಿಮೊಗ್ರು: ಭಾರಿ ಮಳೆಗೆ ಮನೆಯ ಕಂಪೌಂಡ್ ಕುಸಿತ

Suddi Udaya

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೈ‌ ಕೊಟ್ಟ ವಿದ್ಯುತ್: ವೈದ್ಯರಿಂದ ಕತ್ತಲಲ್ಲಿ ರೋಗಿಗಳ ಆರೋಗ್ಯ ತಪಾಸಣೆ: ಇನ್ವರ್ಟರ್ ವ್ಯವಸ್ಥೆಗಳು ಇಲ್ಲದೆ ಟಾರ್ಚ್ ಬೆಳಕಿನಿಂದ ಚಿಕಿತ್ಸೆ ನೀಡಬೇಕಾದ ಸ್ಥಿತಿ

Suddi Udaya

ಮೇಲಂತಬೆಟ್ಟುವಿನ ಮನೆಯಂಗಳದಲ್ಲಿ ಭಾರಿಗಾತ್ರದ ಕಾಳಿಂಗ ಸರ್ಪ: ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ವಿದ್ವತ್ ಪಿಯು ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಿಂದ ಓರಿಯೆಂಟೇಶನ್ : ಪರಿಶ್ರಮದ ಹಾದಿಯಿಂದ ಭವಿಷ್ಯದಲ್ಲಿ ಯಶಸ್ಸು: ಸಿಎ ನಿರೀಕ್ಷಾ ನಾವರ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಮತ್ತು ಲಯನ್ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಸಂಸ್ಥೆಗಳಿಗೆ ರೂ. 1ಲಕ್ಷ ಸಹಾಯಧನ

Suddi Udaya
error: Content is protected !!