September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಕೊಕ್ಕಡ: ಶ್ರೀನಿಧಿ ಜೀಪ್ ಮಾಲಕ ರಘುನಾಥ ನಾಯ್ಕ್ ನಿಧನ

ಕೊಕ್ಕಡ: ಗ್ರಾಮೀಣ ಸಾರಿಗೆ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಅಪಾರ ಸೇವೆ ಸಲ್ಲಿಸಿದ್ದ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ, “ಶ್ರೀನಿಧಿ” ಟೂರಿಸ್ಟ್ ಜೀಪ್‌ನ ಮಾಲಕ ರಘುನಾಥ ನಾಯ್ಕ್ (72ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಾ. 27ರಂದು ನಿಧನರಾದರು.

ರಘುನಾಥ ನಾಯ್ಕ ಅವರು ಗ್ರಾಮೀಣ ಭಾಗದ ಜನರಿಗೆ ವಿಶ್ವಾಸಾರ್ಹ ಸಾರಿಗೆ ಸೇವೆ ನೀಡಿದ ಮುಂಚೂಣಿ ವ್ಯಕ್ತಿಯಾಗಿದ್ದರು. ಸುಮಾರು 40 ವರ್ಷಗಳ ಹಿಂದೆ “ಶ್ರೀನಿಧಿ” ಎಂಬ ಹೆಸರಿನಲ್ಲಿ ಟೂರಿಸ್ಟ್ ಜೀಪ್ ಸೇವೆಯನ್ನು ಪ್ರಾರಂಭಿಸಿದ ಅವರು, ಆರಂಭದಲ್ಲಿ ಕೊಕ್ಕಡದಿಂದ ಉಪ್ಪಿನಂಗಡಿ ಮಾರ್ಗದಲ್ಲಿ ಜನರಿಗೆ ಪ್ರಯಾಣ ಸೌಲಭ್ಯ ಕಲ್ಪಿಸಿದ್ದರು. ಆ ಕಾಲದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಡಿಮೆ ಇದ್ದ ಸಂದರ್ಭದಲ್ಲಿ, ಅವರ ಸೇವೆ ಅನೇಕ ಜನರಿಗೆ ಆಧಾರವಾಗಿತ್ತು.

ನಂತರ ಅವರು ಕೊಕ್ಕಡ-ಧರ್ಮಸ್ಥಳ ಮಾರ್ಗದಲ್ಲಿಯೂ ನಿರಂತರವಾಗಿ ಜೀಪ್ ಸರ್ವಿಸ್ ನೀಡುತ್ತಾ, ಭಕ್ತರು ಹಾಗೂ ಸ್ಥಳೀಯರ ಪ್ರಯಾಣಕ್ಕೆ ಬಹುಮುಖ್ಯ ಸೇತುವೆಯಾಗಿದ್ದರು. ಸಮಯಪಾಲನೆ, ನಿಷ್ಠೆ ಮತ್ತು ಸ್ನೇಹಪರ ಸ್ವಭಾವದಿಂದ ಅವರು ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು.

ಮೃತರು ಪತ್ನಿ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

Suddi Udaya

ಮಚ್ಚಿನ: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ರುಕ್ಮಯ ಗೌಡ ನಿಧನ

Suddi Udaya

ವೇಣೂರು 5 ಮೆಗಾ ವಾಲ್ಟ್ ವಿದ್ಯುತ್ ಫೀಡರನ್ನು 10 ಮೆಗಾ ವಾಲ್ಟ್ ವಿದ್ಯುತ್ ಫೀಡರ್ ಪರಿವರ್ತಿಸಲು ಮನವಿ

Suddi Udaya

ಅರಸಿನಮಕ್ಕಿ ವಲಯದ ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

‘ಮೋದಿಜೀಯವರ ಅಧಿಕಾರವಧಿಯಲ್ಲಿ ಆಯುರಾರೋಗ್ಯ ಲಭಿಸಲಿ’ ಎಂದು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ 120 ಅಗೇಲು ರಂಗಪೂಜೆ

Suddi Udaya

ಎಸ್.ಡಿ.ಎಂ. ಪಪೂ ಕಾಲೇಜು : ಶೈಕ್ಷಣಿಕ ಅಧ್ಯಯನ ಪ್ರವಾಸ

Suddi Udaya
error: Content is protected !!