28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸರ್ಕಾರಿ ಇಲಾಖಾ ಸುದ್ದಿ

ಬೆಳ್ತಂಗಡಿ ಪ್ರಾ.ಸ.ಕೃಷಿ ಮತ್ತು ಗ್ರಾ. ಅಭಿವೃದ್ಧಿ ಬ್ಯಾಂಕ್ ನ ವ್ಯವಸ್ಥಾಪಕರಾದ ಕೆ. ಗಿರಿಧರರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ಕಳೆದ 41ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಮಾ.೩೧ರಂದು ನಿವೃತ್ತಿಗೊಳ್ಳುತ್ತಿರುವ ಕೆ. ಗಿರಿಧರ ಇವರ ಬೀಳ್ಕೊಡುಗೆ ಸಮಾರಂಭವು ಮಾ.27ರಂದು ಬೆಳ್ತಂಗಡಿ ಪ್ರಾ.ಸ.ಕೃ. ಮತ್ತು ಗ್ರಾ.ಅ. ಬ್ಯಾಂಕ್ ನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್ ನ ಆಡಳಿತಾಧಿಕಾರಿ ಎಸ್.ಎಂ ರಘು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಭಾಗವಹಿಸಿ ಕೆ. ಗಿರಿಧರ ಅವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು. ಕೆ.ಗಿರಿಧರ ರವರಿಗೆ ಗಣ್ಯರ ಸಮ್ಮುಖದಲ್ಲಿ ಗೌರವ ಸಮರ್ಪನೆ ನಡೆಯಿತು. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಜಿಲ್ಲಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರಿಂದ ನೆನಪಿನ ಕಾಣಿಕೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಮಂಗಳೂರು/ ಉಡುಪಿ ಜಿಲ್ಲಾ ವ್ಯವಸ್ಥಾಪಕ ದಿಲೀಪ್, ಕ.ರಾ.ಕೃ. ಮತ್ತು ಗ್ರಾ.ಬ್ಯಾ. ಚಿಕ್ಕಮಗಳೂರು ಜಿಲ್ಲಾ ವ್ಯವಸ್ಥಾಪಕ ಪುಟ್ಟರಾಜು, ಮಾಜಿ ನಿರ್ದೇಶಕ ರಾಜಶೇಖರ್ ಜೈನ್, ಸಹಕಾರ ಸಂಘದ ನಿಬಂಧಕ ರಮೇಶ್, ಮಾಜಿ ಅಧ್ಯಕ್ಷರಾದ ಸೋಮನಾಥ್ ಬಂಗೇರ, ಈಶ್ವರ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆ. ಗಿರಿಧರರವರ ಪತ್ನಿ ಹರಿಣಾಕ್ಷಿ, ಮಕ್ಕಳಾದ ಗ್ರೀಷ್ಮಾ ಮತ್ತು ಮಿತ, ಮಾಜಿ ವ್ಯವಸ್ಥಾಪಕ ಜಗನ್ನಾಥ, ಮಾಜಿ ಅಧ್ಯಕ್ಷ ಪ್ರವೀಣ್, ಸಿಎ ಬ್ಯಾಂಕ್ ನ ವ್ಯವಸ್ಥಾಪಕ ಪ್ರಸಾದ್, ಮಾಜಿ ವ್ಯವಸ್ಥಾಪಕಿ ಪ್ರೇಮಾ, ಹಿರಿಯ ಸಹೋದ್ಯೋಗಿಗಳು, ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶರುಗಳು, ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಪ್ರಮೀಳಾ ಮತ್ತು ಅಶ್ವಿನಿ ಪ್ರಾರ್ಥಿಸಿದರು. ರೂಬನ್ ರಾಕೇಶ್ ಸ್ವಾಗತಿಸಿದರು. ಪ್ರಶಾಂತ್ ನಿರೂಪಿಸಿ, ಶ್ರೀಕಾಂತ್ ವಂದಿಸಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ

Suddi Udaya

ಸೋಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮ

Suddi Udaya

ಕಬಡ್ಡಿ ಪಂದ್ಯಾಟದಲ್ಲಿ ಸುಲ್ಕೇರಿಯ ಶಶಿಕಾಂತ್ ರವರ ವಿಶೇಷ ಸಾಧನೆ: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

Suddi Udaya

ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾ.ಪಂ.ಕ್ಕೆ ಗೌರವ

Suddi Udaya
error: Content is protected !!