July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಮಾ.30-ಎ.2: ಪಿಲ್ಯ ಬರಯ-ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬೆಳ್ತಂಗಡಿ: ಪಿಲ್ಯ ಗ್ರಾಮದ ಬರಯ-ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ ಮಾ. 30 ರಿಂದ ಎ.2 ರವರೆಗೆ ಅನುವಂಶೀಯ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಕೇಳ್ಕರ್ ಇವರ ನೇತೃತ್ವದಲ್ಲಿ ನಡೆಯಲಿದೆ.

ಮಾ.30 ರಂದು ಬೆಳಿಗ್ಗೆ ಧ್ವಜಾರೋಹಣ, ಸಂಜೆ ನಾದ ಮಾಧುರ್ಯ ಸೂಳಬೆಟ್ಟು ಇವರಿಂದ ಸಂಗೀತ ಕಾರ್ಯಕ್ರಮ, ಶ್ರೀಕೃಷ್ಣ ಕುಣಿತ ಭಜನಾ ಸಂಘ ಸೂಳಬೆಟ್ಟು ಬರಾಯ ಇವರಿಂದ ಭಜನಾ ಕಾರ್ಯಕ್ರಮ,ರಾತ್ರಿ ದೇವರ ಉತ್ಸವ, 31 ರಂದು ಸಂಜೆ ಲಲಿತಾ ವಿಷ್ಣು ಮಹಿಳಾ ಭಜನಾ ಸಂಘ ಸೂಳಬೆಟ್ಟು-ಫಂಡಿಜೆ ಇವರಿಂದ ಭಜನಾ ಕಾರ್ಯಕ್ರಮ, ಯಕ್ಷಗಾನ ಕಲಾವಿದರಿಂದ ತುಳು ಯಕ್ಷ ತೆಲಿಕೆ, ರಾತ್ರಿ ವಸಂತ ಪೂಜೆ, ದರ್ಶನ ಬಲಿ; ಎ.1 ರಂದು ಬೆಳಿಗ್ಗೆ ಗಣಪತಿ ದೇವರಿಗೆ ಅಥರ್ವಶೀರ್ಷದೊಂದಿಗೆ ಅಭಿಷೇಕ, ರಾತ್ರಿ ವಸಂತ ಪೂಜೆ, ಭೂತಬಲಿ, ಕವಾಟಬಂಧನ; 2 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಪುರುಷಸೂಕ್ತ ಹವನ, ರಥ ಕಲಶ, ಉತ್ಸವ, ಸಂಜೆ ಸನ್ಮಾನ ಕಾರ್ಯಕ್ರಮ, ರಾತ್ರಿ ನೃತ್ಯ ವೈವಿಧ್ಯ, ಕಿರು ನಾಟಕ, ಜಾದು ಪ್ರದರ್ಶನ, ನಾಲೆರು ನಾರಾಯಣೆ ತುಳು ನಾಟಕ, ಅಳದಂಗಡಿ ಅರಮನೆ ಡಾl ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ದೇವರ ಉತ್ಸವ, ವಸಂತಕಟ್ಟೆ ಪೂಜೆ, ಕೊಡಮಣಿತ್ತಾಯ ದೈವದ ನೇಮ, ಮಹಾರಥೋತ್ಸವ, ದೈವ-ದೇವರ ಭೇಟಿ ; ಎ.3 ರಂದು ಅವಭೃತೋತ್ಸವ ,ಓಕುಳಿ, ಧ್ವಜಾವರೋಹಣ, ಕೃಷ್ಣ- ಸತ್ಯಭಾಮಾ ಸಂವಾದ, ಸಂಪ್ರೋಕ್ಷಣೆ ನಡೆಯಲಿದೆ.

ಜಾತ್ರಾ ಸಂದರ್ಭ ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ ಎಂದು ಆಡಳಿತ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ ಸುಲ್ಕೇರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಮೊದಲ ಅಧಿವೇಶನ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಕೊಕ್ಕಡ: ನೆಲ್ಯಾಡಿ ಸಂತ ಜಾರ್ಜ್ ಪ.ಪೂ. ಕಾಲೇಜು ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

Suddi Udaya

ನಿಡಿಗಲ್ ನಲ್ಲಿ ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ: ಮಹಿಳೆ ಜಾರಿ ಬಿದ್ದಾಗ ತಲೆ ಭಾಗ ಸೀಳಿ ಹಾಕಿ ,ಕೈಗೆ ಗಂಭೀರ ಗಾಯಗೊಳಿಸಿದ ನಾಯಿ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಶೇ.95.25

Suddi Udaya

ಫೆ. 3-4: ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!