September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಏ.6 ರಿಂದ ಎಕ್ಸೆಲ್ ನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉಚಿತ ಎಕ್ಸೆಲ್ ಕನೆಕ್ಟ್ ತರಗತಿಗಳು ಪ್ರಾರಂಭ:ತಾಲೂಕಿನ ಎಲ್ಲಾ ಭಾಗಗಳಿಂದ ಉಚಿತ ಬಸ್ ವ್ಯವಸ್ಥೆ,ಅನುಭವಿ ಹಾಗೂ ಪರಿಣಿತ ಪ್ರಾಧ್ಯಾಪಕರಿಂದ ತರಗತಿ;ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ತರಗತಿಗಳಿಗೆ ಹಾಜರಾಗಬಹುದು: ಸುಮಂತ್ ಕುಮಾರ್ ಜೈನ್

ಗುರುವಾಯನಕರೆ: ಹಲವು ವಿದ್ಯಾರ್ಥಿಗಳನ್ನು ರಾಷ್ಟ್ರದ ಅತ್ಯುನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾದ ಏಮ್ಸ್ , ಜಿಪ್ಮಾರ್ ,ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಐಟಿ, ಎನ್ ಐಐಟಿ ಸೇರಿ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆರಿಟ್ ಕೋಟಾದಡಿ ಸೀಟ್ ತೆಗೆಸಿಕೊಟ್ಟ ಹಿರಿಮೆಯ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಏಪ್ರಿಲ್ ತಿಂಗಳ 6ರಿಂದ ಎಸ್ ಎಸ್ ಎಲ್ ಸಿ ತರಗತಿ ಪರೀಕ್ಷೆ ಬರೆದು ಮುಗಿಸಿದವರಿಗೆ ಕನೆಕ್ಟ್ ಕ್ಲಾಸ್ ಗಳು ನಡೆಯಲಿವೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಶಾಲೆಯ ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ತರಗತಿಗಳಿಗೆ ಹಾಜರಾಗಬಹುದು . ನೀಟ್/ಜೆ ಇ ಇ ಮೈನ್ಸ್ ಮತ್ತು ಅಡ್ವಾನ್ಸ್/ ಸಿ ಇ ಟಿ/ ನಾಟಾ/ಎನ್ ಡಿ ಎ/ ಸಿ ಎ/ಸಿ ಎಸ್/ ಕ್ಲಾಟ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಹೋಗಲಿಚ್ಚಿಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫೌಂಡೇಶನ್ ತರಗತಿ ಇದಾಗಲಿದೆ.ಸಂಪೂರ್ಣ ಉಚಿತವಾಗಿ ನಡೆಯಲಿರುವ ಎಕ್ಸೆಲ್ ಕನೆಕ್ಟ್ ತರಗತಿಗಳು ಎಕ್ಸೆಲ್ ಬೆಳಕು ಫೌಂಡೇಶನ್ ನ ಸಮಾಜಮುಖಿ ಚಟುವಟಿಕೆಗಳ ಪೈಕಿ ಒಂದಾಗಿದೆ .

ಕನೆಕ್ಟ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಗಂಟೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅತ್ಯಂತ ಅನುಭವಿ ಹಾಗೂ ಪರಿಣಿತ ಪ್ರಾಧ್ಯಾಪಕರಿಂದ ತರಗತಿ ಒದಗಿಸಲಾಗುವುದು . ಮಧ್ಯಾಹ್ನದ ಊಟ ಉಚಿತವಾಗಿರುತ್ತದೆ. ತಾಲೂಕಿನ ಎಲ್ಲಾ ಭಾಗಗಳಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ . ಹೆಚ್ಚಿನ ಮಾಹಿತಿಗೆ 9880899769/ 8867242769 ಜಂಗಮವಾಣಿಗೆ ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದರು.

Related posts

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ ಹಾಗೂ ರಾಜ್ಯಕ್ಕೆ 5ನೇ ಸ್ಥಾನ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗೀತಾ ಗಾಯನ ಸ್ಪರ್ಧೆ

Suddi Udaya

ಕೊಕ್ರಾಡಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ನಿವೃತ್ತ ಶಿಕ್ಷಕರಿಗೆ-ಶಾಖ ಸಿಬ್ಬಂದಿಗಳಿಗೆ ಗೌರವ ಪುರಸ್ಕಾರ ಸಮಾರಂಭ

Suddi Udaya

ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ’ ಎಂಬ ವಿಚಾರಸಂಕಿರಣ

Suddi Udaya

ಪುದುವೆಟ್ಟು: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

Suddi Udaya
error: Content is protected !!