26.5 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು-ಬಜಿರೆ – ಎ. 2: ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ – ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಚಾವಣಿ ಲೋಕಾರ್ಪಣೆ ಹಾಗೂ ಕೊರಗಜ್ಜ ದೈವದ ನೇಮೋತ್ಸವ

ಬಜಿರೆ: ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು-ಬಜಿರೆ ಇಲ್ಲಿಯ ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ ಹಾಗೂ ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಚಾವಣಿ ಲೋಕಾರ್ಪಣೆ ಮತ್ತು ಕೊರಗಜ್ಜ ದೈವದ ನೇಮೋತ್ಸವವು ಎ.2ರಂದು ಜರಗಲಿದೆ ಎಂದು ಸೇವಾ ಟ್ರಸ್ಟ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಬಜಿರೆ ಗ್ರಾಮದ ಬಾಡಾರು ಎಂಬ ಊರಲ್ಲಿ ಸುಮಾರು 450 ವರ್ಷಕ್ಕಿಂತ ಹಿಂದಿನಿಂದಲೂ ದೈವದ ಸೇವೆ ನಡೆಸಿಕೊಂಡು ಬರಲಾಗುತ್ತಿದ್ದು, ಪ್ರತಿ ವರ್ಷ ಕೊರಗಕಲ್ಲು ಕೊರಗಜ್ಜ ದೈವಕ್ಕೆ ಊರ ಹತ್ತು ಸಮಸ್ತರು ಆಗೇಲು ಹಾಗೂ ಕೊರಗಜ್ಜನಿಗೆ ನರ್ತನ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೊರಗಜ್ಜ ದೈವವು ಬಾಡಾರು ಎಂಬ ಊರಲ್ಲಿ ಇದ್ದರೂ ತನ್ನ ಪ್ರದೇಶಕ್ಕೆ ತನ್ನ ಕಲ್ಲಿನ ಹೆಸರನ್ನು ಇಟ್ಟುಕೊಂಡು ಕೊರಗಕಲ್ಲು ಕೊರಗಜ್ಜ ಎಂಬ ನಾಮಾಂಕಿತದಿಂದ ಭಕ್ತರಿಂದ ಕರೆಸಿಕೊಂಡು ಕಾರ್ಣಿಕದ ಶಕ್ತಿಯಾಗಿ ನೆಲೆಯಾಗಿದ್ದಾರೆ.

15 ವರ್ಷಕ್ಕಿಂತ ಹಿಂದಿನವರೆಗೆ ಕೊರಗಜ್ಜ ದೈವವು ಬಚ್ಚಿರ್ ಎಂಬ ಮರದ ಬುಡದಲ್ಲಿ ನೆಲದಮೇಲೆ ಕಲ್ಲಿನಲ್ಲಿ ನೆಲೆ ನಿಂತು ಭಕ್ತರಿಂದ ಸೇವೆಯನ್ನು ಸ್ವೀಕರಿಸಿಕೊಂಡು ಬರುತ್ತಿದ್ದು, 15 ವರ್ಷದ ಹಿಂದೆ ದೈವದ ಅಭಯದ ನುಡಿಯಂತೆ, ಚಿಕ್ಕ ಕಟ್ಟೆ ಮಾಡಿ ಆರಾಧಿಸಿಕೊಂಡು ಬರಲಾಗುತ್ತಿದೆ. ಬಳಿಕ ಕೊರಗಜ್ಜನಿಗೆ ಒಂದು ಗುಡಿಯನ್ನು ನಿರ್ಮಿಸಲಾಗಿದ್ದು, ದೈವದ ಕಾರಣಿಕದಿಂದ ಈಗ ಬಾಡಾರು ಹತ್ತು ಸಮಸ್ತರ ಕೈಯಿಂದ ಸೇವೆಯನ್ನು ಸ್ವೀಕರಿಸಿಕೊಂಡು ಬರುತ್ತಿದ್ದಾರೆ. ದ.ಕ ಜಿಲ್ಲೆಯ ಹಲವು ತಾಲೂಕುಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಸುಮಾರು 10 ವರ್ಷದ ಹಿಂದೆ ಕೊರಗಜ್ಜ ದೈವದ ಗುಡಿಯು ನವೀಕರಣಗೊಂಡಿದೆ. ಈ ಸಾನಿಧ್ಯದಲ್ಲಿ ಪ್ರತಿ ಸಂಕ್ರಮಣದಂದು ಸಂಕ್ರಾAತಿ ಸೇವೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಮೂಲಭೂತ ಸೌಕರ್ಯದ ಕೊರತೆ ಕಾಡುತ್ತಿದ್ದು, ಇದಕ್ಕಾಗಿ ಊರಿನ ಜನರು ಕೊರಗಜ್ಜ ದೈವದ ಕಟ್ಟೆಯನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಮೇಲ್ಚಾವಣಿಯನ್ನು ಮಾಡುವುದೆಂದು ಸಂಕಲ್ಪಮಾಡಿದ್ದಾರೆ.

ಅಲ್ಲದೆ ರಾಜ ಗುಳಿಗ ದೈವಕ್ಕೆ ಕಟ್ಟೆ, ಕೊರಗಜ್ಜ ದೈವ ಮತ್ತು ರಾಜ ಗುಳಿಗ ದೈವಗಳಿಗೆ ಮೇಲ್ಚಾವಣಿ ಮತ್ತು ಸಾನಿಧ್ಯಕ್ಕೆ ಆಗತ್ಯ ಬೇಕಾಗಿರುವ ಮೂಲಸೌಕರ್ಯಗಳನ್ನು ಒದಗಿಸಲು ಅಂದಾಜು ಸುಮಾರು ರೂ.40 ಲಕ್ಷ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ದಿನ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಕೆಲಸ ಭರದಿಂದ ಸಾಗುತ್ತಿದೆ. ಎ.2ರಂದು ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ ಹಾಗೂ ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಚಾವಣಿ ಲೋಕಾರ್ಪಣೆ ಮತ್ತು ಕೊರಗಜ್ಜ ದೈವದ ನೇಮೋತ್ಸವವು ವಿಜೃಂಭಣೆಯಿಂದ ಜರಗಲಿದೆ.

ಇದೀಗ ಮೇಲ್ಚಾವಣಿಯ ಕೆಲಸ ಕಾರ್ಯಗಳನ್ನು ಊರ ಭಕ್ತರು ಸೇರಿ ರಾತ್ರಿ ಹಗಲೆನ್ನದೆ ಭಕ್ತಿಯಿಂದ ದುಡಿಯುತ್ತಿದ್ದಾರೆ.

Related posts

ಪಟ್ರಮೆ: ಅಲಂಗೂರು ನಿವಾಸಿ ಶ್ರೀಧರ ಗೌಡ (ಕಾಂತಪ್ಪಗೌಡ) ನಿಧನ

Suddi Udaya

ಪ್ರಸನ್ನ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಸಂಚಿತಾ ಹಜ್ರಾ ಹಾಗೂ ಶ್ರೇಯಾ ಸಿದ್ದಪ್ಪ ರಿಗೆ ಅತ್ಯುತ್ತಮ ರ್‍ಯಾಂಕ್

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ 5 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya

ಧರ್ಮಸ್ಥಳ ಶಾಂತಿವನದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ: ಕರ್ತವ್ಯ ನಿಷ್ಠೆಯೇ ದೇಶ ಸೇವೆ: ಕರ್ನಲ್ ಎಂ.ಜಿ ಜಯರಾಮ್

Suddi Udaya

ಪದ್ಮುಂಜ : ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಕಾಮಗಾರಿಗಳ ವೀಕ್ಷಣೆ

Suddi Udaya

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಪೊಸಳ್ಳಿ ಬಿ.ಸಿ.ರೋಡು: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!