September 6, 2026
ಧಾರ್ಮಿಕ

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿಸಂಭ್ರಮದ ದೇವರ ದರ್ಶನ ಬಲಿ ಉತ್ಸವ

ನಡ: ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.27ರಿಂದ ಆರಂಭಗೊಂಡಿದ್ದು, ಮಾ.31 ಮಂಗಳವಾರದಂದು ದೇವರ ದರ್ಶನ ಬಲಿ ಉತ್ಸವವು ವೈಭವ ಪೂರ್ಣವಾಗಿ ಜರುಗಿತು.

ಮಾ.30 ನಿನ್ನೆ ಬೆಳಿಗ್ಗೆ ಸೊಡರ ಬಲಿ ಉತ್ಸವ ನಡೆಯಿತು. ರಾತ್ರಿ ದೇವರ ಕರೆಕಟ್ಟೆ ಪೂಜೆ ಜರುಗಿತು. ರಾತ್ರಿ ಅಭಿನಯ ಕಲಾವಿದರು ಉಡುಪಿ ಇವರಿಂದ “ಶಾಂಭವಿ” ಹಾಸ್ಯಮಯ ನಾಟಕ ನಡೆಯಿತು. ಮಾ. 31ರಂದು ಬೆಳಿಗ್ಗೆ ದೇವರ ದರ್ಶನ ಬಲಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಸಂಜೆ ಪುಷ್ಪರಥೋತ್ಸವ, ನೃತ್ಯಬಲಿ, ರಥಕಟ್ಟೆ ಪೂಜೆ, ಮಹಾಪೂಜೆ ಭೂತಬಲಿ ಶಯನೋತ್ಸವ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ರಾತ್ರಿ ಸಂಗಮ ಕಲಾವಿದರು ಉಜಿರೆ ಇವರಿಂದ “ಮಾಸ್ಟ್ರು ಮನಿಪುಜೆರ್” ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಡಾ. ಸತೀಶ್ವಂದ್ರ ಸುರ್ಯಗುತ್ತು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರಾದ ಶರತ್‌ಕೃಷ್ಣ ಪಡ್ವೆಟ್ನಾಯ, ಸುರ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಧನಂಜಯ ಅಜ್ರಿ ನಡಗುತ್ತು, ಬಿ. ಮುನಿರಾಜ ಅಜ್ರಿ, ಸುಕೀತಿ೯ ಅಜ್ರಿ ಚೆನ್ನೈ, ಸಂಗ್ರಾಮ್ ಜೈನ್ ಸುಯ೯, ಆಶ್ರೇಯ್ ಅಜ್ರಿ, ವೈಶಾಕ್ ಬಲ್ಲಾಳ್, ಪ್ರಧಾನ ಅರ್ಚಕ ಪದ್ಮನಾಭ ತಂತ್ರಿ, ದೇವಸ್ಥಾನದ ವ್ಯವಸ್ಥಾಪಕ ಪ್ರಸಾದ್ ಮತ್ತಿರರು ಉಪಸ್ಥಿತರಿದ್ದರು.

Related posts

ಶಿರ್ಲಾಲು: ಗೆಜ್ಜೆಗಿರಿ ಯಾತ್ರಿ ನಿವಾಸ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಡಿ.28-ಜ.2: ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ

Suddi Udaya

ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್‌ನಲ್ಲಿ ಸಂಭ್ರಮದ ರಕ್ಷಾಬಂಧನ

Suddi Udaya

ಮಾರ್ಚ್ 1-9ರವರೆಗೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಬ್ರಹ್ಮಕಲಶೋತ್ಸವ ಸಮಿತಿಯಿಂದ ಮುಜರಾಯಿ ಸಚಿವರ ಭೇಟಿ

Suddi Udaya

ಕೇಳ್ತಾಜೆ ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಬಕ್ರೀದ್ ಆಚರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಾನಕ್ಕೆ ಶಿಲಾಮಯ ಧ್ವಜಸ್ತಂಭ: ಕಿಲ್ಲೂರು ಪೇಟೆಯಿಂದ ಕಾಲ್ನಡಿಗೆಯ ಮೆರವಣಿಗೆ

Suddi Udaya
error: Content is protected !!