ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಬಜಿರೆ: ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು ಶ್ರೀರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ, ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಛಾವಣಿ ಲೋಕಾರ್ಪಣೆ

ಬಜಿರೆ: ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು-ಬಜಿರೆ ಇಲ್ಲಿಯ ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ ಹಾಗೂ ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಛಾವಣಿ ಲೋಕಾರ್ಪಣೆ ಮತ್ತು ಕೊರಗಜ್ಜ ದೈವದ ನೇಮೋತ್ಸವವು ಎ.೨ರಂದು ಜರುಗಿತು. ಲಕ್ಷ್ಮೀನಾರಾಯಣ ಅಸ್ರಣ್ಣರ ಪೌರೋಹಿತ್ಯದಲ್ಲಿ ವೈಧಿಕ ಕಾರ್ಯಕ್ರಮ ನೇರವೇರಿತು. ಬೆಳಗಾಂ ಉದ್ಯಮಿ ಸಾಯಿ ಕಿರಣ್ ಸಿ. ಗೋಕರ್ಣ ಅವರು ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಛಾವಣಿ ಮೇಲ್ಛಾವಣಿಯನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಕೊರಗಕಲ್ಲು ಕೊರಗಜ್ಜ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಹೆಗ್ಡೆ ಸಭಾಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ವೇಣೂರು ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಬೆಂಗಳೂರಿನ ಉದ್ಯಮಿ ಜಗದೀಶ್ ಎನ್., ಪ್ರಗತಿಪರ ಕೃಷಿಕ ಪ್ರಭಾಕರ ಹೆಗ್ಡೆನಿಟ್ಟಡೆಗುತ್ತು, ಮಂಗಳೂರು ಡೆವಲಪ್‌ಮೆಂಟ್ ಆಫೀಸರ್ ರಾಮ್ ಕುಮಾರ್, ಅಜಿತ್ ಕುಮಾರ್, ವೇಣೂರು ನಮನ ಕ್ಲಿನಿಕ್‌ನ ಡಾ| ಶಾಂತಿಪ್ರಸಾದ್ ಇಂದ್ರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ, ಬೆಳ್ತಂಗಡಿ ನ್ಯಾಯವಾದಿ ಪ್ರಸಾದ್ ಕೆ.ಎಸ್., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಶೋಕ್ ಜಿ., ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಆಕಾಶ್ ಶೆಟ್ಟಿ, ಮಿತ್ತಬೆಟ್ಟು ವನದುರ್ಗಾ ದೇವಸ್ಥಾನದ ಅಧ್ಯಕ್ಷ ಎನ್. ಮೋಹನ್ ಹೆಗ್ಡೆ, ಪಿಲಾತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಾರದಾ, ವೇಣೂರು ಗ್ರಾ.ಪಂ. ಸದಸ್ಯ ಸುನೀಲ್ ಕುಮಾರ್, ಕುಕ್ಕೇಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರು, ಕುಂಞೋಡಿ, ಲಕ್ಷ್ಮೀನಾರಾಯಣ ಅಸ್ರಣ್ಣ, ಸುರೇಶ್ ಕುಮಾರ್ ಅರಿಗ ಪೆರ್ಮಾಣುಗುತ್ತು, ವಿಜಯ ಪೂಜಾರಿ ಹೊಸಪಟ್ಣ ಗುತ್ತು, ಪಿಲಾತಬೆಟ್ಟು ಸಿ.ಎ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ ಹೆಗ್ಡೆ ಮತ್ತು ಮೇಲ್ಚಾವಣಿಯ ಕೆಲಸ ನಿರ್ವಹಿಸಿದ ಮಹಮ್ಮದ್ ಶರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಯಿ ಕಿರಣ್ ಸಿ. ಗೋಕರ್ಣ, ದೈವನರ್ತಕ ರಾಮಣ್ಣ, ನಾದಸ್ವರ ವಾದಕ ಸಂತೋಷ್, ದೈವಚಾರಕ ಪ್ರಸಾದ್, ಪ್ರಶಾಂತ್ ಹಾಗೂ ಸಹಕರಿಸಿದವರನ್ನು ಸನ್ಮಾನಿಸಲಾಯಿತು.

ವೇಣೂರು ಗ್ರಾಮ ಪಂಚಾಯತ್ ಸದಸ್ಯ ಲೋಕಯ್ಯ ಪೂಜಾರಿ ಕಂಗಿತ್ತಿಲು ಸ್ವಾಗತಿಸಿ, ಸತೀಶ್ ಈದು ನಿರೂಪಿಸಿದರು. ಕೊರಗಜ್ಜ ದೈವವು ಬಾಡಾರು ಎಂಬ ಊರಲ್ಲಿ ಇದ್ದರೂ ತನ್ನ ಪ್ರದೇಶಕ್ಕೆ ತನ್ನ ಕಲ್ಲಿನ ಹೆಸರನ್ನು ಇಟ್ಟುಕೊಂಡು ಕೊರಗಕಲ್ಲು ಕೊರಗಜ್ಜ ಎಂಬ ನಾಮಾಂಕಿತದಿಂದ ಭಕ್ತರಿಂದ ಕರೆಸಿಕೊಂಡು ಕಾರ್ಣಿಕದ ಶಕ್ತಿಯಾಗಿ ನೆಲೆಯಾಗಿದ್ದು ಕೊರಗಜ್ಜ ದೈವದ ನೇಮೋತ್ಸವವು ಇದೀಗ ಜರಗಲಿದೆ.

ಈ ಸಂದರ್ಭ ಬಜಿರೆ ಬಾಡರು ಕೊರಗಕಲ್ಲು ಸ್ವಾಮಿ ಶ್ರೀ ಕೊರಗಜ್ಜ ಸೇವಾ ಸಮಿತಿಯ ಉಪಾಧ್ಯಕ್ಷ ಉಮೇಶ್ ಪೂಜಾರಿ ತಿಮರಡ್ಡ, ಮುರಳೀಧರ ಹೆಗ್ಡೆ ಪೊಂಗರ್‌ತ್ಯಾರು, ಕಾರ್ಯದರ್ಶಿ ಸಂದೀಪ್ ಹೆಗ್ಡೆ, ಕೋಶಾಧಿಕಾರಿ ದಿನೇಶ್ ಬಾಡಾರು, ಹಾಗೂ ಸರ್ವಸದಸ್ಯರು ಮತ್ತು ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

Related posts

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಆಗ್ರಹ

Suddi Udaya

ಇ-ಸ್ವತ್ತು ತಂತ್ರಾಂಶದಲ್ಲಿ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ತಿದ್ದುಪಡಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಅವಕಾಶ ಕಲ್ಪಿಸುವಂತೆ ಪಂಚಾಯತ್ ರಾಜ್ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಉಜಿರೆಯಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ನ 9ನೇ ಸ್ವಚ್ಛ ಭಾರತ್ ಸ್ವಚ್ಛತಾ ಕಾರ್ಯಕ್ರಮ: ಮುಂದಿನ ಪೀಳಿಗೆಗೆ ಅತ್ಯುತ್ತಮ ಕೊಡುಗೆ ಎಂದರೆ ಸ್ವಚ್ಛ ಪರಿಸರ ಮಾತ್ರ: ಡಾ. ಎಸ್.ಆರ್. ಹರೀಶ್ ಆಚಾರ್ಯ

Suddi Udaya

ಮಚ್ಚಿನ: ಹಿಂದೂ ರುದ್ರ ಭೂಮಿಯ ಕಾಮಗಾರಿಗೆ ಮಂಜೂರಾದ ಅನುದಾನವನ್ನು ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡರಿಂದ ರೂ 2.5 ಲಕ್ಷ ಹಸ್ತಾಂತರ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬೆಳ್ತಂಗಡಿ ಕೌಶಲ್ಯಭಿವೃದ್ಧಿ ತರಬೇತಿಯಡಿ ಬಟ್ಟೆ ಚೀಲ ಮತ್ತು ಎಂಬ್ರಾಯಿಡರಿ ಉಚಿತ ತರಬೇತಿ ಕಾರ್ಯಾಗಾರ

Suddi Udaya

ಕುತ್ಲೂರು: ಪುನರ್ವಸತಿ ಹೊಂದಿರುವ ಫಲಾನುಭವಿಗಳಿಗೆ ಉಚಿತ ಕೃಷಿ ಉಪಕರಣಗಳ ವಿತರಣೆ

Suddi Udaya
error: Content is protected !!