September 6, 2026
ಶುಭಾರಂಭಸಂಘ-ಸಂಸ್ಥೆಗಳು

ಧರ್ಮಸ್ಥಳದಲ್ಲಿ ಸೀರೆಗಳ ವಿಶೇಷ ಮಳಿಗೆ “ಸುನೀಲ್ ಸಿಲ್ಕ್ ಸಾರೀಸ್” ಶುಭಾರಂಭ-ಭಾರತೀಯ ಪರಂಪರೆಯಲ್ಲಿ ಸೀರೆಗೆ ವಿಶೇಷ ಸ್ಥಾನಮಾನವಿದೆ: ಶ್ರದ್ದಾ ಅಮಿತ್-ವಿನೂತನ ಶೈಲಿಯ, ಹತ್ತಾರು ಬಗೆಯ, ಉತ್ತಮ ಕಲೆಕ್ಷನ್ ನೊಂದಿಗೆ ಸೀರೆಗಳು ಲಭ್ಯ

ಧರ್ಮಸ್ಥಳ: ಇಲ್ಲಿನ ಕಲ್ಲೇರಿ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಸುನೀಲ್ ಸಿಲ್ಕ್ ಸಾರೀಸ್ ಇದರ ಶುಭಾರಂಭವು ಎ.5ರಂದು ನಡೆಯಿತು.

ನೂತನ ಸಂಸ್ಥೆಯ ದೀಪ ಪ್ರಜ್ವಲನೆಯನ್ನು ಬೆಂಗಳೂರು ಕ್ಷೇಮವನದ ಸಿಇಓ ಶ್ರದ್ದಾ ಅಮಿತ್ ನೇರವೇರಿಸಿ ಭಾರತೀಯ ಪರಂಪರೆಯಲ್ಲಿ ಸೀರೆಗೆ ವಿಶೇಷ ಸ್ಥಾನಮಾನವಿದೆ. ಈ ಸಂಸ್ಥೆಯು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭಕೋರಿದರು.

ಸೋನಿಯಾವರ್ಮ ನಿನಾದ ಉಜಿರೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಹಾಸ್ಟೆಲ್ ಮತ್ತು ಐಟಿ ವಿಭಾಗದ ಸಿಇಓ ಪೂರನ್ ವರ್ಮ, ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷ್ಣಸಿಂಗ್, ಧರ್ಮಸ್ಥಳ ಪಂಚಾಯತ್ ಪಿಡಿಓ ಗಾಯತ್ರಿ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

ಸಂಪತ್ ರೈ ಸ್ವಾಗತಿಸಿದರು. ಕಿರಣ್ ದೊಂಡೊಲೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಸುನಿಲ್ ಬೇಕಲ್ ಮತ್ತು ಪವಿತ್ರರವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Related posts

ಕಾರ್ಗಿಲ್ ವಿಜಯೋತ್ಸವಕ್ಕೆ ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ್ಸ್ ನಿಂದ ದೇಶಭಕ್ತಿಯ ನಮನ: ಬೈಕ್ ರ್ಯಾಲಿ ಮೂಲಕ ವೀರ ಯೋಧರ ತ್ಯಾಗ-ಬಲಿದಾನಕ್ಕೆ ಗೌರವ

Suddi Udaya

ಎ.25: ನಿವೃತ್ತ ಸರಕಾರಿ ನೌಕರರ ಸಂಘದ ರಜತ ಸಂಭ್ರಮ- ರೂ.40 ಲಕ್ಷ ವೆಚ್ಚದಲ್ಲಿ ಅಚ್ಚಿನಡ್ಕ ಕೆಲ್ಲಗುತ್ತು ನಲ್ಲಿ ನಿರ್ಮಿಸಲಾದ ಸಂಘದ ನೂತನ ಕಟ್ಟಡ ‘ಪ್ರಬುದ್ಧ’ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ ದಕ್ಷ ಜೈನ್ ರವರ ನೂತನ ವಕೀಲರ ಕಛೇರಿ ಶುಭಾರಂಭ

Suddi Udaya

ಧರ್ಮಸ್ಥಳ: ‘ಉನ್ನತಿ’ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್’ ಶುಭಾರಂಭ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ 9ನೇ ಭಾರಿ ಸಾಧನ‌ ಪ್ರಶಸ್ತಿ

Suddi Udaya

ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಹಲವಾರು ಕುಟುಂಬಗಳಿಗೆ ಇನ್ನೂ ವಿದ್ಯುತ್ ಭಾಗ್ಯವಿಲ್ಲ: ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಳದಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!