September 6, 2026
ಬೆಳ್ತಂಗಡಿಸಾಧಕರು

ಬೆಳಾಲು: ಎ.ಸಿ.ಪಿ. ನಾಯಕ ಸುಬೇದಾ‌ರ್ ಮೋಹನ್‌ ಗೌಡ ರವರಿಗೆ ಹುಟ್ಟೂರ ಅಭಿನಂದನೆ-ಉಜಿರೆಯಿಂದ ಸ್ವಾಗತ ಮೆರವಣಿಗೆ

ಬೆಳಾಲು : ಭಾರತ ದೇಶದ ರಕ್ಷಣಾ ವಿಭಾಗದ ಭೂ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಬೆಳಾಲು ಗ್ರಾಮದ ಕಾಡಂಡ ನಿವಾಸಿ ವೀರ ಯೋಧ ಎ. ಸಿ. ಪಿ. ನಾಯಕ ಸುಬೇದಾ‌ರ್ ಮೋಹನ ಗೌಡ ಇವರಿಗೆ ಬೆಳಾಲು ಗ್ರಾಮದ ವಿವಿಧ ಸಂಘ ಸಂಸ್ಥೆಗಳ, ಊರವರ ಸಹಕಾರದಲ್ಲಿ ಅಭಿನಂದನಾ ಸಮಿತಿ ವತಿಯಿಂದ ಎ.5ರಂದು ಹುಟ್ಟೂರ ಅಭಿನಂದನಾ ಸಮಾರಂಭ ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಯಲ್ಲಿ ನಡೆಯಿತು.

ಬೆಳಿಗ್ಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಿಂದ ಸ್ವಾಗತ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ಸ್ವಾಗತ ಮೆರವಣಿಗೆಯನ್ನು ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತಸರ ಶರತ್ ಕೃಷ್ಣ ಪಡುವೆಟ್ನಾಯ ನೆರವೇರಿಸಿದರು. ನಂತರ ಬೆಳಾಲಿನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಅಭಿನಂದನಾ ಸಮಿತಿಯ ಅಧ್ಯಕ್ಷ ಎಚ್‌. ಪದ್ಮ ಗೌಡ ವಹಿಸಿದ್ದರು.

ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತಸರ ಶರತ್‌ ಕೃಷ್ಣ ಪಡುವೆಟ್ನಾಯ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ನಿವೃತ್ತ ಯೋಧ ಡಾ.ಗೋಪಾಲಕೃಷ್ಣ ಕಾಂಚೋಡು, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಎನ್. ಪಿ. ತಂಗಚ್ಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಭಿನಂದನಾ ಸಮಿತಿಯ ಸಂಚಾಲಕ ದಾಮೋದರ ಗೌಡ ಸುರುಳಿ, ಕೋಶಾಧಿಕಾರಿ ಸುರೇಂದ್ರ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಧರ ತಂದೆ ಮೋನಪ್ಪ ಗೌಡ, ತಾಯಿ ಬೂದಮ್ಮ, ಪತ್ನಿ ಜಯಶ್ರೀ, ಮಾಜಿ ಸೈನಿಕರು, ಸೈನಿಕರು, ಬೆಳಾಲಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು, ಅಭಿಮಾನಿಗಳು, ಮೋಹನ ಗೌಡರ ಕುಟುಂಬ ವರ್ಗದವರು ಹಾಜರಿದ್ದರು.ಅಭಿನಂದನಾ ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ಸ್ವಾಗತಿಸಿದರು. ಚಿತ್ತಾರ, ಶ್ರೇಯ, ಸ್ವಾತಿ ಪ್ರಾರ್ಥನೆ ಗೈದರು. ಶಿಕ್ಷಕರಾದ ಮಹೇಶ್‌ ಪುಳಿತ್ತಡಿ ಮತ್ತು ಉಪನ್ಯಾಸಕ ಬೆಳಿಯಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಸುಲೈಮಾನ್ ಭೀಮಂಡೆ ವಂದಿಸಿದರು. ಉಮೇಶ್ ಮಂಜೊತ್ತು ಸನ್ಮಾನ ಪತ್ರ ವಾಚಿಸಿದರು. ವಿವಿಧ ಸಂಘ ಸಂಸ್ಥೆ, ಗಣ್ಯರು ಗೌರವಿಸಿ ಅಭಿನಂದನೆ ಸಲ್ಲಿಸಿದರು.

Related posts

ಪಾಲೇದು : ನಂಜ ಸಂಕಪ್ಪ ರೈ ನಿಧನ

Suddi Udaya

ಮಣ್ಣಿನ ಸಂಸ್ಕೃತಿ, ತುಳು ಜನಪದ ಸೊಗಡಿನೊಂದಿಗೆ ಅಭ್ಯಾಸ್ ಕಾಲೇಜಿನಲ್ಲಿ ಕೆಸರ್ದಕಲ ಸಂಭ್ರಮ

Suddi Udaya

ಗರ್ಡಾಡಿ ವಲಯದ ಮಹಿಳಾ ಜ್ಞಾನವಿಕಾಸದ ವಾರ್ಷಿಕೋತ್ಸವ

Suddi Udaya

ಮರೋಡಿ ಪಲಾರಗೋಳಿ ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸವ: ಸಾರ್ವಜನಿಕ ಶ್ರೀ ಶನಿಪೂಜೆ

Suddi Udaya

ಬಿ ಎಸ್ ವೈ ಅಭಿಮಾನೋತ್ಸವ ಸಮಾರಂಭಕ್ಕೆ ತೆರಳಿದ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ತಂಡ

Suddi Udaya

“ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಉತ್ಸವ – ಸಂಭ್ರಮ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!