September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುದಾನ: ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ

ಗೇರುಕಟ್ಟೆ: ಸರ್ಕಾರಿ ಪ್ರೌಢಶಾಲೆ ಗೇರುಕಟ್ಟೆ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರಾದ ಒಂದು ಲಕ್ಷ ರೂಪಾಯಿಗಳ ವಿಶೇಷ ಅನುದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವು ಏ.6 ರಂದುಯಶಸ್ವಿಯಾಗಿ ಜರುಗಿತು.

ಸಂಸ್ಥೆಯ ಉಪಪ್ರಾಂಶುಪಾಲರಾದ ಈಶ್ವರಿ ಕೆ. ಇವರು ಪ್ರಾಸ್ತಾವಿಕವಾಗಿ ಮಾತನಾಡಿ, “ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ತೋರುತ್ತಿರುವ ಕಾಳಜಿ ಅನನ್ಯವಾದುದು, ಯೋಜನೆಯ ವತಿಯಿಂದ ನಮ್ಮ ಶಾಲೆಗೆ ಒದಗಿಸಲಾದ ಒಂದು ಲಕ್ಷ ರೂಪಾಯಿಗಳ ಅನುದಾನದಲ್ಲಿ ದಾಸ್ತಾನು ಮತ್ತು ಕಂಪ್ಯೂಟರ್ ಕೊಠಡಿಗಳಿಗೆ ಶಟರ್, ಶಿಕ್ಷಕರ ಕೊಠಡಿಗೆ ಟೈಲ್ಸ್ ಅಳವಡಿಕೆ ಮತ್ತು ಎರಡು ಕೊಠಡಿಗಳ ಪೈಂಟಿಂಗ್ ಕಾರ್ಯವು ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಸಾಮಾಜಿಕ ಕಳಕಳಿಗೆ ನಾವು ಚಿರಋಣಿಯಾಗಿದ್ದೇವೆ” ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ತಾಲೂಕು ಯೋಜನಾಧಿಕಾರಿಗಳಾದ ಯಶೋಧರ್ ಇವರು ಮಾತನಾಡಿ “ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುದು ಪೂಜ್ಯ ಹೆಗ್ಗಡೆಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಯೋಜನೆಯು ಶಾಲೆಗಳ ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತಿದೆ. ಇದರ ಸದುಪಯೋಗವಾಗಲಿ” ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಗೋಪಾಲಗೌಡ, ಸದಸ್ಯರಾದ ರಾಜೇಶ್ ಕೊಜಂಬಿಲ, ಹನೀಫ್, ಜಯಂತಿ, ಸುಮಿತ್ರ ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ದಿನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಪತ್ರಕರ್ತ ಮನೋಹರ್ ಬಳೆಂಜ ಪುತ್ರಿ ದಿಯ ಎಂ ಕೊಟ್ಯಾನ್ ಆಯ್ಕೆ

Suddi Udaya

ಲೂಮೋಸ್ – ಟೆಸರಾಕ್ಟ್ ಫಿಲ್ಮ್ ಸೊಸೈಟಿ ವಾರ್ಷಿಕ ಸಮಾರೋಪ ; ನಮ್ಮ ಕಲ್ಪನೆಯೇ ನಮ್ಮ ಮಿತಿ: ಡಾ. ರಾಘವೇಂದ್ರ

Suddi Udaya

ಸಂತ ತೆರೇಸಾ ಪ್ರೌಢ ಶಾಲೆ ಬೆಳ್ತಂಗಡಿ 78 ನೇ ವರ್ಷದ ಸ್ವಾತಂತ್ರೋತ್ಸವ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ರೆಡ್ ಕ್ರಾಸ್ ಘಟಕ ಹಾಗೂ ಅತ್ಯುತ್ತಮ ರೆಡ್ ಕ್ರಾಸ್ ಜೂನಿಯರ್ ಕೌನ್ಸಿಲರ್ ಪ್ರಶಸ್ತಿ

Suddi Udaya

ಸಿ.ಎ ಪರೀಕ್ಷೆ: ಕತ್ತೋಡಿ ನಿವಾಸಿ ಅಕ್ಷಯ್ ಜೈನ್ ಉತ್ತೀರ್ಣ

Suddi Udaya

ಉಜಿರೆ: ಅನುಗ್ರಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!