ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಏ.9: ನಾವರದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿಯಿಂದ “ನಾಗರತಿ” ಯಕ್ಷಗಾನ

ನಾವರ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ನಾವರ ಇದರ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮೂಲಸ್ಥಾನ ಗೆಜ್ಜೆಗಿರಿ ಬಡಗನ್ನೂರು ಪುತ್ತೂರು ಇವರಿಂದ “ನಾಗರತಿ” ಎಂಬ ಯಕ್ಷಗಾನ ಎ.9ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪ್ರದರ್ಶನಗೊಳ್ಳಲಿದೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಶ್ರೀ ಗೆಜ್ಜೆಗಿರಿ ಮೇಳದ ಪ್ರಧಾನ ಸಂಚಾಲಕ ಪ್ರಪುಲ್ ಕುಮಾರ್ ಕಾರ್ಕಳ, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಮಿತಿ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಪ್ರಗತಿಪರ ಕೃಷಿಕ ಎಂ. ಗಂಗಾಧರ ಮಿತ್ತಮಾರು, ಲಯನ್ಸ್ ಕ್ಲಬ್ ನಿಯೋಜಿತ ವಲಯಾಧ್ಯಕ್ಷ ಲ. ದೇವದಾಸ್ ಶೆಟ್ಟಿ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಾನಂದ ಪೂಜಾರಿ ಕೊರಲ್ಲ, ನಾವರ ಶ್ರೀ ಗೆಜ್ಜೆಗಿರಿ ಬಯಲಾಟ ಸಮಿತಿ ಅಧ್ಯಕ್ಷ, ನಾಟಿ ವೈದ್ಯ ಬೇಬಿ ಪೂಜಾರಿ ಪುನ್ಕೆತ್ಯಾರು, ಎನ್. ರವಿರಾಜ್ ಹೆಗ್ಡೆ ನಾವರಗುತ್ತು ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ತಿಳಿಸಿದ್ದಾರೆ.

Related posts

ನಡ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಉಜಿರೆಯ ಶ್ರೀ ಧ.ಮಂ ಪ.ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಸಮಾರೋಪ ಸಮಾರಂಭ

Suddi Udaya

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ  ಪದ್ಮುಂಜ ಸಹಕಾರಿ ಸಂಘ: ಮಹಾಸಭೆಯಲ್ಲಿ ಶೇ. 12 ಡಿವಿಡೆಂಡ್ ಘೋಷಿಸಿದ ಸಂಘದ ಅಧ್ಯಕ್ಷ  ರಕ್ಷಿತ್ ಪಣೆಕ್ಕರ

Suddi Udaya

ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್‌ರ ಮಾತೃಶ್ರೀ ಸಿರಿಯಮ್ಮ ಹೊಸಂಗಡಿ ನಿಧನ

Suddi Udaya

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya

ಅಂಬರ ಮರ್ಲೆರ್” ರಿಟರ್ನ್ಸ್ ತುಳು ಧಾರಾವಾಹಿಯ ತಂಡಕ್ಕೆ ಶಾಸಕ ಹರೀಶ್ ಪೂಂಜರವರಿಂದ ಶುಭ ಹಾರೈಕೆ

Suddi Udaya
error: Content is protected !!