July 24, 2026
ಧಾರ್ಮಿಕ

ಶ್ರೀ ಕ್ಷೇತ್ರ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಥ ಸಮರ್ಪಣೆ:ಹಲೇಜಿ-ತನ್ನೋಜಿ  ಶ್ರೀ ಕ್ಷೇತ್ರದಲ್ಲಿ  ಶೋಭಾಯಾತ್ರೆಗೆ ಚಾಲನೆ

ಕಲ್ಲೇರಿ: 800 ವರ್ಷಗಳ ಇತಿಹಾಸವಿರುವ ಕರಾಯ ಗ್ರಾಮದ ಆರಾಧ್ಯಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬ್ರಹ್ಮರಥದ ಶೋಭಾಯಾತ್ರೆ ಎ.13 ರಂದು ಸೋಮವಾರ ಸಂಜೆ ನಡೆಯಿತು.

ಹಲೇಜಿ ಶ್ರೀ ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಬಳಿಯಿಂದ ವೈದಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರುಗಳಾದ ಶಾಸಕ ಹರೀಶ್ ಪೂಂಜಾ ಹಾಗೂ ನಾಗಾರ್ಜುನ್ ರಾವ್ ತೆಂಗಿನಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿದರು. ದಿ| ವಿಜಯ ಎನ್. ಬಂಗೇರ ಮತ್ತು ದಿ| ಕೆ. ನಾಣ್ಯಪ್ಪ ಬಂಗೇರ ಇವರ ಸ್ಮರಣಾರ್ಥವಾಗಿ ಮಕ್ಕಳ ಕೊಡುಗೆಯಾಗಿ ಬ್ರಹ್ಮರಥ ಅರ್ಪಿಸಲಾಯಿತು.

ಪೂರ್ಣಕುಂಭಸ್ವಾಗತ, ವೀರಗಾಸೆ, ಕೇರಳ ತೈಯಮ್, ಡೊಳ್ಳು ಕುಣಿತ, ವಾಯಲಿನ್, ಚೆಂಡೆ, ಭಜನ ತಂಡ, ಕೀಳು ಕುದರೆ, ವಾದ್ಯಗೋಷ್ಠಿಯಲ್ಲಿ ರಥವನ್ನು ದೇವಸ್ಥಾನಕ್ಕೆ ವೈಭವಪೂರ್ಣವಾಗಿ ತರಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ರಥದ ಜತೆಯಲ್ಲಿ ಹೆಜ್ಜೆ ಹಾಕಿದರು. ಅಲ್ಲಲ್ಲಿ ಬ್ರಹ್ಮರಥಕ್ಕೆ ಪುರ್ಷ್ಪಾಚನೆ ನಡೆಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತುಲ್ ಕುಮಾರ್ ಕೆ.ಎನ್.ಹಲೇಜಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ,  ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ಮೈರಾ ಹಾಗೂ ಜಯವಿಕ್ರಮ್ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ದುರ್ಗೇಶ್ ವಿ.ಕೆದಿಲಾಯ, ಕೋಶಾಧಿಕಾರಿ ಸಾಮ್ರಾಟ್ ಕರ್ಕೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್ ಸುಪ್ರಭಾತ ಕೊಲ್ಲಿ, ಉಪಾಧ್ಯಕ್ಷ ಯುವರಾಜ್ ಅನಾರು, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಉಪಾಧ್ಯಕ್ಷ ಸುನೀಲ್ ಅಣಾವು, ನಿದೇರ್ಶಕರಾದ
ಸುರೇಶ್ ಹೆಚ್ ಎಲ್, ರೋಹಿತ್,  ಪ್ರಮುಖರಾದ ಸುಧೀರ್ ಕೆ. ಎನ್., ಗುಣಾಕರ ಅಗ್ನಾಡಿ, ಪ್ರದೀಪ್ ಶೆಟ್ಟಿ, ಯೋಗೀಶ್ ಪೂಜಾರಿ ಕಡ್ತಿಲ,  ಪ್ರವೀಣ್ ಕುಪ್ಪೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಗೆಳೆಯರ ಬಳಗ35 ನೇ ವರುಷದ ಶ್ರೀ ಶಾರದಾ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ

Suddi Udaya

ಅ.15-22: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ಧರ್ಮಸ್ಥಳದಲ್ಲಿ 51ನೇ ವರ್ಷದ ಸಾಮೂಹಿಕ ವಿವಾಹ 201 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ

Suddi Udaya

ಕಾಜೂರು ರಹ್ಮಾನಿಯ್ಯ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್

Suddi Udaya

ನಾಳ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!