September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಕಡಿರುದ್ಯಾವರ ಉತ್ಸಾಹಿ ಗೆಳೆಯರ ಬಳಗ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ, ಉತ್ಸಾಹಿ ಟ್ರೋಫಿ-2026-ವಾಲಿಬಾಲ್ ಕ್ರೀಡಾಂಗಣದ ಹೈಮಾಸ್ಟ್ ಲೈಟಿಂಗ್ ಉದ್ಘಾಟನೆ

ಕಡಿರುದ್ಯಾವರ: ಉತ್ಸಾಹಿ ಗೆಳೆಯರ ಬಳಗ ಹೇಡ್ಯ ಕಡಿರುದ್ಯಾವರ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ, ಉತ್ಸಾಹಿ ಟ್ರೋಫಿ 2026 ಹಾಗೂ ವಾಲಿಬಾಲ್ ಕ್ರೀಡಾಂಗಣದ ಹೈ ಮಾಸ್ಟ್ ಲೈಟಿಂಗ್ ಉದ್ಘಾಟನಾ ಕಾರ್ಯಕ್ರಮವು ಏ.11ರಂದು ನಡೆಯಿತು.

ಶಾಸಕ ಹರೀಶ್ ಪೂಂಜ ರವರು ವಾಲಿಬಾಲ್ ಕ್ರೀಡಾಂಗಣದ ಹೈ ಮಾಸ್ಟ್ ಲೈಟ್ ಉದ್ಘಾಟನೆಯನ್ನು ನೆರವೇರಿಸಿದರು.ರತ್ನಾಕರ ಗೌಡ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಮಠ ಇದರ ಆಡಳಿತ ಮೊಕ್ತೇಸರರಾದ ಕಿಶೋರ್ ಕುಮಾರ್ ವಳಂಬ್ರ, ಕಡಿರುದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ಬಾಲಚಂದ್ರ ನಾಯಕ್ ಹೇಡ್ಯ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಆನಂದ ಗೌಡ ಬರಮೇಲು, ಜನಾರ್ಧನ ಗೌಡ ಉದ್ಧಾರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಮಾಜಿ ಸದಸ್ಯ ರಾಜೇಶ್ ಕೆ., ಕಡಿರುಡ್ಯಾವರ ವನದುರ್ಗ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಬೇಬಿ, ಅಂಗನವಾಡಿ ಕಾರ್ಯಕರ್ತೆ ಭಾರತಿ, ವಸಂತ ಗೌಡ, ಗಂಗಯ್ಯ ಗೌಡ ಉಪಸ್ಥಿತರಿದ್ದರು.

ಆನಂದ ಗೌಡ ಸ್ವಾಗತಿಸಿದರು. ಜನಾರ್ದನ ಕಾನರ್ಪ, ನಾರಾಯಣ ಪೂಜಾರಿ ನಿರೂಪಿಸಿದರು. ಬಾಲಚಂದ್ರ ನಾಯಕ್ ವಂದಿಸಿದರು.

ಫಲಿತಾಂಶ:
-ಪ್ರಥಮ ಬಹುಮಾನ ತ್ರಿಶೂಲ್ ಎಲೆಕ್ಟ್ರಾನಿಕ್ಸ್ ಮಾಲಕತ್ವದ ತ್ರಿಶೂಲ್ ಫ್ರೆಂಡ್ಸ್ ಹೇಡ್ಯ
-ದ್ವಿತೀಯ ಬಹುಮಾನ ಕಾಂಜಲ್ ಫ್ರೆಂಡ್ಸ್ ಕಾಂಜಲ್
-ತೃತೀಯ ಬಹುಮಾನ ತತ್ವಮಸಿ ಮಾಚಾರು ಎ
-ಚತುರ್ಥ ಬಹುಮಾನ ತತ್ವಮಸಿ ಮಾಚಾರು ಬಿ
-ಬೆಸ್ಟ್ ಅಟಾಕರ್ ತ್ರಿಶೂಲ್ ಪ್ರೆಂಡ್ಸ್ ತಂಡದ ಆಟಗಾರರಾದ ಚರಣ್ ಗೌಡ
-ಬೆಸ್ಟ್ ಪಾಸಾರ್ ಆಗಿ ತ್ರಿಶೂಲ್ ಫ್ರೆಂಡ್ಸ್ ತಂಡದ ಆಟಗಾರರಾದ ರಮಾನಂದ ರಂಜು
-ಆಲ್ ರೌಂಡರಾಗಿ ಕಾಂಜಲ್ ಫ್ರೆಂಡ್ಸ್ ಕಾಂಜಲ್ ತಂಡದ ಆಟಗಾರರಾದ ಜಿಯೋ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Related posts

ನಡ-ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ವ್ಯಕ್ತಿತ್ವ ವಿಕಸನದ ಕಾರ್ಯಾಗಾರ

Suddi Udaya

ಕಳಿಯ ಗ್ರಾ.ಪಂ. ವತಿಯಿಂದ ನ್ಯಾಯತರ್ಪು ಪರಿಮ ಬಳಿ ಉದ್ಯೋಗ ಖಾತರಿ ಯೋಜನೆಯಲ್ಲಿ ರಸ್ತೆ ಕಾಂಕ್ರೀಟಿಕರಣ

Suddi Udaya

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ದಿ| ಶಿವಾನಂದ ಬಳ್ಳಾಲ್‌ಬಾಗ್ ರವರಿಗೆ ನುಡಿನಮನ

Suddi Udaya

ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಉಪನ್ಯಾಸಕ ನಂದಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ನಿಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!