September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಕಲ್ಮಂಜ ಶ್ರೀ ಬದಿನಡೆ ಕ್ಷೇತ್ರದಲ್ಲಿ ಬ್ರಹ್ಮರ ಶಿಲೆ ಹಾಗೂ ನಾಗಶಿಲಾ ಬಿಂಬ ಪ್ರತಿಷ್ಠಾಪನೆ ಮತ್ತು ಕಲಶಾಭಿಷೇಕ

ಕಲ್ಮಂಜ: ಅಂತರಬೈಲ್‌ನ ಶ್ರೀ ಬದಿನಡೆ ಕ್ಷೇತ್ರದಲ್ಲಿ ಬ್ರಹ್ಮ ಹಾಗೂ ನಾಗದೇವರ ಪ್ರತಿಷ್ಠಾ ಮಹೋತ್ಸವವು ಎ10ರಂದು ಗುರುದೇವ ಮಠದ ಮಹಾಮಂಡಲೇಶ್ವರರಾದ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತೀಜಿ ಮಹಾರಾಜರ ಕೃಪಾಶೀರ್ವಾದಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ತಂತ್ರಿವರ್ಯರಾದ ವೇದಮೂರ್ತಿ ಶ್ರೀ ವಿಷ್ಣುಮೂರ್ತಿ ಹೆಬ್ಬಾರ್ ಮುಂಡ್ರುಪ್ಪಾಡಿ, ಧರ್ಮಸ್ಥಳ ಹಾಗೂ ಕಲ್ಮಂಜ ಗ್ರಾಮದ ಅಂತರಬೈಲು ಅನಂತೇಶ್ ಚಡಗ ಅವರ ನೇತೃತ್ವದಲ್ಲಿ ನಡೆಯಿತು.

ಕ್ಷೇತ್ರದ ಮೂಲಶಕ್ತಿಗಳಾದ ಬ್ರಹ್ಮ ಮತ್ತು ನಾಗದೇವರ ಪ್ರತಿಷ್ಠೆಗಾಗಿ ಕಾನಂಗಿನ ಕಾಡಿನ ಬೆಟ್ಟದ ತೀರ್ಥಕೊಳದಿಂದ ತೀರ್ಥವನ್ನು ವೈದಿಕ ವಿಧಿ ವಿಧಾನಗಳೊಂದಿಗೆ ಕ್ಷೇತ್ರಕ್ಕೆ ತಂದು ಕಲಶಾಭಿಷೇಕ ನೆರವೇರಿಸಿ ಪ್ರತಿಷ್ಠಾ ಕಾರ್ಯವನ್ನು ಯಶಸ್ವಿಯಾಗಿ ಊರ-ಪರಊರ ಭಕ್ತರ ಸಹಕಾರದೊಂದಿಗೆ ವೈಭವಯುತವಾಗಿ ಜರುಗಿತು.

ಮುಖ್ಯ ಅತಿಥಿಗಳಾದ ಅರ್ಚನಾ ಪೈ ಮತ್ತು ರಾಜೇಶ್ ಪೈ ಸಂಧ್ಯಾ ಗ್ರೂಪ್ಸ್ ಉಜಿರೆ, ರತ್ನಾಕರ ಹೆಗ್ಡೆ ಮಹಾವೀರ ಗ್ರೂಪ್ಸ್ ಉಜಿರೆ, ಸೇವಾ ಭಾರತಿ,ಕನ್ಯಾಡಿ ಇದರ ಅಧ್ಯಕ್ಷರಾದ ವಿನಾಯಕ ರಾವ್ ಅಜ್ಜೋಳಿಗೆ, ವೀರ ಕೇಸರಿ ಬೆಳ್ತಂಗಡಿ ಸ್ಥಾಪಕ ಅಧ್ಯಕ್ಷ ಸತೀಶ್ ಶೆಟ್ಟಿ ಧರ್ಮಸ್ಥಳ, ಶೇಖರ್ ಟಿ. ನಿವೃತ್ತ ಮ್ಯಾನೇಜರ್ ಮಂಜುಶ್ರೀ ಪ್ರಿಂಟರ್ಸ್ ಉಜಿರೆ, ಹರೀಶ್ ಸಿ.ಎ ಬೆಂಗಳೂರು ಹಾಗೂ ವಿವಿಧ ಗಣ್ಯರು ಮತ್ತು ಪುರೋಹಿತ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ತುಕಾರಾಮ ಸಾಲಿಯನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಸಂಯೋಜಕ ನವೀನ್ ಪ್ರಕಾಶ್, ಕಾರ್ಯದರ್ಶಿ ಸುನಿಲ್ ಕನ್ಯಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಗೌಡ ಹೂಂಕ್ರೊಟ್ಟು, ಖಜಾಂಚಿಗಳಾದ ಮಂಜುನಾಥ್ ಗುಡಿಗಾರ್, ಶ್ರೀನಿವಾಸ್ ಗೌಡ ಬೆದ್ರಕಾಡು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಮಾಜಿ ರಾಷ್ಟ್ರ ಪತಿ ಮೊಮ್ಮಗ ಇಂದ್ರಜಿತ್ ಸಿಂಗ್ ಭೇಟಿ

Suddi Udaya

ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಆಡಳಿತ ಮಂಡಳಿಗೆ ಆಯ್ಕೆ

Suddi Udaya

ಉಜಿರೆಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ

Suddi Udaya

ರಾಜ್ಯಮಟ್ಟದ ಕಿಡ್ಸ್ ಅಥ್ಲೆಟಿಕ್ಸ್ : ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿನಿ ಅನೀಶ ಆರೋಲ್ ಡಿಸೋಜಾ ಪ್ರಥಮ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Suddi Udaya

ಬೆಳ್ತಂಗಡಿ : ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಮೂರು ಕೋಟಿ ಅನುದಾನ ಮಂಜೂರು; ಸಮಾಜ ಕಲ್ಯಾಣ ಸಚಿವರಿಗೆ ಅಭಿನಂದನೆ

Suddi Udaya
error: Content is protected !!