ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಕೊಕ್ಕಡ ಸೈಂಟ್ ಫ್ರಾನ್ಸಿಸ್ ಪ.ಪೂ ಕಾಲೇಜಿಗೆ ಶೇ.100 ಫಲಿತಾಂಶ

ಕೊಕ್ಕಡ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಎ.9ರಂದು ಪ್ರಕಟಗೊಂಡಿದ್ದು, ಸೈಂಟ್ ಫ್ರಾನ್ಸಿಸ್ ಪ.ಪೂ ಕಾಲೇಜು ಶೇ.100 ಫಲಿತಾಂಶ ಪಡೆದಿದೆ.

ಪರೀಕ್ಷೆ ಬರೆದ ಒಟ್ಟು 19 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಯೋಶಿತಾ 575 (95.83%)ಪ್ರಥಮ ಸ್ಥಾನ, ತೃಪ್ತಿ 568(94.66%)ದ್ವಿತೀಯ ಸ್ಥಾನ ಹಾಗೂ ಚೈತನ್ಯ 563(93.83%)ತೃತೀಯ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಬ್ಲೆಸ್ಟಿನ್ 561 (93.5%) ಪ್ರಥಮ ಸ್ಥಾನ ಪಡೆದಿದ್ದಾರೆ.

ಕಾಲೇಜು ಸಂಚಾಲಕ ಫಾ. ಜಿಬಿನ್ ಬೋಬಿ, ಪ್ರಾಚಾರ್ಯೆ ಭಗಿನಿ ಪವಿತ್ರಾ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗ, ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಪೋಷಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Related posts

ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಸೌತಡ್ಕ ಸೇವಾಧಾಮ ಪುನಶ್ವೇತನ ಕೇಂದ್ರಕ್ಕೆ ಹಣ್ಣು ಹಂಪಲು ವಿತರಣೆ

Suddi Udaya

ಕ್ರೈಸ್ಟ್ ಅಕಾಡಮೆ (ಐಸಿಎಸ್ಇ) ಮುಂಡಾಜೆ ಶಾಲೆಗೆ ಶೇ 100 ಫಲಿತಾಂಶ

Suddi Udaya

ಕುವೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆ ನೀರು

Suddi Udaya

ಇಳoತಿಲ: ನಾಯಿಮಾರು ನಿವಾಸಿ ವಾರಿಜಾ ನಿಧನ

Suddi Udaya

ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯದ ಆಶ್ರಯದಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟ

Suddi Udaya

ಮ್ಯಾರಥಾನ್ ಯೋಗ ಬೋಧನೆಯಿಂದ ರೂ.2,52,525 ದೇಣಿಗೆ ಸರಕಾರಿ ಶಾಲಾಭಿವೃದ್ಧಿಗೆ ಹಸ್ತಾಂತರ

Suddi Udaya
error: Content is protected !!