July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಚ್ಚಿನ: ಕುದ್ರಡ್ಕ ಭಜನೋತ್ಸವ-2026 ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ ಟ್ರಸ್ಟ್ ಗುರುವಾಯನಕೆರೆ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಕುದ್ರಡ್ಕ ಮಚ್ಚಿನ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇವರ ಸಹಯೋಗದೊಂದಿಗೆ ಕುದ್ರಡ್ಕ ಭಜನೋತ್ಸವ-2026 ಎ.11 ಮತ್ತು 12ರಂದು ಏಕಾಹ ಭಜನೆ, 48 ನಾರೀಕೇಳ ಗಣಹೋಮ ಹಾಗೂ ಭಜನೋತ್ಸವ ಕಾರ್ಯಕ್ರಮ ನಡೆಯಿತು.

ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶಂಕರಾನಂದ ಶರಸ್ವತಿ ಸ್ವಾಮಿ ಕಾಶಿ ಮಠ ವಾರಾಣಸಿ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲೆಯ ಪ್ರಸಿದ್ಧ ಆಹ್ವಾನಿತ ಭಜನಾ ತಂಡಗಳ ಕೂಡುವಿಕೆಯಲ್ಲಿ ಭಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ರವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ ಎಸ್.ಎಸ್. ಮಾತನಾಡಿ ಸಂಗೀತಮಯವಾಗಿ ದೇವರನ್ನು ಸ್ಮರಿಸುವ ಭಜನೆ ಯು ಕೇವಲ ಧಾರ್ಮಿಕ ಕ್ರಿಯೆ ಯಲ್ಲ ಅದು ಮಾನಸಿಕ ಮತ್ತು ದೈಹಿಕ ಅರೋಗ್ಯ ಕ್ಕೆ ಪೂರಕ ವಾದ ಒಂದು ಅಮೃತ ಮಾರ್ಗವಾಗಿದೆ ಭಜನೆಯಿಂದ ಸಿಗುವ ಪ್ರಮುಖ ಪ್ರಯೋಜನ ಗಳು ಅನೇಕ ಲಯ ಭದ್ದವಾದ ಭಜನೆ ಮನಸ್ಸನ್ನು ಶಾಂತ ಗೊಳಿಸುತ್ತದೆ ಮತ್ತು ದಿನ ವಿಡಿ ಇರುವ ಕೆಲಸ ಒತ್ತಡ ಆತಂಕ ವನ್ನು ಕಡಿಮೆ ಮಾಡುತ್ತದೆ ದೇವರ ನಾಮಸ್ಮರಣೆ ಯಲ್ಲಿ ತೊಡಗಿದಾಗ ಮನಸ್ಸಿನ ಚಂಚಲತೆ ಕಡಿಮೆ ಯಾಗಿ ಏಕಾಗ್ರತೆ ಮತ್ತು ಸ್ಮರಣಶಕ್ತಿ ವೃದ್ಧಿಯಾಗುತ್ತದೆ ಗುಂಪಾಗಿ ಭಜನೆ ಮಾಡಿದಾಗ ಉಂಟಾಗುವ ಕಂಪನಗಳು ಮನೆಯಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದರು.

ಭಜನೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಆಯ್ದ ಭಜನಾ ಮಂಡಳಿಗಳ ಸಹಸ್ರಾರು ಭಜಕರಿಂದ ಭಜನಾ ಸೇವೆಯು ನಡೆಯಿತು. ಊರಪರವೂರ ಭಗವದ್ಭಕ್ತರು ಭಾಗವಹಿಸಿದ್ದರು.

ವಸಂತ ಮರಕಡ ನ್ಯಾಯವಾದಿಗಳು ಬೆಳ್ತಂಗಡಿ, ಹರ್ಷವರ್ದನ್ ಹೆಗ್ಡೆ, ವೇಣೂರು, ಡಾ|| ಹೆಗ್ಗಡೆಯವರ ಆಪ್ತ ಕಾರ್ಯದರ್ಶಿಗಳಾದ ಎ.ವೀರು ಶೆಟ್ಟಿ ಧರ್ಮಸ್ಥಳ, ಧರ್ಮಸ್ಥಳ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ರಮಾನಂದ ಬಂಗೇರ, ಪದ್ಮನಾಭ, ದುಗ್ಗಪ್ಪ ಗೌಡ, ವಸಂತ ಮಡಕಿಲ, ರಮಾನಂದ ಬಂಗೇರ ರಾಜೀವ್, ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ, ಜಗದೀಶ್, ಕುಮಾರ ನಾಯ್ಕ್, ನಾರಾಯಣ ಪೂಜಾರಿ, ಅವಿನಾಶ್ ಮಾಲಕರು ನಿತಿನ್ ಕುಲಾಲ್, ಅವಿನಾಶ ಕುಲಾಲ್, ಮೋಹನದ ಮಾನ್ಯ, ಶಿವರಾಮ್ ಆಚಾರ್ಯ, ಮೋಹನ್ ಕುಮಾರ, ಜಗದೀಶ್ ಶೆಟ್ಟಿ, ಕಲ್ಪನಾ ಉಜಿರೆ, ಸುರೇಶ ಮಡಡ್ಕ, ಸದಾನಂದ ಶೆಟ್ಟಿ, ಯೋಜನಾಧಿಕಾರಿ ಅಶೋಕ್ ಬಿ, ಸಂದೇಶ್ ಮಾದ್ದಡ್ಕ, ಕೇಶವ, ಶಶಿಧರ್ ಗೌಡ, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು, ಹಾಗೂ ಊರಿನ ಗಣ್ಯರು ಭಕ್ತಾದಿಗಳು ಉಪಸ್ಥಿತರಿದ್ದರು

Related posts

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನಾ ಸಮಾರಂಭ

Suddi Udaya

ನಾಲ್ಕೂರು:ಪಿಯುಸಿಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾದ ಪ್ರಾಣೇಶ್ ಶೆಟ್ಟಿಯವರಿಗೆ ಸನ್ಮಾನ

Suddi Udaya

ಪಟ್ರಮೆ : ಮುಂಡೂರುಪಳಿಕೆ ನಿವಾಸಿ ವಸಂತಿ ನಿಧನ

Suddi Udaya

ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆಯ ಬಗ್ಗೆ ವಕೀಲರ ಸಂಘದಿಂದ ಜಂಟಿ ಸಭೆ

Suddi Udaya

ಉಜಿರೆ: ಕಿರಿಯಾಡಿಯಲ್ಲಿ ಶ್ರೀ ಬಾಲ ಗೋಕುಲಾಷ್ಟಮಿ ಆಚರಣೆ

Suddi Udaya

ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಕೆರೆಯ ನೀರು ಖಾಲಿ ಮಾಡಿ ತನಿಖೆ – ಟಾರ್ಚ್ ಲೈಟ್ ಪತ್ತೆ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

Suddi Udaya
error: Content is protected !!