24 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಏ.18: ಯ೦ಗ್‌ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ 2ನೇ ವರ್ಷದ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ”

ಬೆಳ್ತಂಗಡಿ: ಯ೦ಗ್‌ ಬಾಯ್ಸ್ ಸವಣಾಲು, ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಬೆಂಗಳೂರು, ದಕ್ಷಿಣ ಕನ್ನಡ ಅಮೆಚೂ‌ರ್ ಕಬಡ್ಡಿ ಅಸೋಸಿಯೇಶನ್, ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ 2ನೇ ವರ್ಷದ ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರ ಆಹ್ವಾನಿತ ತಂಡಗಳ ಮತ್ತು 25 ವರ್ಷ ವಯೋಮಿತಿಯ ಪುರುಷರ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ-2026” ಏ.18 ಶನಿವಾರದಂದು ಸಂತೆಕಟ್ಟೆ ಸಮಾಜ ಮಂದಿರ (SDM Hall Belthangady) ದಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅಸ್ತ್ರ ಗ್ರೂಪ್ಸ್ ಸಿಇಒ ಲಂಚುಲಾಲ್ ಕೆ. ಎಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಶ್ರೀ ಕಾಲಭೈರವೇಶ್ವರ ಸೌಹಾರ್ದ ಸಹಕಾರಿ, ಉಜಿರೆ ಇದರ ಅಧ್ಯಕ್ಷ ರಂಜನ್ ಜಿ. ಗೌಡ, ಸವಣಾಲು ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ದೇವಸ, ದ.ಕ ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕ ಅಧ್ಯಕ್ಷರ ಶೇಖರ ಕುಕ್ಕೇಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಸ್ಪೀಕರ್ ಯು.ಟಿ. ಖಾದರ್ ಅವರು ನೆರವೇರಿಸಲಿದ್ದು, ಶಾಸಕ ಹರೀಶ್ ಪೂಂಜ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯರು, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ, ಶ್ರೀ ಸತೀಶ್ ಕಾಶಿಪಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು (ನಗರ), ಬೆಳ್ತಂಗಡಿ, ಮೋಹನ್ ಕುಮಾರ್ ಸಂಚಾಲಕರು, ಬದುಕು ಕಟ್ಟೋಣ ಬನ್ನಿ, ವೀರು ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನೆರವೇರಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಈ ಕಬಡ್ಡಿ ಪಂದ್ಯಾಟ ಧ್ವನಿ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ.

Related posts

ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ವಿ.ಹಿಂ.ಪ ಹಾಗೂ ಭಜರಂಗದಳ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ

Suddi Udaya

ಮೂಲ ಕೋಟೆ ತರವಾಡು ವತಿಯಿಂದ ಡಾ. ರವೀಶ್ ಪಡುಮಲೆಗೆ ಸನ್ಮಾನ

Suddi Udaya

ಅಂತರರಾಷ್ಟ್ರೀಯ ‘ಗ್ರೀನ್‌ ಆಸ್ಕರ್‌’ ಸೆಲ್ಕೋ ಮಡಿಲಿಗೆ ಹಸಿರು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಸಂದ ದೊಡ್ಡ ಗೌರವ; ಗ್ರಾಮೀಣ ನಾವೀನ್ಯತೆಗಾಗಿ ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ಗೆ ಆಶ್ಡೆನ್ ಪ್ರಶಸ್ತಿ –2025

Suddi Udaya

ಕೊಕ್ಕಡ: ವಿದ್ಯಾರ್ಥಿನಿ ಹಾಗೂ ಬೈಕ್ ನಲ್ಲಿ ತೆರಳುತ್ತಿದ್ದವರನ್ನು ಬೆನ್ನಟ್ಟಿದ ಕಾಡಾನೆ: ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಗಸ್ತು

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

Suddi Udaya

ಮುಂಬಯಿಯಲ್ಲಿ ಟೀಮ್ ಯುವ ಬ್ರಿಗೇಡ್ ನಿಂದ ಶಾಸಕ‌ ಹರೀಶ್ ಪೂಂಜರವರಿಗೆ ಸನ್ಮಾನ

Suddi Udaya
error: Content is protected !!