September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಪಿಐ ಬೆಳ್ತಂಗಡಿ ವತಿಯಿಂದ ಸಾಮಾಜಿಕ ನ್ಯಾಯ ದಿನಾಚರಣೆ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ|| ಬಾಬಾ ಸಾಹೇಬ್ ಅಂಬೇಡ್ಕ‌ರ್ ಜನ್ಮದಿನಾಚರಣೆ ಪ್ರಯುಕ್ತ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಆಚರಿಸಲಾಯಿತು.

ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಚಿಂತಕರು ಹಾಗೂ ಅಂಬೇಡ್ಕರ್ ವಾದಿ ದಾಮೋದರ್ ಬೆಳ್ತಂಗಡಿ ಸಾಮಾಜಿಕ ಅಸಮಾನತೆ, ಅನ್ಯಾಯ ಮತ್ತು ಶೋಷಣೆ ವಿರುದ್ಧ ಧ್ವನಿ ಎತ್ತುವ ಅಗತ್ಯತೆಯನ್ನು ಒತ್ತಿಹೇಳಿದರು. ದೇಶದ ಸಂವಿಧಾನ ನೀಡಿರುವ ಹಕ್ಕುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಹಾಗೂ ಸಮಾಜದಲ್ಲಿ ನ್ಯಾಯ ಸ್ಥಾಪನೆಗಾಗಿ ಯುವಕರು ಮುನ್ನಡೆ ವಹಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷರು ಅಕ್ಬರ್ ಬೆಳ್ತಂಗಡಿ, ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫಾ ಜಿಕೆ ಹಾಗೂ ಪಕ್ಷದ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯದರ್ಶಿ ರಶೀದ್ ಸ್ವಾಗತಿಸಿ, ಅಶ್ರಫ್ ಕಟ್ಟೆ ವಂದಿಸಿದರು. ಕಾರ್ಯಕ್ರಮವನ್ನು ನಿಝಾಮ್ ಕಟ್ಟೆ ನಿರೂಪಿಸಿದರು.

Related posts

ತಿಮರೋಡಿ ಮನೆಯಲ್ಲಿ ತಲವಾರು-ಬಂದೂಕು ಪತ್ತೆ ಪ್ರಕರಣ ಮಹೇಶ್ ಶೆಟ್ಟಿ ವಿಚಾರಣೆಗೆ ಹಾಜರಾಗಲು ಎರಡನೇ ನೋಟಿಸ್ ಜಾರಿ

Suddi Udaya

ಸಿದ್ದರಾಮಯ್ಯ ಮಿಸ್ಟರ್ ಕ್ಲೀನ್ ಅಲ್ಲ, ಮಿಸ್ಟರ್ ಕರಪ್ಟ್, 100% ಹಗರಣ ಕಾಂಗ್ರೇಸ್ ಸರಕಾರದ ಸಾಧನೆ: ಬಿಜೆಪಿ ಅಭ್ಯರ್ಥಿಗೆ ಎರಡು ಸಾವಿರ ಮತದ ಅಂತರದ ಗೆಲುವು: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

Suddi Udaya

ಲಾಯಿಲ: ರಸ್ತೆ ಬದಿ ಕಸ ಬಿಸಾಡಿದ್ದಕ್ಕೆ ಮತ್ತೆ ಬಿತ್ತು ದಂಡ

Suddi Udaya

ಪುದುವೆಟ್ಟು: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ

Suddi Udaya

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ಕಾರ್ಯಕ್ರಮ

Suddi Udaya
error: Content is protected !!