September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಷು ಕಣಿ ದರ್ಶನ, ವಿಷು ಹಬ್ಬ ವಿಶೇಷ ಪೂಜೆ

ನಾವೂರು: ಸೌರಮಾನ ಯುಗಾದಿ “ಪರಾಭವನಾಮ”ಸಂವತ್ಸರಾರಂಭ ಪ್ರಯುಕ್ತ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಷು ಕಣಿ ದರ್ಶನ, ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ, ಸೌರಮಾನ ಯುಗಾದಿ ವಿಶೇಷ ಪೂಜೆ ಹಾಗೂ ವಿದ್ಯಾರ್ಥಿಗಳಿಗೆ ರಾಮಾಯಣ ಪುಸ್ತಕ ವಿತರಣಾ ಕಾರ್ಯಕ್ರಮವು ಎ.15ರಂದು ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳ್ತಂಗಡಿ ಗುರುದೇವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಷು ಹಬ್ಬದ ಸಂದೇಶವನ್ನು ಹಾಗೂ ವಿಷು ಕಣಿಯ ಮಹತ್ವವನ್ನು ತಿಳಿಸಿಕೊಟ್ಟರು ಮತ್ತು ನಾವೂರಿನಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್, ನಾವೂರು ಇದರ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ನೆನಪಿಸಿ ಶುಭವನ್ನು ಕೋರಿ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದಲ್ಲಿ ಧರ್ಮ ಶಿಕ್ಷಣ ಕಾರ್ಯಗಳು ಈ ಕ್ಷೇತ್ರದ ಮೂಲಕ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಪೂರ್ವಾಧ್ಯಕ್ಷರಾದ ಎ ಬಿ ಉಮೇಶ್ ಅತ್ಯಡ್ಕ, ಟ್ರಸ್ಟಿಗಳಾದ ಗಣೇಶ್ ಕಣಾಲು, ಗಣೇಶ್ ಗೌಡ , ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಎಸ್ ಎನ್ ಭಟ್, ಮೋಹನ್ ಬಂಗೇರ, ದೀನೇಶ್ ಗೌಡ ಮಲವಂತಿಗೆ, ಯತೀಶ್ ಕಣಾಲು, ಡಾ। ಕವಿತಾ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಪ್ರಧಾನ ಅರ್ಚಕರಾದ ದಿನೇಶ್ ಭಟ್ ವೈದಿಕ ವಿಧಿಗಳನ್ನು ನೆರವೇರಿಸಿಕೊಟ್ಟರು. ಡಾ। ಪ್ರದೀಪ್ ಆಟಿಕುಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣವನ್ನು ನಡೆಸಿದರು. ಸಾಮೂಹಿಕ ಪಠಣದಲ್ಲಿ ಅಂರ್ಜಾಲದ ಮೂಲಕವೂ ಬಹಳಷ್ಟು ಭಕ್ತರು ಭಾಗವಹಿಸಿದರು.

Related posts

ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ರವರ ಧಾರ್ಮಿಕ ಸೇವೆಗೆ “ಧರ್ಮ ಸಾರಥಿ” ಬಿರುದು

Suddi Udaya

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇಯ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ:ಶಾಲಾ ಮಕ್ಕಳಿಗೆ ಊಟದ ಬಟ್ಟಲು, ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

Suddi Udaya

ಬೆಳಾಲು : ಕಾರು ಮತ್ತು ದ್ವಿಚಕ್ರ ವಾಹನ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ದ್ವಿಚಕ್ರ ವಾಹನ ಸವಾರ ಸಾವು

Suddi Udaya

‘ಸ್ಟ್ಯಾಟ್‌ಟೆಕ್- 2023’ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯ ಸಮಾರೋಪ

Suddi Udaya

ಪಡಂಗಡಿ:ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

Suddi Udaya

ಧರ್ಮಸ್ಥಳಕ್ಕೆ ಆಗಮಿಸುವ ಮುನ್ನ ಜನಾರ್ದನ ರೆಡ್ಡಿ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ಪೂಜೆ

Suddi Udaya
error: Content is protected !!