September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬೇಸಿಗೆ ಶಿಬಿರ

ನೆಲ್ಯಾಡಿ: ನೆಲ್ಯಾಡಿಯ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರವಾದ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಳ್ತಂಗಡಿ ಧರ್ಮಪ್ರಾಂತ್ಯದ ಮೇಜರ್ ಸೆಮಿನಾರಿಯನ್ಸ್ ಈ ಶಿಬಿರಕ್ಕೆ ನೇತೃತ್ವ ನೀಡಿದರು.

ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಸಾಮಾಜಿಕ ಬದ್ಧತೆ, ಆಧ್ಯಾತ್ಮಿಕ ಚಿಂತನೆ, ವ್ಯಕ್ತಿತ್ವ ವಿಕಾಸ ಮತ್ತು ಉತ್ತಮ ಹವ್ಯಾಸಗಳ ರೂಢಿ ಕುರಿತು ಸಮಗ್ರ ತರಬೇತಿ ನೀಡಲಾಯಿತು. ಪ್ರಾರ್ಥನೆ, ಗುಂಪು ಚರ್ಚೆ, ಕ್ರೀಡೆ, ಸಂಗೀತ, ನೃತ್ಯ ಮತ್ತು ಮೌಲ್ಯಾಧಾರಿತ ತರಗತಿಗಳು ಮಕ್ಕಳನ್ನು ಆಕರ್ಷಿಸಿದವು.

ಕಾರ್ಯಕ್ರಮವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಮೈನರ್ ಸೆಮಿನಾರಿ ರೆಕ್ಟರ್ ಫಾ. ರೋಬಿನ್ ಕೇಳಪರಂಭಿಲ್ ಉದ್ಘಾಟಿಸಿದರು. ಫಾ. ಜಿನ್ಸ್ ಕೋಲಕುನ್ನೆಲ್, ಫಾ. ಜಿನ್ಸ್ ವಲಿಯಪರಂಭಿಲ್, ಆಪ್ತ ಸಮಾಲೋಚನೆಗಾರ್ತಿ ಸಿಸ್ಟರ್ ಆಲ್ಫಿ ಎಸ್.ಎಚ್., ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರೊಯ್ ಕೊಳೋಗರಾತ್, ಸಿ.ಎಂ.ಎಲ್. ಮುಖ್ಯಸ್ಥ ಶ್ರೀ ಅಲೆನ್ ನೀರಪ್ಪೆಲ್ ಹಾಗೂ ಬ್ರದರ್ ಬಿನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಪ್ರಾಸ್ತಾವಿಕವಾಗಿ ಮಾತನಾಡಿ, “ರಜೆಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಮತ್ತು ವ್ಯಕ್ತಿತ್ವದ ವೈವಿಧ್ಯತೆಯನ್ನು ಅರಿಯುವ ಸುವರ್ಣಾವಕಾಶವಾಗಬೇಕು” ಎಂದು ಹೇಳಿದರು.
ಶಿಬಿರವು ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿ, ನೈತಿಕ ಮೌಲ್ಯಗಳೊಂದಿಗೆ ಜೀವನವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡಿದಂತಾಯಿತು. ಪೋಷಕರು ಹಾಗೂ ಸ್ಥಳೀಯರು ಈ ಕಾರ್ಯಕ್ರಮವನ್ನು ಪ್ರಶಂಸಿಸಿದರು.

Related posts

ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟೀಚರ್ಸ್ ಡೇ ಮತ್ತು ಓಣಂ ಹಬ್ಬದ ಆಚರಣೆ

Suddi Udaya

ಮೇಲಂತಬೆಟ್ಟು ಭಗವತಿ ದೇವಸ್ಥಾನ ರಸ್ತೆಗೆ ಹಾಕಿದ್ದ ಬೇಲಿ ತೆರವು

Suddi Udaya

ಪ್ರಾಣಿಗಳ ಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಪಾಲಿಸಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ಬೆಳ್ತಂಗಡಿ ಪೋಲೀಸ್ ಠಾಣೆಗೆ ಮನವಿ

Suddi Udaya

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯಿಂದ ರಕ್ಷಾ ಬಂಧನ ಆಚರಣೆ

Suddi Udaya

ಮಚ್ಚಿನ: ನೂತನ ವಿದ್ಯುತ್ ಕಂಬ ಅಳವಡಿಕೆ : ಸುದ್ದಿ ಉದಯ ಫಲಶ್ರುತಿ

Suddi Udaya

ಕೇರಳ ಹೊಟೇಲ್ ಮಾಲಕನ ಹತ್ಯೆ ಪ್ರಕರಣ: ಹೊಟೇಲ್ ಕೆಲಸಗಾರ ಬೆಳ್ತಂಗಡಿಯ ಯುವಕ ಬಂಧನ

Suddi Udaya
error: Content is protected !!