September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯಿಂದ ಬಿಎಲ್ಎ 2 ಹಾಗೂ ಪಕ್ಷದ ಮುಖಂಡರುಗಳಿಗೆ ಎಸ್‌ಐಆರ್, ವೋಟ್ ಮ್ಯಾಪಿಂಗ್ ಬಗ್ಗೆ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ವತಿಯಿಂದ ಬಿಎಲ್ಎ 2 ಹಾಗೂ ಪಕ್ಷದ ಮುಖಂಡರುಗಳಿಗೆ SIR ಮತ್ತು ವೋಟ್ ಮ್ಯಾಪಿಂಗ್ ಬಗ್ಗೆ ಇಂದು ಗುರುವಾಯನಕೆರೆ ಎಫ್ ಎಮ್ ಗಾರ್ಡನ್ ಸಭಾಂಗಣದಲ್ಲಿ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಗಾರವನ್ನು ಉದ್ದೇಶಿಸಿ ಮಂಗಳೂರು ಮೆಸ್ಕಾಂ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿದರು.

ತರಬೇತಿ ಮತ್ತು ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಚ್.ವಿ ವಾಸು, ಬೆಂಗಳೂರು ಮೋಹನ್ ಜಿ.ಕೆ, ಮೈಸೂರು ಸಂತೋಷ್‌.ಜಿ, ಬೆಂಗಳೂರು ನಿಜಾರ್‌ ಅಹಮ್ಮದ್, ಬೆಂಗಳೂರು ನಡೆಸಿಕೊಟ್ಟರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ಟಣ ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಉಪಸ್ಥಿತರಿದ್ದರು . ಕಾರ್ಯಾಗಾರದಲ್ಲಿ, ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಗ್ರಾಮ ಸಮಿತಿ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಬಿಎಲ್ಎ 2 ಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Related posts

ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣ ಖಂಡನೀಯ : ರಕ್ಷಿತ್ ಶಿವರಾಂ

Suddi Udaya

ಜು.21: ಲಾಲಿತ್ಯೋದ್ಯಾನ ಕವನ ಸಂಕಲನ ಬಿಡುಗಡೆ

Suddi Udaya

ದಿಡುಪೆ -ಎಳನೀರು ರಸ್ತೆ ಅಭಿವೃದ್ಧಿ ಬೆಳ್ತಂಗಡಿ- ಮೂಡಿಗೆರೆ ಶಾಸಕರುಗಳಿಂದ ಪರಿಶೀಲನೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಉಪಸ್ಥಿತಿ

Suddi Udaya

ಮೈರೋಳ್ತಡ್ಕ 30 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಸದಾನಂದ ಮುಂಡಾಡಿ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಬೆಳಾಲು ಮೈತ್ರಿ ಯುವಕ ಮಂಡಲ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ನಿತಿನ್ ಮೋನಿಸ್, ಕಾರ್ಯದರ್ಶಿಯಾಗಿ ವಿಘ್ನೇಶ್

Suddi Udaya
error: Content is protected !!