September 6, 2026
ಅಪಘಾತಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ನಿವಾಸಿ, ವಿದ್ಯಾರ್ಥಿ ಆದಿಲ್ ಹುಸೈನ್ ಮೇಲೆ ಹಲ್ಲೆ

ಬೆಳ್ತಂಗಡಿ: ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ, ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ (21) ಎಂಬವನ ಮೇಲೆ ಹಲ್ಲೆ ನಡೆದಿರುವ ಘಟನೆ ಪುತ್ತೂರು ಕಸಬಾ ಗ್ರಾಮದ ಕೆ ಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಬಳಿ ನಡೆದಿದೆ.

ಆದಿಲ್ ಹುಸೈನ್ ಏ.22 ರಂದು ಸಂಜೆ, ಕಾಲೇಜಿನಿಂದ ತನ್ನ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಎಂಬವರೊಂದಿಗೆ ಪುತ್ತೂರು ಕಸಬಾ ಗ್ರಾಮದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿರುವಾಗ, ಪಿರ್ಯಾದಿದಾರರ ಪರಿಚಯದ ಆರೋಪಿಗಳಾದ ಬಿಕೆ ಮೊಯಿನುದ್ದೀನ್, ಮೋಹದ್ ಹಾಗೂ ಇತರ 5 ಜನ ಬಂದು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿರುತ್ತಾರೆ.

ಆಗ ಪಿರ್ಯಾದಿದಾರರ ಜೊತೆಯಲ್ಲಿದ್ದ ಸ್ನೇಹಿತರು ಹಲ್ಲೆಯ ಬಗ್ಗೆ ಪ್ರಶ್ನಿಸಿದಾಗ ಅವರಿಗೂ ಅರೋಪಿಗಳು ಬೆದರಿಕೆ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ಗಲಾಟೆಯನ್ನು ಬಿಡಿಸಲು ಬಂದಾಗ ಆರೋಪಿಗಳು ಪಿರ್ಯಾದಿದಾರರಿಗೆ ಅವ್ಯಾಚವಾಗಿ ಬೈದು, ಜೀವಬೆದರಿಕೆ ಒಡ್ಡಿ ಸ್ಥಳದಿಂದ ತೆರಳಿರುತ್ತಾರೆ. ಹಲ್ಲೆಯಿಂದಾದ ಗಾಯಕ್ಕೆ ಪಿರ್ಯಾದಿರವರು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಕೆಲವು ತಿಂಗಳ ಹಿಂದೆ ಪಿರ್ಯಾದಿದಾರರ ಕಾಲೇಜಿನ ವಿದ್ಯಾರ್ಥಿಗಳಿಗೆ ಆರೋಪಿ ಮೊಯಿನುದ್ದೀನ್ ಮತ್ತು ಇತರರು ಹೊಡೆಯುತ್ತಿರುವಾಗ ಗಲಾಟೆಯನ್ನು ಪಿರ್ಯಾದಿದಾರರು ಬಿಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ತನ್ನ ಮೆಲೆ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 49/2026, ಕಲಂ: 189(2), 191(2), 191(3), 352,115(2), 118(1),351(2), ಜೊತೆಗೆ 190 ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಪಟ್ರಮೆ : ಪುರುಷೋತ್ತಮ ದಾಸ್ ಹೃದಯಾಘಾತದಿಂದ ನಿಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡದ ಡಿಆರ್‌ಎಂ ಯೋಗೀಶ್ ಭೇಟಿ

Suddi Udaya

ಧರ್ಮಸ್ಥಳ :ವಿಶೇ‍ಷ ಚೇತನರ ಸಮನ್ವಯ ಗ್ರಾಮ ಸಭೆ: 90 ಫಲಾನುಭವಿಗಳಿಗೆ ರೂ.6.30 ಲಕ್ಷ ಆರ್ಥಿಕ ಪ್ರೋತ್ಸಾಹ ನಿಧಿ ಹಸ್ತಾಂತರ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ: ಸಾನಿಧ್ಯ ಕಲಶಾಭಿಷೇಕ, ಉತ್ಸವಬಲಿ

Suddi Udaya

ಸೆ.16: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆ: ಅಧ್ಯಕ್ಷರಾಗಿ 2 ನೇ ಬಾರಿಗೆ ಪುಷ್ಪಾವತಿ ಪೂಜಾರಿ ಹೇವ, ಉಪಾಧ್ಯಕ್ಷರಾಗಿ ಪ್ರಮೀಳಾ ಜಯಾನಂದ ಆಯ್ಕೆ

Suddi Udaya
error: Content is protected !!