24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಕೃಷಿ ಭೂಮಿಯೊಳಗೆ ಅರಣ್ಯ ಇಲಾಖೆಯಿಂದ ಕಲ್ಲಿನ ಗುಪ್ಪೆ: ಕೃಷಿಕರಲ್ಲಿ ಆತಂಕ

ಬೆಳ್ತAಗಡಿ: ಕೊಯ್ಯೂರು ಗ್ರಾಮದಲ್ಲಿ ಅರಣ್ಯ ಇಲಾಖೆ ತಮ್ಮ ಜಮೀನು ಗುರುತಿಸುವ ನಿಟ್ಟಿನಲ್ಲಿ ಮಲೆಕುಡಿಯ ಸಮುದಾಯದವರು ಕೃಷಿ ಮಾಡಿಕೊಂಡು ಬಂದಿದ್ದ ಕೃಷಿಭೂಮಿಯೊಳಗೆ ಕಲ್ಲಿನ ಗುಪ್ಪೆ ಹಾಕುವ ಕಾರ್ಯ ಮಾಡಿದ್ದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಕೊಯ್ಯೂರು ಗ್ರಾಮದ ದುಗಲಾಯಿಬೆಟ್ಟು, ಕುಲ್ಲಾಜೆ ಈ ಪ್ರದೇಶದಲ್ಲಿ ಸುಮಾರು 80 ವರ್ಷ ಹಿಂದಿನಿಂದಲೂ ಮಲೆಕುಡಿಯ ಸಮುದಾಯದ ಜನರು ಬದುಕನ್ನು ನಡೆಸುತ್ತಾ ಬಂದಿದ್ದು, ಇಲ್ಲಿನ ನಿವಾಸಿಗಳಾದ ನಿರಂಜನ ಮಲೆಕುಡಿಯ, ಕೃಷ್ಣಪ್ಪ ಮಲೆಕುಡಿಯ, ನೋಣಯ್ಯ ಮಲೆಕುಡಿಯ, ಧರ್ಮರಾಜ್ ಮಲೆಕುಡಿಯ ಅವರ ಕೃಷಿ ಭೂಮಿಯ ನಡುವೆ ಅರಣ್ಯ ಇಲಾಖೆ ತಮ್ಮ ಗಡಿ ಗುಪ್ಪೆಗಳನ್ನು ನಿರ್ಮಿಸಿದೆ. ಸರ್ವೆ ನಂಬರ್ 60 ರಲ್ಲಿ ಇವರಿಗೆ ಸರಕಾರದಿಂದ ಹಕ್ಕುಪತ್ರವನ್ನೂ ನೀಡಲಾಗಿದೆ ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಇವರ ಬಳಿ ಇದೆ.

ಆದರೆ ಕೃಷಿಕರಿಗೆ ಯಾವುದೇ ಮಾಹಿತಿ ನೀಡದೆ ಜಂಟಿ ಸರ್ವೆ ಮಾಡದೆ ಏಕಾಏಕಿ ಅರಣ್ಯ ಇಲಾಖೆ ಕೃಷಿಭೂಮಿಗೆ ಪ್ರವೇಶಿಸಿ ಗುಪ್ಪೆ ನಿರ್ಮಿಸುವ ಕಾರ್ಯ ಮಾಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಇದಲ್ಲದೆ ಇದರ ಸಮೀಪವಿರುವ ಮ್ಯಾಥ್ಯೂ ಹಾಗೂ ಸಿಬಿ ಎಂಬವರ ಜಾಗದಲ್ಲಿಯು ಇಲಾಖೆ ಗುಪ್ಪೆ ನಿರ್ಮಿಸಿದ್ದು, ಸರ್ವೆ ಮಾಡದೆ ನೋಟೀಸ್ ನೀಡದೆ ಯಾವ ಆಧಾರದ ಮೇಲೆ ಕೃಷಿ ಭೂಮಿಯಲ್ಲಿ ಗುಪ್ಪೆ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಈಗಾಗಲೇ ಕಂದಾಯ, ಅರಣ್ಯ ಜಮೀನಿನ ನಡುವೆ ಬಾರಿ ಗೊಂದಲವಿದೆ. ಈ ಜಮೀನಿನ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಪ್ರಕಟಿಸಿದೆ. ಇದರ ನಡುವಯೇ ಅರಣ್ಯ ಇಲಾಖೆಯು ಗುಪ್ಪೆ ನಿರ್ಮಿಸುತ್ತಿರುವುದು ಜನರನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.

Related posts

ಧರ್ಮಸ್ಥಳದಿಂದ ಬಳಂಜ ಶಾಲಾ ಕ್ರೀಡಾಂಗಣ ಅಭಿವೃದ್ದಿಗೆ ನೆರವು, ಮಂಜೂರಾತಿ ಪತ್ರ ಹಸ್ತಾಂತರ

Suddi Udaya

ಬೆಳ್ತಂಗಡಿ: ಜೆಇಇ ಪರೀಕ್ಷೆಯಲ್ಲಿ ಎಕ್ಸಲೆಂಟ್ ಕಾಲೇಜು ಮೂಡಬಿದ್ರಿ ವಿದ್ಯಾರ್ಥಿ ಶಿಶಿರ್ ಹೆಚ್ ಶೆಟ್ಟಿ ಜಿಲ್ಲೆಗೆ ಪ್ರಥಮ

Suddi Udaya

ಬೆಳ್ತಂಗಡಿ ಅಬಕಾರಿ ಎಸ್‌ಐ ಸಯ್ಯದ್ ಶಬೀರ್ ಬೆಂಗಳೂರಿಗೆ ವರ್ಗಾವಣೆ

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ಆಗ್ರಹ

Suddi Udaya

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪುಷ್ಟಿ ಪ್ರಥಮ ಸ್ಥಾನ

Suddi Udaya

ಜಿಲ್ಲೆಯ ಬಡವರ ಮನೆ ಕಟ್ಟುವ ಮರಳಿನ ಸಮಸ್ಯೆ ಸರಿಪಡಿಸುವಂತೆ ಮೋಹನ್ ಗೌಡ ಕಲ್ಮಂಜ ರವರಿಂದ ಸರಕಾರಕ್ಕೆ ಮನವಿ

Suddi Udaya
error: Content is protected !!