30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ಡಾ. ಬಿ.ಆರ್‌. ಅಂಬೇಡ್ಕರ್‌ ಹುಟ್ಟುಹಬ್ಬ ಕಾರ್ಯಕ್ರಮ

ಬೆಳ್ತಂಗಡಿ : ಅಂಬೇಡ್ಕರ್ ಚಿಂತನೆಗಳು ಶೋಷಣೆ ಮುಕ್ತ ಸಮಾಜದ ನಿರ್ಮಾಣಕ್ಕೆ ಮಾರ್ಗದರ್ಶನವಾಗಿದೆ ಎಂದು ಗೋವಿಂದದಾಸ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತಾ ಪಿ. ಅಭಿಪ್ರಾಯಪಟ್ಟರು.

ಅವರು ಎ. 26ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ 135 ನೇ ಡಾ. ಬಾಬಾ ಸಾಬ್ ಅಂಬೇಡ್ಕರ್ ರವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡಾ. ಬಿ. ಆರ್ ಅಂಬೇಡ್ಕರ್ ರ ಕೃತಿಗಳಾದ ‘ಜಾತಿವಿನಾಶ’, ‘ಸ್ಟೇಟ್ಸ್ ಆಂಡ್ ಮೈನಾರಿಟೀಸ್ ‘ ಮತ್ತು ಆತ್ಮಚರಿತ್ರೆ ‘ವೈಟಿಂಗ್ ಫಾರ್ ವೀಸಾ’ ವನ್ನು ಸವಿಸ್ತಾರವಾಗಿ ವಿಶ್ಲೇಷಿಸಿದರು, ಅಂಬೇಡ್ಕರ್ ತೋರಿದ ಸಾಮಾಜಿಕ ಸಮಾನತೆಯ ಮಾರ್ಗವನ್ನು ಪರಿಚಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪಿ.ಕೆ.ರಾಜು ಪಡಂಗಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಘಟನೆಯು ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತದಲ್ಲಿ ನಮ್ಮ ಬದುಕು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ಮಾತನಾಡಿ ಜೀವನದಲ್ಲಿ ಅಂಬೇಡ್ಕರ್ ತತ್ವಾದರ್ಶಕಗಳನ್ನು ಅಳವಡಿಸಿಕೊಂಡು ಸ್ವಾಭಿಮಾನದ ಜೀವನ ಸಾಗಿಸಬೇಕೆಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಪದ್ಮನಾಭ ಗರ್ಡಾಡಿ ಮಾತನಾಡುತ್ತಾ ವಿಶ್ವಜ್ಞಾನಿ, ಭಾರತರತ್ನ ಸಂವಿಧಾನಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇಡೀ ವಿಶ್ವವೇ ಕೊಂಡಾಡುವ ವಿಶ್ವ ನಾಯಕರಾಗಿದ್ದು ನಮ್ಮ ದೇಶದ ಸಂವಿಧಾನ ಬರೆದು ದೇಶದ ಎಲ್ಲಾ ವರ್ಗದವರಿಗೂ ಸಹೋದರತೆ, ಸಮಾನತೆಯನ್ನು ರೂಪಿಸಿ ನಮ್ಮೆಲ್ಲರ ಬದುಕಿಗೆ ಮಾನವೀಯತೆಯ ಜ್ಯೋತಿ ಬೆಳಗಿಸಿ ಜ್ಞಾನದ ಜ್ಯೋತಿಯಾಗಿ ಭಾರತ ಭಾಗ್ಯವಿಧಾತ ಆಗಿದ್ದಾರೆ ಎಂದು ಹೇಳಿದರು.

ಬುದ್ಧ ಬಸವ ಅಂಬೇಡ್ಕರ್ ತತ್ವಾದರ್ಶಗಳನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಜನೆಗೈಯುತ್ತಿರುವ ನಾಲ್ಕು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ವೇದಿಕೆಯಲ್ಲಿ ಪುತ್ತೂರು ತಾಲೂಕು ಸಂಚಾಲಕರಾದ ಆನಂದ ಪುತ್ತೂರು, ಜಿಲ್ಲಾ ಖಜಾಂಚಿ ಬಾಸ್ಕರ್ ಸುರತ್ಕಲ್ ಉಪಸ್ಥಿತರಿದ್ದರು.
ಸಂವಿಧಾನ ಗೀತೆಯ ಪ್ರಾರ್ಥನೆಯನ್ನು ಜನಾರ್ಧನ್, ಪೂಜಾ ಮತ್ತು ಸೌಪರ್ಣಿಕ ಸುದೆಮುಗೇರು ಹಾಡಿದರು. ಶಿವಪ್ಪ ಗರ್ಡಾಡಿ ನಿರೂಪಿಸಿ, ಸಂಜೀವ ಬೊಲ್ಚಡಿ ಸ್ವಾಗತಿಸಿ, ಕರಿಯಪ್ಪ ಮಾಸ್ಟರ್ ಧನ್ಯವಾದವಿತ್ತರು.

Related posts

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya

ಬೆಳ್ತಂಗಡಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಮಹಾಸಭೆ

Suddi Udaya

ವೇಣೂರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

Suddi Udaya

ಜಿಲ್ಲಾ ಅಕ್ಕ ಪಡೆ ತಂಡದಿಂದ ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮ

Suddi Udaya

ಸೆ.27-28: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya
error: Content is protected !!