24.9 C
ಪುತ್ತೂರು, ಬೆಳ್ತಂಗಡಿ
June 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಮೇ 17ರಂದು ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ಪ್ರಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಂಭ್ರಮ’ ಮತ್ತು ಬಹುಭಾಷಾ ಕವಿಗೋಷ್ಠಿ’ ಎಂಬ ವಿನೂತನ ಕಾರ್ಯಕ್ರಮ

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಸಂಸ್ಥೆ ಕಳೆದ 54 ವರ್ಷಗಳಲ್ಲಿ ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆ ಯಾಗಿ ಬೆಳೆದಿದೆ. ಅಂತರಾಷ್ಟಿçÃಯ ಸೇವಾ ಸಂಸ್ಥೆಯಾದ ಬೆಳ್ತಂಗಡಿ ರೋಟರಿ ಕ್ಲಬ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ, ಕನ್ನಡ ಸಾಹಿತ್ಯ ಸಂಭ್ರಮ' ಮತ್ತುಬಹುಭಾಷಾ ಕವಿ ಗೋಷ್ಠಿ’ ಎಂಬ ವಿನೂತನ ಕಾರ್ಯಕ್ರಮ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಯದುಪತಿ ಗೌಡ ಇವರ ಅಧ್ಯಕ್ಷತೆಯಲ್ಲಿ ಮೇ ೧೭ರಂದು ಭಾನುವಾರ ಉಜಿರೆ ಅರಳಿಯ ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರಕಾಶ್ ಪ್ರಭು ಹೇಳಿದರು.

ಅವರು ಮೇ 4ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ. ಎಂ.ಎಂ ದಯಾಕರ್ ಅವರು ವಹಿಸಲಿದ್ದಾರೆ. ಸಮ್ಮೇಳನವನ್ನು ಕ.ಸಾ.ಪ.ದ ನಿಕಟ ಪೂರ್ವ ಅಧ್ಯಕ್ಷರಾದ ಪ್ರದೀಪ ಕಲ್ಕೂರರವರು ಉದ್ಘಾಟನೆ ಮಾಡಲಿದ್ದಾರೆ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ ಸಿಂಹ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರೋಪದಲ್ಲಿ ದ.ಕ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ, ಉದ್ಯಮಿ ರಾಜೇಶ ಪೈ, ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ್ ಬಿಢೆ, ನ್ಯಾಯವಾದಿ ಲ| ಮುರಳಿ ಬಲಿಪ, ಲ|ವಸಂತ ಶೆಟ್ಟಿ ಶ್ರದ್ಧಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಮೂರು ಪ್ರಬುದ್ಧ ಗೋಷ್ಠಿಗಳಿದ್ದು, ಶ್ರೀ.ಧ.ಮ.ಕಾಲೇಜು ಉಜಿರೆಯ ಕನ್ನಡ ಪ್ರಾಧ್ಯಪಕರು ಹಳೆಮನೆ ರಾಜಶೇಖರ್ ಅವರು “ಹೊಸ ತಲೆಮಾರು ಮತ್ತು ಓದಿನ ಅಭಿರುಚಿ” ಎಂಬ ವಿಷಯದ ಬಗ್ಗೆ, ಸಾಮಾಜಿಕ ಕಳಕಳಿಯ ಬರಹಗಾರ ದಿವಾಕರ ಕೊಕ್ಕಡ, ಇವರು “ಮನುಜ ಮತ ವಿಶ್ವ ಪಥ” ಎಂಬ ವಿಷಯದ ಬಗ್ಗೆ, ಡಾ. ರವೀಶ ಪಡುಮಲೆ, ಜಾನಪದ ವಿದ್ವಾಂಸರು, ಇವರು” ತುಳುನಾಡಿನ ದೈವಾರಾಧನೆ”ಯ ಆಗುಹೋಗುಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ರೋಟರಿ ಅಧ್ಯಕ್ಷ ರೊ. ಡಾ. ಪ್ರಕಾಶ ಪ್ರಭು ವಿರಚಿತ ಕಥಾ ಸಂಕಲನ ಬಿಡುಗಡೆಗೊಳ್ಳಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ `ಸಾಮೂಹಿಕ ಛಾಯಾಚಿತ್ರ ಸ್ಪರ್ಧೆ’ ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ. ತಂಡದಲ್ಲಿ ಕನಿಷ್ಠ ೭ ಜನರಿರಬೇಕು ಗರಿಷ್ಠ ಮಿತಿಯಿಲ್ಲ, ಸಮವಸ್ತç ಧರಿಸಿರಬೇಕು (ಒಂದೇ ಬಣ್ಣದ ಸೀರೆ/ಪ್ಯಾಂಟ್ ಶರ್ಟ ಇತ್ಯಾದಿ) ನಾಡಹಬ್ಬಕ್ಕೆ ಪೂರಕವಾಗಿರುವ ಗುಂಪಿನ ಪ್ರದರ್ಶನಕ್ಕೆ ಒತ್ತು ಕೊಡಲಾಗುವುದು, ಕಾರ್ಯಕ್ರಮಕ್ಕೆ ಬೆಳಗ್ಗೆ 6.30 ಯಿಂದ ಸಾಯಂಕಾಲ ಸಮಾರೋಪ ಸಮಾರಂಭದ ವರೇಗೆ ಇಡೀ ತಂಡ ಇರಬೇಕು
ಅಪರಾಹ್ನ 2.30 ಗಂಟೆಗೆ ಸಮೂಹ ಫೋಟೊ ತೆಗೆದು ಅಥವಾ ರೀಲ್ಸ್ ಮಾಡಿ, ತಮ್ಮ ವಿವರಗಳೊಂದಿಗೆ Whatsapp number 9448060206 ಗೆ ಕಳುಹಿಸಬೇಕು. ಅತ್ಯುತ್ತಮ ತಂಡಕ್ಕೆ ಪ್ರಥಮ ಬಹುಮಾನ ರೂ 2000/-, ದ್ವಿತಿಯ ಬಹುಮಾನ ರೂ ೧,೦೦೦/-, ತೃತೀಯ ರೂ ೫೦೦/- ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಯದುಪತಿ ಗೌಡ ಬೆಳ್ತಂಗಡಿ ಸಂಚಾಲಕರಾದ ರೋ.ಬಿ. ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು.

Related posts

ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya

ಧರ್ಮಸ್ಥಳ: “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ” ದ ಉದ್ಘಾಟನಾ ಸಮಾರಂಭ

Suddi Udaya

ನಾಳೆ(ಜ.31) ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ “ಭಾಸ್ಕರ ಪರ್ವ”: ಪ್ರಾಧ್ಯಾಪಕ ಡಾ.ಭಾಸ್ಕರ ಹೆಗಡೆಗೆ ಅಭಿನಂದನೆ

Suddi Udaya

ಪದ್ಮುಂಜ ದಾಮೋದರ ನಾಯ್ಕ್ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕ ದೀಪಕ್ ಎ.ಎಸ್. ಲೋಕಸಭಾ ಸಂಸದ ಬ್ರಿಜೇಶ್ ಚೌಟರ ಭೇಟಿ

Suddi Udaya

ಧರ್ಮಸ್ಥಳ ಪ್ರಕರಣದ ಬಗ್ಗೆ ಡಾ| ವೀರೇಂದ್ರ ಹೆಗ್ಗಡೆಯವರ ಮೊದಲ ಪ್ರತಿಕ್ರಿಯೆ: ಆರೋಪಗಳು ಆಧಾರ ರಹಿತ, ತನಿಖೆಯಿಂದ ಸತ್ಯ ಹೊರ ಬರಲಿದೆ: ಡಾ| ಹೆಗ್ಗಡೆ

Suddi Udaya
error: Content is protected !!