25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

ಗೇರುಕಟ್ಟೆ: ಎಂ. ವಿ ಪ್ರತಿಷ್ಠಾನ ಗೇರುಕಟ್ಟೆ ಆಯೋಜಿಸಿದ ಭಾರವಿ ಬೇಸಿಗೆ ಶಿಬಿರದ ಸಮಾರೋಪವು ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆಯಲ್ಲಿ ಜರಗಿತು .

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸುಮಾರು 37 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಏಪ್ರಿಲ್ 30 ರಂದು ನಿವೃತ್ತರಾದ ಶ್ರೀಮತಿ ಗುಣರತ್ನ ಕಾವೂರು ಇವರನ್ನು ಶಿಬಿರದಲ್ಲಿಗೌರವಿಸಲಾಯಿತು.

ಮುಖ್ಯಅತಿಥಿ ಯೋಗಪಟು ಸತೀಶ್ ಭಂಡಾರಿ ಒಂದು ಸಣ್ಣ ಪ್ರಯತ್ನವು ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂಬುದಕ್ಕೆ ಈ ಶಿಬಿರವು ಸಾಕ್ಷಿಯಾಗಿದೆ ಎಂದರು. ಪೋಷಕ ಹರೀಶ್ ಆಚಾರ್ಯ ಕಣಿಯೂರು ,ರೇವತಿಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರತಿಷ್ಠಾನದ ಸದಸ್ಯರಾದ ಪ್ರಭಾಕರ ಆಚಾರ್ಯ,ರಾಜೇಶ ಆಚಾರ್ಯ, ಹರೀಶ ಆಚಾರ್ಯ, ರಂಜೀತ್ ಮೂಡಬಿದಿರೆ,ವಸಂತ ಆಚಾರ್ಯ ಉಪಸ್ಥಿತರಿದ್ದರು.

ಶಿಬಿರದಲ್ಲಿ ಪೇಪರ್ ಕ್ರಾಫ್ಟ್ ಪ್ರಾತ್ಯಕ್ಷಿಕೆಯನ್ನು ಶರ್ಮಿಳಾ ರಾಜೇಶ್ ಮಂಗಳೂರು, ಗೀತ ಗಾಯನ ಮತ್ತು ಒಗಟುಗಳ ಬಗ್ಗೆ ರೇವತಿ ಮೇಗರವಳ್ಳಿ, ಯೋಗದ ಪ್ರಾಥಮಿಕ ಮಾಹಿತಿ ಬಗ್ಗೆ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ.ಯಲ್,ಮಹಾಭಾರತ ರಸಪ್ರಶ್ನೆ , ದೇಸೀಯ ಆಟ, ಕಸದಿಂದ ರಸ , ಹೂಗುಚ್ಚ ತಯಾರಿ ಮೊದಲಾದ ಚಟುವಟಿಕೆಗಳನ್ನು ಪ್ರೇಶೀತ ,ವಾಣಿ , ಗೀತಾ.ಡಿ , ಸ್ವಾತಿ ಮೂಡಬಿದಿರೆ,ಇಶಾನ್ ನಡೆಸಿಕೊಟ್ಟರು ಮನೆ ಬಳಕೆಯ ಪುರಾತನ ವಸ್ತುಗಳು , ವಿವಿಧ ದೇಶದ ನೋಟುಗಳು ಮತ್ತು ನಾಣ್ಯಗಳ ಪ್ರದರ್ಶನ , ಸ್ಮರಣಶಕ್ತಿ ಪರೀಕ್ಷೆ, ಶಿಬಿರಾರ್ಥಿಗಳಿಂದ ವೈಯಕ್ತಿಕ ಪ್ರತಿಭಾ ಪ್ರದರ್ಶನ ನಡೆಸಲಾಯಿತು.

ಗೇರುಕಟ್ಟೆ, ಕೊರಂಜ ಪರಿಸರದ 20 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ಭಾಗವಹಿಸಿದ ಪೋಷಕರಿಗೂ ಸಂಸ್ಕಾರ ಬಿಂದು ಪುಸ್ತಕವನ್ನು ನೀಡಲಾಯಿತು

ವಾಣಿ ಹರೀಶ ಆಚಾರ್ಯ ಸ್ವಾಗತಿಸಿ ಪ್ರೇಷಿತ ರಾಜೇಶ್ ವಂದಿಸಿದರು. ಪ್ರತಿಷ್ಠಾನದ ಸಂಚಾಲಕಿ ಭಾರತಿ ಎಂ.ಎಲ್ ಕಾರ್ಯಕ್ರಮ ನಿರೂಪಿಸಿದರು. ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನ, ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ.ಉಪ್ಪಿನಂಗಡಿ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಗೇರುಕಟ್ಟೆ ಸಹಕಾರ ನೀಡಿದ್ದರು.

Related posts

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪದವಿ ವಿಭಾಗದ ವಿದ್ಯಾರ್ಥಿ‌‌ಸಂಘದ ಉದ್ಘಾಟನೆ ಹಾಗೂ ಸ್ವಾಗತ ಕಾರ್ಯಕ್ರಮ

Suddi Udaya

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಸಮಾಲೋಚನೆ ಸಭೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಗೆ ದಾನಿಗಳಿಂದ ಕೊಡುಗೆಗಳ ಹಸ್ತಾಂತರ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನೆ

Suddi Udaya

ಉಜಿರೆ ಶ್ರೀ. ಧ.ಮಂ. ವಸತಿ ಪ.ಪೂ. ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!