32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭ ನೆರವೇರಿತು.

ಮುಖ್ಯ ಅತಿಥಿ ಕಾಂಚನದ ಶ್ರೀ ಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ಮಯ್ಯ ಶಾಲಾ ಮಂತ್ರಿಮಂಡಲವನ್ನು ದೀಪ ಪ್ರಜ್ವಲಿಸಿ ಉದ್ಘಾಟನೆಗೊಳಿಸಿ, ಮಾತನಾಡಿ ನಾಯಕತ್ವ ಅಂದರೆ ಏನು,ಮಾದರಿ ನಾಯಕನಾಗುವ ಪರಿ ಹೇಗೆ,ದೇಶ ಸೇವೆ ಎಂದರೆ ಏನು, ಮತದಾನದಲ್ಲಿ ಆಯ್ಕೆ ಹೇಗಿರಬೇಕು, ಶಾಲೆಯಲ್ಲಿ ಚುನಾವಣೆಯ ಅಗತ್ಯ,ಶಾಲೆಯಲ್ಲಿ ಮಂತ್ರಿಮಂಡಲದ ಅಗತ್ಯ ಏನು ಮಂತ್ರಿಗಳ ಕಾರ್ಯನಿರ್ವಹಣೆ ಹೇಗೆ,ವಿರೋಧ ಪಕ್ಷದವರ ಕೆಲಸ ಏನು ಎಂಬಿತ್ಯಾದಿ ವಿಚಾರವನ್ನು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ವಿವರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿ, ಮಾತನಾಡಿ ಮಂತ್ರಿಗಳ ಜವಾಬ್ದಾರಿ, ಶಾಲೆಯಲ್ಲಿ ಅವರ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಶಾಲಾ ನಾಯಕ ಶ್ರೀವರ್ಚಸ್ ತನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ನೀಡಿ ತನ್ನ ಜವಾಬ್ಧಾರಿಯನ್ನು ಉತ್ತಮವಾಗಿ ನಿರ್ವಹಿಸುವ ಕುರಿತು ಭರವಸೆಯನ್ನು ನೀಡಿದರು. ವಿದ್ಯಾರ್ಥಿನಿಯರಾದ ಭಾರ್ಗವಿ ನಿರೂಪಿಸಿ, ಶ್ರೇಯಾ ರೈ ಸ್ವಾಗತಿಸಿ, ಅನುಜ್ಞ ಅತಿಥಿಗಳ ಕಿರು ಪರಿಚಯ ಮಾಡಿ, ಅರ್ಘ್ಯ ಜೈನ್ ಧನ್ಯವಾದವಿತ್ತರು.

Related posts

‘ಮಕ್ಕಳಿಗೆ ಓದುವುದು ಎಷ್ಟು ಮಹತ್ವ’ ವಿಷಯದ ಕುರಿತು ಪದ್ಮಲತಾ ಮೋಹನ್ ನಿಡ್ಲೆಯವರಿಂದ ಉಪನ್ಯಾಸ

Suddi Udaya

ನಿಡ್ಲೆ: ಇನೋವಾ ಕಾರು ಹಾಗೂ ಪೊಲೀಸ್ ವ್ಯಾನ್ ನಡುವೆ ಡಿಕ್ಕಿ

Suddi Udaya

ಗರ್ಡಾಡಿ ರೊನಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ನಿಧನ

Suddi Udaya

ಬೆಳ್ತಂಗಡಿ ತಹಶೀಲ್ದಾರ ಯಾಗಿ ಸುರೇಶ್ ಕುಮಾರ್ ಟಿ ಎಸ್ ನೇಮಕ

Suddi Udaya

ಫೆ.28: ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸೇವಾ ನಿವೃತ್ತಿ

Suddi Udaya

ಸೆ.12: ಬೆಳ್ತಂಗಡಿಯಲ್ಲಿ ಮುಳಿಯ ಜ್ಯುವೆಲ್ಸ್ ವತಿಯಿಂದ ಕೃಷ್ಣ ವೇಷ ಸ್ಪರ್ಧೆ

Suddi Udaya
error: Content is protected !!