September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಮುಂಡೂರು : ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ: ಶಿಲಾಮಯ ಕಟ್ಟೆ ಹಾಗೂ ಗುಡಿ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಿದ ಗುರುವಪ್ಪ ಸಾಲಿಯಾನ್ ಕೇರಿಯಾರ್ ರವರಿಗೆ ಸನ್ಮಾನ

ಬೆಳ್ತಂಗಡಿ: ಮುಂಡೂರು ಗ್ರಾಮದ ಕೋಟಿಕಟ್ಟೆಯಲ್ಲಿ ಅನೇಕ ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿರುವ ಶ್ರೀ ಮಹಮ್ಮಾಯಿ ಸಾನಿಧ್ಯದಲ್ಲಿ ಇಂದು (ಮೇ 8) ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಗಣಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶ ಪೂಜೆ, ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಮಹಾಕುಂಭಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಶ್ರೀ ಮಹಮ್ಮಾಯಿ ಅಮ್ಮನವರ ಶಿಲಾಮಯ ಗುಡಿ ನಿರ್ಮಾಣಕ್ಕೆ ಪೂರ್ಣಪ್ರಮಾಣದ ಸಹಕಾರ ನೀಡಿದ ಗುರುವಪ್ಪ ಸಾಲಿಯಾನ್ ಕೇರಿಯಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಹಕಾರ ನೀಡಿದ ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ಸುರೇಶ್ ನಡಕ್ಕರಬೈಲು, ಮುಂಡೂರು ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿದ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ,ಅನಿಲ್ ಕುಮಾರ್ ಕಿನಿಂಜೆ, ರಾಜೇಶ್ ಬೆಳ್ತಂಗಡಿ, ರಮಾನಂದ ಸಾಲಿಯಾನ್ ಮುಂಡೂರು ಹಾಗೂ ಸಹಕಾರ ನೀಡಿದ ಮಹನೀಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ಕೆ.ಎಸ್, ಸಮಿತಿ ಗೌರವ ಅಧ್ಯಕ್ಷ ಕೆ. ಗುರುವಪ್ಪ ಸಾಲಿಯಾನ್ ಕೇರಿಮಾರ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ನವಮಿ, ಗೌರವ ಮಾರ್ಗದರ್ಶಕ ರಂಗನಾಥ ನೂರಿತ್ತಾಯ ಗೋಪಾಲಕೃಷ್ಣ ದೇವಸ್ಥಾನ ಖಂಡಿಗ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕಡಂಬು, ಪ್ರಕಾರ್ಯದರ್ಶಿ ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಕೋಶಾಧಿಕಾರಿ ಬೋಜ ಪೂಜಾರಿ ಮಜಲು, ಶ್ರೀ ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ರಾಜೇಂದ್ರ ಪೂಜಾರಿ, ಪ್ರಕಾರ್ಯದರ್ಶಿ ಅಶೋಕ್ ಕುಮಾರ್ ಕೊಡಕ್ಕಾಲು, ಕೋಶಾಧಿಕಾರಿ ಪ್ರಕಾಶ್ ಪೂಜಾರಿ ಕೋಡೈಲ್,ಪ್ರಮುಖರಾದ ರಮಾನಂದ ಸಾಲಿಯಾನ್ ಮುಂಡೂರು, ರಾಜೀವ ಸಾಲಿಯಾನ್ ಮುಂಡೂರು, ಜಯರಾಜ್ ನಡಕ್ಕರ,ಹರೀಶ್ ಅರ್ವದಕಲ, ಹಾಗೂ ಸಮಿತಿ ಪದಾಧಿಕಾರಿಗಳು ಭಕ್ತರು, ಊರವರು ಉಪಸ್ಥಿತರಿದ್ದರು.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಸಿ.ಎ ಪರೀಕ್ಷೆ: ಕುಮ್ಮುಂಜ ನಿವಾಸಿ ಕೃಷ್ಣರಾಜ ತಂತ್ರಿ ಉತ್ತೀರ್ಣ

Suddi Udaya

ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಇದರ ನೂತನ ಅಧ್ಯಕ್ಷರಾಗಿ ಸಾಮಾಜಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವ ಉದ್ಯಮಿ ಯು.ಹೆಚ್ ಅಬೂಬಕ್ಕರ್ ಆಯ್ಕೆ

Suddi Udaya

ಉಜಿರೆ: ರತ್ನಮಾನಸ “ಜೀವನ ಶಿಕ್ಷಣ “ವಸತಿ ನಿಲಯ ಪ್ರವೇಶೋತ್ಸವ

Suddi Udaya

ಪದ್ಮುಂಜ: ಮಲೆಂಗಲ್ಲು ನಿವಾಸಿ ಗೋಪಿ ನಿಧನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ

Suddi Udaya
error: Content is protected !!