September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯವರದಿ

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ: ಎಸ್ಡಿಪಿಐ ಮುಖಂಡರಿಂದ ಸಮಸ್ಯೆ ಬಗೆಹರಿಸಲು ಮನವಿ

ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಔಷಧಿಗಳ ಅಭಾವ ಹಾಗೂ ರೋಗಿಗಳ ನಿರ್ಲಕ್ಷ್ಯ ನಡೆಯುತ್ತಿರುವ ಕುರಿತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ತಾಲೂಕು ತಹಶೀಲ್ದಾರರು ಹಾಗೂ ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

SDPI ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಗಮಿಸುವ ಬಡ ಹಾಗೂ ಸಾಮಾನ್ಯ ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಆಸ್ಪತ್ರೆಯಲ್ಲಿ NS ಡ್ರಿಪ್ಸ್, ಕ್ಯಾನೂಲಾ, ಗ್ಲವ್ಸ್, ಮಾಸ್ಕ್ ಸೇರಿದಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕೊರತೆಯಿಂದ ಅನೇಕ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಲಾಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಪುರುಷರ ವಾರ್ಡ್‌ನಲ್ಲಿರುವ ಹಲವು ಫ್ಯಾನ್‌ಗಳು ಕಳೆದ ಒಂದು ತಿಂಗಳಿನಿಂದ ಕೆಟ್ಟು ನಿಂತಿದ್ದರೂ ದುರಸ್ತಿ ಮಾಡಲಾಗಿಲ್ಲ. ತುರ್ತು ಸೇವೆಗಾಗಿ ಇರುವ ಆಂಬುಲೆನ್ಸ್‌ಗಳಿಗೆ ಡೀಸೆಲ್ ಇಲ್ಲ ಎಂಬ ಕಾರಣ ನೀಡಿ ಸೇವೆ ನೀಡಲಾಗುತ್ತಿಲ್ಲ ಎಂಬ ಗಂಭೀರ ಆರೋಪಗಳನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.ಈ ಎಲ್ಲಾ ಸಮಸ್ಯೆಗಳು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತಿದ್ದು, ಸಾರ್ವಜನಿಕ ಆರೋಗ್ಯ ಸೇವೆಯ ಮೇಲೆ ಜನರ ವಿಶ್ವಾಸ ಕುಸಿಯುವಂತಾಗಿದೆ ಎಂದು SDPI ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಹಾಗೂ ವೈದ್ಯಕೀಯ ಸಾಮಗ್ರಿಗಳ ಸಮರ್ಪಕ ದಾಸ್ತಾನು ಒದಗಿಸುವುದು, ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವುದು, ವಾರ್ಡ್‌ನಲ್ಲಿರುವ ಕೆಟ್ಟ ಫ್ಯಾನ್‌ಗಳನ್ನು ತಕ್ಷಣ ದುರಸ್ತಿ ಮಾಡಿಸುವುದು, ಆಂಬುಲೆನ್ಸ್ ಸೇವೆಯನ್ನು ನಿರಂತರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತೆ ಆಸ್ಪತ್ರೆಯ ಆಡಳಿತ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಬೇಕು ಎಂದು SDPI ಒತ್ತಾಯಿಸಿದೆ.

ಮನವಿ ಸಲ್ಲಿಸಿದ ಬಳಿಕ SDPI ಮುಖಂಡರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ರೋಗಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಕ್ಷೇತ್ರ ಕಾರ್ಯದರ್ಶಿ ರಶೀದ್ ಬೆಳ್ತಂಗಡಿ, ಕೋಶಾಧಿಕಾರಿ ಸ್ವಾಲಿಹ್ ಮದ್ದಡ್ಕ, ಅಶ್ರಫ್ ಕಟ್ಟೆ, ನಗರ ಸಮಿತಿ ಅಧ್ಯಕ್ಷ ರಿಯಾಝ್ ಬೆಳ್ತಂಗಡಿ, ಉಜಿರೆ ಬ್ಲಾಕ್ ಅಧ್ಯಕ್ಷ ಸಲೀಂ ಲಾಯಿಲ, ರಶೀದ್ ಲಾಯಿಲ, ಸ್ವಾದಿಕ್ ಲಾಯಿಲ ಉಪಸ್ಥಿತರಿದ್ದರು.

Related posts

ಪಾರಾದೀಪ್ ಫಾಸ್ಫೇಟ್ ಲಿಮಿಟೆಡ್ ಮಂಗಳೂರು ಘಟಕದ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಾಣಗೊಂಡ ಕಾರಿಂಜ ಉರುವಾಲು ಅಂಗನವಾಡಿ ಕೇಂದ್ರದ ಉದ್ಘಾಟನೆ

Suddi Udaya

ವೇಣೂರು: ಕ್ಷೇತ್ರದಲ್ಲಿ ಸರ್ವಜ್ಞ ವಾಣಿ ವೆಬ್ ಸೈಟ್ ಅನಾವರಣ

Suddi Udaya

ಪಣಕಜೆ : ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗು: ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡು ಮೃತ್ಯು

Suddi Udaya

ರೋಬೋಟಿಕ್ ಶಸ್ತ್ರಚಿಕಿತ್ಸೆ ಹಾಗೂ ಜಾಯಿಂಟ್ ರಿಪ್ಲೇಸ್‌ಮೆಂಟ್ ಫೆಲೋಶಿಪ್ ಪೂರ್ಣಗೊಳಿಸಿದ ಮೂಳೆ ತಜ್ಞ ಡಾ. ರಜತ್ ಹೆಚ್.ಪಿ

Suddi Udaya

ಮೇಲಂತಬೆಟ್ಟು: ಪಕ್ಕಿದಕಲ ನವೋದಯ ಯುವಕ & ಯುವತಿ ಮಂಡಲದ 27ನೇ ವರ್ಷದ ಸಾರ್ವಜನಿಕ ಆಟೋಟ ಸ್ಪರ್ಧೆ ಹಾಗೂ ಮೋಟೋಕ್ರಾಸ್ 2025 ಪೋಸ್ಟರ್ ಬಿಡುಗಡೆ

Suddi Udaya

ಬೆಳಾಲು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

Suddi Udaya
error: Content is protected !!