27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸ್ಪಂದನ ಬಂಟರ ಸೇವಾ ತಂಡದಿಂದ 50ನೇ ಸೇವಾ ಕಾರ್ಯಕ್ರಮ: ನೂತನ ಸ್ಪಂದನ ಮನೆ ಹಸ್ತಾಂತರ

ಬೆಳ್ತಂಗಡಿ: ತಾಯಂದಿರ ದಿನಾಚರಣೆಯಂದೇ ದಾನಿಗಳ ಸಹಕಾರದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಬಡ ಕುಟುಂಬಕ್ಕೆ ಹಸ್ತಾಂತರಿಸಿರುವುದು ಬಹಳ ಸಂತಸ ತಂದಿದೆ. ಈ ನಿಟ್ಟಿನಲ್ಲಿ ಸ್ಪಂದನ ಸೇವಾ ತಂಡದ ಕಾರ್ಯ ಶ್ಲಾಘನೀಯ ಎಂದು ಉದ್ಯಮಿಗಳು ಕೊಡುಗೈ ದಾನಿ ಶಶಿಧರ್ ಶೆಟ್ಟಿ ಬರೋಡಾ ಹೇಳಿದರು.

ಅವರು ಮೇ 10 ರಂದು ಓಡಿಲ್ನಾಳ ಗ್ರಾಮದ ಮಠ ಕಾಪಿಕಾಡು ಎಂಬಲ್ಲಿ ಸ್ಪಂದನ ಬಂಟರ ಸೇವಾ ತಂಡ ಬೆಳ್ತಂಗಡಿ, ಬಂಟರ ವಲಯ ಸಮಿತಿ ಕುವೆಟ್ಟು ಮತ್ತು ಬಂಟರ ಗ್ರಾಮ ಸಮಿತಿ ಓಡಿಲ್ನಾಳ ಇದರ ಸಹಕಾರದೊಂದಿಗೆ 50 ನೇ ಸೇವಾ ಕಾರ್ಯಕ್ರಮದ ನೂತನ ಸ್ಪಂದನ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ದೈವ ದೇವರ ಅನುಗ್ರಹ ಆಶೀರ್ವಾದ ಇದ್ದರೆ ಮಾತ್ರ ನಾವು ಮಾಡುವ ಪ್ರತಿಯೊಂದು ಸಂಕಲ್ಪ ಈಡೇರಲು ಸಾಧ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಸ್ಪಂದನ ಸೇವಾ ತಂಡ ಸಮಾಜಮುಖಿ ಚಿಂತನೆಗಳ ಮೂಲಕ ಉತ್ತಮ ರೀತಿಯ ಸೇವಾ ಯೋಜನೆಗಳನ್ನು ಹಮ್ಮಿಕೊಂಡು ಅಶಕ್ತರ ಬಾಳಿಗೆ ಭರವಸೆಯ ಬೆಳಕು ನೀಡುವ ಕೆಲಸ ಮಾಡುತ್ತಿದ್ದು ಸ್ಪಂದನ ಸೇವಾ ತಂಡದ ಪ್ರತಿಯೊಂದು ಸೇವಾ ಕಾರ್ಯಗಳಲ್ಲಿಯೂ ನಾನು ಕೈ ಜೋಡಿಸುತ್ತಿದ್ದೇನೆ.

ಈಗಾಗಲೇ ತಾಲೂಕಿನಲ್ಲಿ 9 ಮನೆಗಳು ನಿರ್ಮಾಣಗೊಳ್ಳುತಿದ್ದು, ನನ್ನ ತಾಯಿಯ ಹೆಸರು ಶಾಶ್ವತವಾಗಿ ಸಮಾಜದಲ್ಲಿ ಇರಬೇಕು ಎಂಬ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಇನ್ನಷ್ಟು ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳುವ ಚಿಂತನೆಯನ್ನು ನವಶಕ್ತಿ ಕುಟಂಬಸ್ಥರು ಮಾಡಲಿದ್ದೇವೆ. ಸಮರ್ಥ ವ್ಯಕ್ತಿಗಳಿದ್ದಲ್ಲಿ ಮಾತ್ರ ಯಾವುದೇ ಸೇವಾ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾಧ್ಯ ಇದಕ್ಕೆ ಉದಾಹರಣೆ ಬಹಳ ಸುಂದರವಾಗಿ ಮೂಡಿ ಬಂದಿರುವ ಈ ಮನೆಯೇ ಸಾಕ್ಷಿ ಮನೆಯಲ್ಲಿರುವ ಎಲ್ಲರೂ ಸದಾ ನೆಮ್ಮದಿ ಆರೋಗ್ಯದಿಂದ ಇರಲಿ ಎಂದು ಶುಭ ಹಾರೈಸಿದರು.

ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಮಾತನಾಡಿ ನೆಮ್ಮದಿಯ ಬದುಕು ಸಾಗಿಸಲು ಉತ್ತಮ ಮನೆ ಇರಬೇಕು ಎಂಬುವುದು ಎಲ್ಲರ ಕನಸು, ಈ ನಿಟ್ಟಿನಲ್ಲಿ ಒಂದಷ್ಟು ದಾನಿಗಳ ಮೂಲಕ ಮನೆ ಇಲ್ಲದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ಅವರಿಗೆ ಆತ್ಮವಿಶ್ವಾಸ ಸ್ವಾಭಿಮಾನದಿಂದ ಜೀವನ ಸಾಗಿಸಲು ವ್ಯವಸ್ಥೆ ಕಲ್ಪಿಸಿಕೊಟ್ಟ ಸ್ಪಂದನಾ ಸೇವಾ ತಂಡದ ಕಾರ್ಯ ಇತರರಿಗೆ ಮಾದರಿ ಎಂದರು.

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ ಶೆಟ್ಟಿ ಶುಭ ಹಾರೈಸಿದರು. ಸ್ಪಂದನ ಸೇವಾ ತಂಡದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಪ್ರಸ್ತಾವನೆಗೈದು ಪ್ರತಿಯೊಂದು ಸೇವಾ ಯೋಜನೆಗಳಿಗೂ ನಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಂತ ಶಶಿಧರ್ ಶೆಟ್ಟಿಯವರ ಪ್ರೋತ್ಸಾಹದಿಂದ ಇಂತಹ ಸೇವಾ ಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಅದಲ್ಲದೇ ಪ್ರತಿಯೊಬ್ಬ ದಾನಿಗಳು ಕೂಡ ನಮ್ಮ ತಂಡಕ್ಕೆ ಶಕ್ತಿ ಎಂದರು. ಕಾರ್ಯಕ್ರಮದಲ್ಲಿ ಉಮೇಶ್ ಶೆಟ್ಟಿ ಉಜಿರೆ, ಬಂಟರ ಗ್ರಾಮ ಸಮಿತಿ ಲಾಯಿಲ ಅಧ್ಯಕ್ಷ ಜನಾರ್ದನ ಶೆಟ್ಟಿ ಪೆರಿಂದಿಲೆ, ಓಡಿಲ್ನಾಳ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಭೋಳ್ಯ, ವಸಂತ ಶೆಟ್ಟಿ ಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು. ವಿಠಲ ಶೆಟ್ಟಿ ಉಪ್ಪಡ್ಕ ವಂದಿಸಿದರು.

Related posts

ರಾಜ್ಯಮಟ್ಟದ ಬಾಲಕರ ಟೆಕ್ವಾಂಡೋ ಸ್ಪರ್ಧೆ: ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೀರ್ತೇಶ್ ತೃತೀಯ ಸ್ಥಾನ

Suddi Udaya

ಭಾರತ -ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್: ಭಾರತದ ಗೆಲುವಿಗಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಶಾಲೆ ಕಿರಿಯ-ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

Suddi Udaya

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಆರೋಪಿ ನಾರಾವಿಯ ಯುವಕನಿಗೆ ನ್ಯಾಯಾಂಗ ಬಂಧನ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಹಿ.ಪ್ರಾ. ಶಾಲೆಯಲ್ಲಿ ಇಂಗ್ಲಿಷ್ ಇಟಾಲಿಕ್ ಶೈಲಿಯ ಬರವಣಿಗೆಯ ತರಬೇತಿ ಕಾರ್ಯಾಗಾರ

Suddi Udaya

ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ಚಂದ್ರಶೇಖರ ಹೆಚ್ ಎಸ್ ರಾಜ್ಯಕ್ಕೆ ಪ್ರಥಮ

Suddi Udaya
error: Content is protected !!