September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶಿಶಿಲದ ಕಪಿಲಾ ನದಿಯಲ್ಲಿ ನಡೆದ ಮತ್ಸ್ಯ ದುರಂತಕ್ಕೆ 30 ವರ್ಷ

ಶಿಶಿಲ : ಶಿಶಿಲದ ಕಪಿಲಾ ನದಿಯಲ್ಲಿ ದೇವರ ಮೀನೆಂದೆ ಶತಮಾನ ಕಾಲದಿಂದ ಪೂಜಿಸುತ್ತಿದ್ದಾರೆ. ಸಾವಿರಾರು ಭಕ್ತಾದಿಗಳು ಶಿಶಿಲಕ್ಕೆ ಆಗಮಿಸಿ ಕಪಿಲಾ ನದಿಯಲ್ಲಿರುವ ಮೀನುಗಳನ್ನು ಕಂಡು ಆಹಾರ ನೀಡಿ ಶಿಶಿಲೇಶ್ವರ ಸ್ವಾಮಿಯ ದರ್ಶನ ಮಾಡಿ ಪುನೀತರಾಗುತ್ತಾರೆ.

ಆದರೆ ಆ ಒಂದು ದಿನವನ್ನು ಶಿಶಿಲದ ಭಕ್ತರು ಇನ್ನೂ ನೆನಪಿಸುತ್ತಿದ್ದಾರೆ. ಅದು 25.5.96. ಇಂದಿಗೆ ಮೂವತ್ತು ವರ್ಷ ಸಂದಿದೆ.
ಇಲ್ಲಿರುವ ಮೀನುಗಳು ದೇವರ ಪ್ರತಿರೂಪ. ಇವುಗಳನ್ನು ಹಿಡಿಯುವಂತಿಲ್ಲ ಎಂದು ಬ್ರಿಟೀಷ್ ಸರಕಾರದಿಂದಲೆ ಕಾನೂನು ಬಂದಿತ್ತು. ಈಗಲೂ ಅದೆ ಕಾನೂನು ಮುಂದುವರಿದಿದೆ.
ಆದರೆ ಇದನ್ನೆಲ್ಲಾ ಸಹಿಸದ ದುಷ್ಕರ್ಮಿಗಳ ಅಂದು ಕಪಿಲಾ ನದಿಗೆ ವಿಷ ಇಕ್ಕಿ ಸಾವಿರಾರು ಮೀನುಗಳ ಮಾರಣ ಹೊಮವನ್ನೆ ನಡೆಸಿದ್ದರು. ಇದನ್ನು ಖಂಡಿಸಿ ಬ್ರಹತ್ ಭಾರೀ ಭಕ್ತರು ಬೀದಿಗಿಳಿದಿದ್ದರು.
ಸ್ವಾಮೀಜಿಗಳು, ಜನ ಪ್ರತಿನಿದಿಗಳು, ಅಧಿಕಾರಿಗಳ ದಂಡೆ ಶಿಶಿಲಕ್ಕೆ ಆಗಮಿಸಿತ್ತು. ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯೆ ನಡೆದಿತ್ತು.

ಊರಿಗೆ ಊರೆ ನೆರೆದು ಕಪಿಲಾ ನದಿಯಲ್ಲಿ ಮಡಿದ ಮತ್ಸ್ಯ ಸಂಕುಲಕ್ಕೆ ಕಂಬನಿ ಸುರಿದಿತ್ತು. ಮತ್ಸ್ಯ ಹಿತರಕ್ಷಣಾ ವೇದಿಕೆ ಯಿಂದ ಮತ್ಸ್ಯ ಸ್ಮಾರಕವೂ ನಿರ್ಮಾಣ ಆಗಿತ್ತು.. ಇದೆಲ್ಲವೂ ಘಟನೆ ನಡೆದಿದ್ದರೂ ಶಿಶಿಲದ ಭಕ್ತರು ಅದನ್ನು ಇನ್ನೂ ಮರೆತಿಲ್ಲ.
ಅಂತಹ ಘಟನೆ ಮುಂದೆ ನಡೆಯದಂತೆ ಜನ ಜಾಗ್ರತಿಯಾಗಿದ್ದಾರೆ. ಕಾವಲು ಸಮಿತಿ ರಚನೆಯಾಗಿದೆ. ಹಿಂದೂ ಸಂಘಟನೆಗಳು ಇನ್ನೂ ಹೆಚ್ಚು‌ಜಾಗ್ರತರಾಗಿದ್ದು ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಇದ್ದಾರೆ..
ಆದರೂ ಭಕ್ತ ಸಮೂಹ ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದಾರೆ. ಮಡಿದ ಮತ್ಸಸಂಕುಲದ ಸದ್ಗತಿಗಾಗಿ ಗ್ರಾಮದ ಭಕ್ತಸಮೂಹ ಈ ದಿನವನ್ನು ಪ್ರಾರ್ಥನಾ ದಿನವಾಗಿ ಮಾಡುತ್ತಿದ್ದಾರೆ ಎಂದು ಹಿಂದೂ ಧರ್ಮ ಪ್ರಸಾರ ಸಮಿತಿಯ ಪ್ರಮುಖರಾದ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.

Related posts

ಬೆಳ್ತಂಗಡಿಯ ಇಬ್ಬರು ವಕೀಲರು ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಪಡಿತರ ಚೀಟಿವಿಲ್ಲದೆ ವಂಚಿತಗೊಂಡಿದ್ದ ನೆರಿಯ ಗ್ರಾಮದ ಕೋಲೋಡಿ ನೀಲಮ್ಮ ಕುಟುಂಬಕ್ಕೆ ಲಭಿಸಿದ ರೇಷನ್ ಕಾರ್ಡ್

Suddi Udaya

ಕೊಯ್ಯೂರು: ಸೋಮಾವತಿ ನದಿ ಕಿನಾರೆಯಿಂದ ಅಕ್ರಮ ಮರಳು ಸಾಗಟ: ಬೆಳ್ತಂಗಡಿ ಪೊಲೀಸರಿಂದ ದಾಳಿ: ಆರೋಪಿಗಳ ಸಹಿತ ಸ್ಥಳದಲ್ಲಿದ್ದ ರೂ. 23.56 ಲಕ್ಷ ಮೌಲ್ಯದ ವಾಹನ ಹಾಗೂ ಸೊತ್ತುಗಳ ವಶ

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮದ್ದಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಹರೀಶ್ ಪೂಂಜರ ಜಯಭೇರಿ : ಇಬ್ಬರು ಯುವಕರಿಂದ ಅಳದಂಗಡಿ ದೇವಸ್ಥಾನಕ್ಕೆ ಪಾದಯಾತ್ರೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಲ್ಪಾಡಿ ಶಾಲೆಗೆ ಊಟದ ತಟ್ಟೆ ಕೊಡುಗೆ

Suddi Udaya
error: Content is protected !!