27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್ ರವರ “ಕವಿತೆಯೆoಬ ಕೇದಗೆ” ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆ

ಬೆಳ್ತಂಗಡಿ:ಮಂಗಳೂರಿನ ನಂತೂರು ಸಂದೇಶ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆಮಂತ್ರಣ ವೇದಿಕೆಯ ಅಧ್ಯಕ್ಷೆ, ಸಾಹಿತಿ, ಕವಯತ್ರಿ ಶ್ರೀಮತಿ ವಿದ್ಯಾಶ್ರೀ ಅಡೂರ್ ಅವರು ರಚಿಸಿ ಹಾಡಿರುವ ಕವಿತೆಯೆoಬ ಕೇದಗೆ ಎಂಬ ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆಗೊಂಡಿತು.

ಖ್ಯಾತ ಹಾಸ್ಯ ಬರಹಗಾರ್ತಿಯಾದ ಭುವನೇಶ್ವರಿ ಹೆಗಡೆ,ಕಲಾಪೋಷಕರಾದ ಭುಜಬಲಿ ಧರ್ಮಸ್ಥಳ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಭಾವಗೀತೆ ಲೋಕಾರ್ಪಣೆಯನ್ನು ನೆರವೇರಿಸಿದರು.

ಈ ಭಾವಗೀತೆಯನ್ನು ವಿದ್ಯಾಶ್ರೀ ಅವರ ಎರಡನೇ ಕವನಸಂಕಲನ ಭಾವಬೇತಾಳದಿಂದ ಆರಿಸಿಕೊಳ್ಳಲಾಗಿದೆ.ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಮಂಗಳೂರು ಘಟಕದ ಪದಪ್ರಧಾನ ಸಮಾರಂಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ಆಮಂತ್ರಣದ ನಿಯೋಜಿತ ಅಧ್ಯಕ್ಷರಾದ ಲತೇಶ್ ಪುತ್ರನ್, ದ. ಕ ಜಿಲ್ಲಾಧ್ಯಕ್ಷರಾದ ವಿಂಧ್ಯಾ ರೈ ಕಡೆಶಿವಾಲಯ, ಆಮಂತ್ರಣದ ರೂವಾರಿಯಾದ ವಿಜಯ್ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Related posts

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಳ್ತಂಗಡಿ ಉಪ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ

Suddi Udaya

ಮದ್ದಡ್ಕ ವಿ.ಹಿಂ.ಪ. ಭಜರಂಗದಳ ವತಿಯಿಂದ ನಂದಗೋಕುಲ ಗೋಶಾಲೆಗೆ ಹಸಿಹುಲ್ಲು ವಿತರಣೆ

Suddi Udaya

ಅಸ್ವಸ್ಥಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶೌರ್ಯ ತಂಡದ ಸದಸ್ಯರು

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿಶ್ವ ಸೈಕಲ್ ದಿನ ಜಾಗೃತಿ ರ‍್ಯಾಲಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿವೋಕ್‌ ವಿದ್ಯಾರ್ಥಿಗಳಿಗೆ ವರ್ಡ್‌ಪ್ರೆಸ್‌ ಕಾರ್ಯಾಗಾರ

Suddi Udaya

ಸುದ್ದಿ ಉದಯ ದೀಪಾವಳಿ ವಿಶೇಷಾಂಕ- 2024: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya
error: Content is protected !!