31.2 C
ಪುತ್ತೂರು, ಬೆಳ್ತಂಗಡಿ
October 15, 2026
Uncategorized

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ

ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಕಾರ್ಯಕ್ರಮಕ್ಕೆ ಹಿರಿಯರಾದ ಪೂವಪ್ಪ ಶೆಟ್ಟಿ ಬಿಳಿಬೈಲು ಅವರು ಚಾಲನೆ ನೀಡಿದರು.

ಶ್ರಾವಣ ಮಾಸದಲ್ಲಿ ದೇವಸ್ಥಾನದಿಂದ ಗಣೇಶ ಚತುರ್ಥಿಯ ಪವಿತ್ರವಾದ ದಿನದ ಸಂದರ್ಭದಲ್ಲಿ ವಿವಿಧ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಪೂಜೆಗಾಗಿ ಭತ್ತದ ತೆನೆಯನ್ನು (ಹೊಸತು) ಸಮರ್ಪಿಸುವ ಉದಾತ್ತ ಉದ್ದೇಶದಿಂದ ಈ ಕೃಷಿ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ದೇವಸ್ಥಾನದ ಅಭಿವೃದ್ಧಿ ಸಮಿತಿ, ಶ್ರೀ ದುರ್ಗಾ ಮಾೃತ ಮಂಡಳಿ, ಭಜನಾ ಮಂಡಳಿ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಹಾಗೂ ಭಕ್ತರು ಉಪಸ್ಥಿತರಿದ್ದರು.
ಪ್ರತಿ ವರ್ಷವೂ ದೇವಸ್ಥಾನದ ಗದ್ದೆಗೆ ಬೇಕಾಗುವ ನೇಜಿಯನ್ನು ಭಕ್ತರಾದ ಉಮನಾಥ ಶೆಟ್ಟಿ ಕುಲ್ಲುಂಜ ಅವರು ತಯಾರಿಸಿ ಕೊಡುತ್ತಾರೆ.

Related posts

ಉಪ್ಪಿನಂಗಡಿ ಕಲ್ಲೇರಿ ಬಳ್ಳಮಂಜ ಮಡಂತ್ಯಾರ್-ಧರ್ಮಸ್ಥಳ ಮತ್ತು ಮಂಗಳೂರು ಮಾರ್ಗವಾಗಿ ಸರ್ಕಾರಿ ಬಸ್ ಪ್ರಾರಂಭಿಸುವಂತೆ ಸಾರಿಗೆ ಸಚಿವರಿಗೆ ಮನವಿ

Suddi Udaya

ಮದ್ದಡ್ಕ ಲ್ಯಾನ್ಸಿ ರೋಡ್ರಿಗಸ್ ನಿಧನ

Suddi Udaya

ಮಡಂತ್ಯಾರು ಗ್ರಾ.ಪಂ ಪಾರೆಂಕಿ 1 ನೇ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಡೆ

Suddi Udaya

ಉಜಿರೆಯ ಪದ್ಮಶ್ರೀ ಎಂಟರ್ ಪ್ರೈಸಸ್ ನಲ್ಲಿ ಪದ್ಮಶ್ರೀ ಬೆಳಕಿನ ಶಾಪಿಂಗ್ ಉತ್ಸವ ಇನ್ನೂ ಕೇವಲ 8 ದಿನ ಮಾತ್ರ

Suddi Udaya

ಲಾಯಿಲ: ಬಜಕ್ರೆಸಾಲು ಸೇತುವೆ ಅಡಿ ಎರಡು ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಪತ್ತೆ: ಡಬ್ಬಗಳನ್ನು ಒಡೆದು ಹಣ ಕಳವು ಗೈದಿರುವ ಶಂಕೆ

Suddi Udaya

ಭಾರೀ ಮಳೆ ಹಿನ್ನೆಲೆ ಆಗಸ್ಟ್ 29 ದ.ಕ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya
error: Content is protected !!