July 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿ ಕೆ ಹರಿಪ್ರಸಾದ್‌ರವರಿಗೆ ನೂತನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡುವಂತೆ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘದಿಂದ ಆಗ್ರಹ: ಸಂಜೀವ ಪೂಜಾರಿ


ಬೆಳ್ತಂಗಡಿ: ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಸಮಾನ ಪ್ರಾತಿನಿಧ್ಯ ಹಾಗೂ ಹಿಂದುಳಿದ ವರ್ಗಗಳ ರಾಜಕೀಯ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸ್ವಚ್ಛ ಚಾರಿತ್ರ್ಯದ ಹಿರಿಯ ನಾಯಕರು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್‌ರನ್ನು ಹಿಂದುಳಿದ ಕೋಟಾದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾಗಿ ನೇಮಕ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ವತಿಯಿಂದ ಅಗ್ರಹಿಸಲಾಗಿದೆ.

ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಬಿಲ್ಲವರು ಬಹು ಸಂಖ್ಯಾತರಾಗಿದ್ದು, ಈ ಭಾಗದಲ್ಲಿ ಮೂರ್ತೆದಾರಿಕೆಯನ್ನು ಮಾಡುತ್ತಿದ್ದು ಈ ವೃತ್ತಿಯು ಅತೀ ಕಷ್ಟದ ಕೆಲಸವಾಗಿರುವುದರಿಂದ ಹಾಗೂ ಸರಕಾರದಿಂದ ಈ ಮೂರ್ತೆದಾರಿಕೆಗೆ ಯಾವುದೆ ಸವಲತ್ತುಗಳು ದೊರೆತ್ತಿರುವುದಿಲ್ಲ. ಮೂರ್ತೆದಾರಿಕೆ ವೃತ್ತಿ ಮಾಡುತ್ತಿರುವವರ ಸಂಖ್ಯೆಯು ಕ್ಷೀಣಿಸುತ್ತಿದೆ. ಹಾಗೂ ಶೇಂದಿಯಿಂದ ತಯಾರಾಗುವ ಬಹು ಔಷದೀಯ ಗುಣವುಳ್ಳ ತಾಳೆಬೆಲ್ಲದ ತಯಾರಿಕೆಯು ಕಡಿಮೆಯಾಗುತ್ತಿದೆ. ಹಾಗೂ ಬಿಲ್ಲವ ಸಮಾಜಕ್ಕೆ ಸರಿಯಾಗಿ ಯಾವುದೇ ಸರಕಾರದಿಂದ ಪ್ರಾತಿನಿಧ್ಯ ದೊರಕಿರುವುದಿಲ್ಲ. ಆದುದರಿಂದ ಬಿಲ್ಲವ ಸಮುದಾಯದ ನಾಯಕರಾದ ದೀರ್ಘಕಾಲದ ರಾಜಕೀಯ ಅನುಭವ ಹೊಂದಿರುವ ಸಂಘಟನಾ ಚಾತುರ್ಯ ಹಾಗೂ ಜನಪರ ಕಾಳಜಿಯ ಮೂಲಕ ಬಿ ಕೆ ಹರಿಪ್ರಸಾದ್‌ರವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಹಾಗೂ ಸಮಾಜದ ಎಲ್ಲಾ ವರ್ಗಗಳ ಧ್ವನಿಯಾಗಿ ಕಾಯನಿರ್ವಹಿಸಿದ್ದಾರೆ. ಆದುದರಿಂದ ರಾಜ್ಯದ ಮುಖಂಡರು ಹಾಗೂ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ರಾಜಕೀಯ ಪರಿಸ್ಥಿತಿ ಸಾಮಾಜಿಕ ಸಮಿಕರಣಗಳು, ಹಾಗೂ ಹಿಂದುಳಿದ ವರ್ಗಗಳ ಅಶೋತ್ತರಗಳು ಹಾಗೂ ಬಿ ಕೆ ಹರಿಪ್ರಸಾದ್‌ರವರು ದೀರ್ಘಕಾಲದ ಸೇವೆಯನ್ನು ಪರಿಗಣಿಸಿ ಅವರನ್ನು ಹಿಂದುಳಿದ ಕೋಟಾದಡಿಯಲ್ಲಿ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡುವ ಮೂಲಕ ಸೂಕ್ತ ಗೌರವ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದಿಂದ ಒತ್ತಾಯಿಸಲಾಗಿದೆ ಎಂದು ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ತಿಳಿಸಿದ್ದಾರೆ.

Related posts

ಮಾಲಾಡಿ: ಕೊಲ್ಪೆದಬೈಲ್ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಪ್ರೇತ ಬಾಧೆ: ಬೆಂಕಿ ಹಿಡಿದು ಉರಿಯುವ ಬಟ್ಟೆ-ನೆಲಕ್ಕೆ ಬೀಳುತ್ತಿರುವ ಪಾತ್ರೆ ಬಟ್ಟಲು; ಮನೆಯವರಲ್ಲಿ ಆತಂಕ ಸೃಷ್ಟಿ

Suddi Udaya

ಜಾವೆಲಿನ್ ಎಸೆತ: ಮಚ್ಚಿನ ಸ.ಪ್ರೌ. ಶಾಲಾ ವಿದ್ಯಾರ್ಥಿ ಮಹಮದ್ ಯಾಸ್ಮಿರ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮುಂಡ್ರುಪ್ಪಾಡಿ ಸ. ಕಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯಧನ ಹಾಗೂ ಅಪಘಾತ ಚಿಕಿತ್ಸಾ ವೆಚ್ಚದ ಮರುಪಾವತಿಯಲ್ಲಿರುವ ಅವ್ಯವಸ್ಥೆಯ ಬಗ್ಗೆ ಮತ್ತು ಕಾರ್ಮಿಕರ ಹೆಲ್ತ್ ಚೆಕಪ್‌ನ ಯೋಜನೆಯಲ್ಲಿ ಮಂಡಳಿಯ ಹಣ ದುರುಪಯೋಗ: ಕೂಡಲೇ ಕ್ರಮ ವಹಿಸುವಂತೆ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ರಿಂದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ರಿಗೆ ಮನವಿ

Suddi Udaya

ಕನ್ಯಾಡಿ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯ ವಾರ್ಷಿಕೋತ್ಸವ

Suddi Udaya

ಪಟ್ರಮೆ ಗೆಳೆಯರ ಬಳಗದಿಂದ ಗಣೇಶ ಚತುರ್ಥಿ ಪ್ರಯುಕ್ತ ಅನಾರು ಶಾಲೆಯಲ್ಲಿ ಶ್ರಮದಾನ

Suddi Udaya
error: Content is protected !!