September 6, 2026
ಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸರ್ಕಾರಿ ಪ್ರೌಢಶಾಲೆ ವೇಣೂರುನಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ: ಪುಷ್ಪಾರ್ಚನೆ ಹಾಗೂ ಮೆರವಣಿಗೆ ಮೂಲಕ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

ವೇಣೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ವೇಣೂರು ಇಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು.

ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆಯ ಮೂಲಕ ಸ್ವಾಗತಿಸಲಾಯಿತು.ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪೋಷಕರು ಸೇರಿ ವೇಣೂರಿನಿಂದ ಜಾಥಾವನ್ನು ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಸಭೆಯಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.ಶಾಲೆಯ ಸಭಾಂಗಣಕ್ಕೆ ಕುರ್ಚಿಗಳನ್ನು ನೀಡಿದ ದಾನಿಗಳಾದ ನವೀನ್ ಪಚ್ಚೇರಿ ಹಾಗೂ ಶ್ರೀಮತಿ ಶ್ವೇತಾ ಅಶೋಕ್ ಇವರನ್ನು ಗೌರವಿಸಲಾಯಿತು. ಎಸ್ .ಎಸ್. ಎಲ್. ಸಿ ಫಲಿತಾಂಶದಲ್ಲಿ 100% ಸಾಧನೆ ಮಾಡಿದ ಶಾಲೆಯ ಉಪ ಪ್ರಾಂಶುಪಾಲರು ಹಾಗೂ ಎಸ್ಡಿಎಂಸಿ ಕಾರ್ಯಧ್ಯಕ್ಷರನ್ನು ಗ್ರಾಮ ಪಂಚಾಯತಿ ವೇಣೂರು ಇವರ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ರಾಜೇಶ್ ಪೂಜಾರಿ ಮೂಡುಕೋಡಿ ಎಸ್. ಡಿ. ಎಂ .ಸಿ. ಕಾರ್ಯಾಧ್ಯಕ್ಷರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಉಪ ಪ್ರಾಂಶುಪಾಲರಾದ ವೆಂಕಟೇಶ್ ತುಳುಪುಳೆ ವಹಿಸಿದ್ದರು. ಕನ್ನಡ ಭಾಷಾ ಶಿಕ್ಷಕರಾದ ರವೀಂದ್ರ .ಕೆ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಹೆಗ್ಡೆ,ಮಾಜಿ ಅಧ್ಯಕ್ಷರಾದ ನೇಮಯ್ಯ ಕುಲಾಲ್ ಪಂಚಾಯತ್ ಸದಸ್ಯರಾದ ಶ್ರೀಮತಿ ಸಂಭಾಷಿಣಿ ಜೈನ್, ಪಿಡಿಒ ಪ್ರಕಾಶ್, ಪಂಚಾಯತ ಸಿಬ್ಬಂದಿ ನಾರಣಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರತಿನಿಧಿಗಳು ಹಾಗೂ ದಾನಿಗಳಾದ ಭಾಸ್ಕರ್ ಪೈ ವೇಣೂರು, ಪದ್ಮಾಂಬ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಜಿನರಾಜ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಶ್ರೀಮತಿ ಅನಸೂಯ ಪಾಟಕ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಶ್ರೀಮತಿ ಸುಕನ್ಯಾ ಪ್ರಭು ಸ್ವಾಗತಿಸಿ,ನೆಲ್ಸನ್ ಹೆರಾಲ್ಡ್ ಧನ್ಯವಾದ ಸಲ್ಲಿಸಿದರು. ಶ್ರೀಮತಿ ಜ್ಯೋತಿ ಜೂಲಿಯೆಟ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆ

Suddi Udaya

ಜು.8: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರಿಗೆ ದೃಢಕಲಶಾಭಿಷೇಕ

Suddi Udaya

ಕ್ಯಾಂಟಿನ್‌ನಲ್ಲಿ ವೇಶ್ಯಾವಟಿಕೆ ಪ್ರಕರಣ: ಆರೋಪಿ ಸುಂದರ್ ಶೆಟ್ಟಿಗೆ ಜಾಮೀನು ಮಂಜೂರು

Suddi Udaya

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ದಿನೇಶ್ ಹೊಳ್ಳರವರಿಂದ ಬ್ಯಾಗ್, ಛತ್ರಿ, ಲೇಖನಿ ಸಾಮಾಗ್ರಿ ವಿತರಣೆ

Suddi Udaya

ಜೆ ಡಿ ಎಸ್ ಅಭ್ಯರ್ಥಿಯಿಂದ ತಾಲೂಕಿನಲ್ಲಿ ಮತಯಾಚನೆ   

Suddi Udaya

ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಅನುಗ್ರಹ ಸಮಾಗಮ 2025

Suddi Udaya
error: Content is protected !!