September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಮಧ್ಯಾಂತರ ಸಮ್ಮೇಳನದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ‘ಎಕ್ಸೆಲೆನ್ಸ್ ಅವಾರ್ಡ್’ ಹಾಗೂ ‘ಗೋಲ್ಡನ್ ಸ್ಟಾರ್ ಪ್ರೆಸಿಡೆಂಟ್’ ಪ್ರಶಸ್ತಿ

ಬೆಳ್ತಂಗಡಿ: ಉಡುಪಿಯ ಕಾಪುವಿನಲ್ಲಿ ನಡೆದ ವಲಯ 15ರ ಮಧ್ಯಾಂತರ ಸಮ್ಮೇಳನ ಸಂಗಮ ಕಾರ್ಯಕ್ರಮದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ‘ಎಕ್ಸೆಲೆನ್ಸ್ ಅವಾರ್ಡ್’ ಹಾಗೂ ‘ಗೋಲ್ಡನ್ ಸ್ಟಾರ್ ಪ್ರೆಸಿಡೆಂಟ್’ ಪ್ರಶಸ್ತಿ ಲಭಿಸಿದೆ.

ಘಟಕದ ಧನಾತ್ಮಕ ಬೆಳವಣಿಗೆ, ಎಲ್‌ಡಿಎಂಟಿ, ವಲಯ ಉಪಾಧ್ಯಕ್ಷರ ಮೊದಲ ಭೇಟಿ, ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಯೋಜನೆ, ಎನ್‌ಎಸ್‌ಎಸ್ ಕಾರ್ಯಕ್ರಮ ಮತ್ತು ವಲಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಸೇರಿದಂತೆ ಘಟಕದ ವಿವಿಧ ಕಾರ್ಯಕ್ರಮಗಳನ್ನು ಗುರುತಿಸಿ ಪ್ರಶಸ್ತಿಗಳು ದೊರೆತಿದೆ. ಇದಲ್ಲದೆ ಜೆಸಿಐ ಇಂಡಿಯಾದ ಪಿಅರ್ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ರಾಷ್ಟಿçÃಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಘಟಕ ಪತ್ರಿಕೆ ಕಪಿಲಾವಾಣಿಯ ಮೊದಲ ಸಂಚಿಕೆಯನ್ನು ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ವಲಯ ಉಪಾಧ್ಯಕ್ಷ ಜಿತೇಶ್ ಎಲ್ ಪಿರೇರಾ, ಜೆಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷರಾದ ರಿತೇಶ್ ಎಂ ಸ್ಟ್ರೆಲ್ಲಾ, ಕಾರ್ಯದರ್ಶಿ ಜೋಯಲ್ ಪಿರೇರಾ, ಕಪಿಲಾವಾಣಿ ಸಂಪಾದಕರಾದ ಜಸ್ವಂತ್ ಪಿರೇರಾ, ನಿಕಟಪೂರ್ವಾಧ್ಯಕ್ಷೆ ಡಾ ಶೋಭಾ ಪಿ, ಪೂರ್ವಾಧ್ಯಕ್ಷ ಸಂತೋಷ್ ಜೈನ್, ಪೂರ್ವಾಧ್ಯಕ್ಷರಾದ ಕೆ ಶ್ರೀಧರ ರಾವ್, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ ಮತ್ತು ದಕ್ಷ ಜೈನ್ ಉಪಸ್ಥಿತರಿದ್ದರು.

Related posts

ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪ್ರಮೋದ್ ಕುಮಾರ್

Suddi Udaya

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ದ್ವಿತೀಯ ವಾರ್ಷಿಕೋತ್ಸವ

Suddi Udaya

ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್ ರವರಿಂದ ಬೆಳ್ತಂಗಡಿ ಶ್ರೀ ಧ.ಆಂ.ಮಾ. ಶಾಲೆಯ ಜಿಲ್ಲಾ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಸ್ಕೌಟ್ ಗೈಡ್ಸ್ ಗಳಿಗೆ ಅಭಿನಂದನೆ

Suddi Udaya

ಪಡಂಗಡಿಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾ.ಸೇ. ಯೋಜನೆಯ ಬಗ್ಗೆ ವಿಶೇಷ ಕಾರ್ಯಾಗಾರ

Suddi Udaya

ಮೂಡುಬಿದಿರೆ:ಸ್ಥಳಾಂತರಿತ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಶಾಖೆ ಉದ್ಘಾಟನೆ

Suddi Udaya
error: Content is protected !!