24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಡಿ.ಎಂ ‘ಮನೀಷಾ’ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಮ್ಯಾಗಜಿನ್ ಹ್ಯಾಟ್ರಿಕ್ ಮನ್ನಣೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಹೊರತಂದ ‘ಮನೀಷಾ’ ವಾರ್ಷಿಕ ಸಂಚಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಮತ್ತೊಮ್ಮೆ ಮೊದಲ ಬಹುಮಾನಿತ ಆದ್ಯತೆಯೊಂದಿಗೆ ‘ಅತ್ಯುತ್ತಮ ಕಾಲೇಜು ಮ್ಯಾಗಝಿನ್” ಎಂಬ ಮನ್ನಣೆಗೆ ಪಾತ್ರವಾಗಿದೆ.

ಈ ಮೂಲಕ ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ಕಾಲೇಜು ಮ್ಯಾಗಝಿನ್ ಆಗಿ ಹ್ಯಾಟ್ರಿಕ್ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ 2022-23, 2023-24 , 2024-25ರ ಎರಡೂ ಶೈಕ್ಷಣಿಕ ವರ್ಷಗಳಲ್ಲಿ ಬೆಸ್ಟ್ ಮ್ಯಾಗಜಿನ್ ಮಾನ್ಯತೆ ಪಡೆದಿತ್ತು.

ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಅವರಿಗೆ ‘ಮನೀಷಾ’ ಸಂಚಿಕೆಯ ಅನನ್ಯ ಪ್ರಯೋಗಶೀಲತೆಗಾಗಿ ಪ್ರಥಮ ಬಹುಮಾನಿತ ಮನ್ನಣೆಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಪ್ರಸಕ್ತ ವರ್ಷದ ಸಂಚಿಕೆಯು ಪದವಿ ಮತ್ತು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಬರಹ, ಕವಿತೆ, ಕಥೆಗಳನ್ನು ಒಳಗೊಂಡಿದೆ. ಕರ್ನಾಟಕ ಮಾತ್ರವಲ್ಲದೇ ಭಾರತದ ಉಳಿದ ಪ್ರದೇಶಗಳ ಸ್ಥಳೀಯ ಸಂಸ್ಕೃತಿಯನ್ನು ಧ್ವನಿಸುವ ಬರಹಗಳು, ಉಪಭಾಷಿಕ ಅಸ್ಮಿತೆ, ಹೊಸ ಕಾಲದ ತಲ್ಲಣಗಳ ಕುರಿತ ಯುವ ಮನಸುಗಳ ವಿವೇಚನಾತ್ಮಕ ಚಿಂತನೆ, ಬೆಳೆಯುವ ಮನಸುಗಳ ವಿಭಿನ್ನ ಆಶೋತ್ತರಗಳನ್ನು ಈ ಸಂಚಿಕೆಯು ದಾಖಲಿಸಿದೆ.

ಬೆಸ್ಟ್ ಮ್ಯಾಗಝಿನ್ ಹ್ಯಾಟ್ರಿಕ್ ಮನ್ನಣೆಗೆ ಪಾತ್ರವಾದ ಮನೀಷಾ ಸಂಚಿಕೆಯ ವಿದ್ಯಾರ್ಥಿ ಬರಹಗಾರರು ಮತ್ತು ಸಂಪಾದಕೀಯ ಮಂಡಳಿಯ ಪ್ರಯೋಗಶೀಲತೆಯ ಬಗ್ಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ, ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾ‌ರ್, ಡಾ.ಸತೀಶ್ಚಂದ್ರ ಎಸ್, ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸತತವಾಗಿ ನಮ್ಮ ಕಾಲೇಜಿನ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಕಾಲೇಜು ಮ್ಯಾಗಝೀನ್ ಪ್ರಶಸ್ತಿ ಬಂದಿರುವುದು ಅತ್ಯಂತ ಸಂತೋಷದ ವಿಷಯ.
ಈ ಪ್ರಶಸ್ತಿಯು ನಮ್ಮ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿ/ನಿಯ ಶೈಕ್ಷಣಿಕ ಮಟ್ಟವನ್ನು ಸೂಚಿಸುತ್ತದೆ. ಮೌಲಿಕವಾದ ಶ್ರೇಷ್ಠ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆಯು ನೀಡಿರುವುದರಿಂದ ಸಹಜವಾಗಿ ವಿದ್ಯಾರ್ಥಿ/ನಿಯರ ವಿವಿಧ ಲೇಖನಗಳು ಗುಣಮಟ್ಟವನ್ನು ಕಾಯ್ದುಕೊಂಡಿರುತ್ತದೆ. ನಮ್ಮ ಸಂಸ್ಥೆಯ ಅಧ್ಯಕ್ಷರ ಮತ್ತು ಆಡಳಿತ ಮಂಡಳಿಯವರ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಮನೀಷಾ ಇದರ ಸಂಪಾದಕ ಮಂಡಳಿಗೆ ಅಭಿನಂದನೆಗಳು.
– ಪ್ರೊ. ವಿಶ್ವನಾಥ್ ಪಿ ಪ್ರಾಚಾರ್ಯರು, ಎಸ್.ಡಿ.ಎಂ ಸ್ವಾಯತ್ತ ಕಾಲೇಜು ಉಜಿರೆ.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿರುವ ನಾಗಬನದಲ್ಲಿ ವಿಶೇಷ ಪೂಜೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

Suddi Udaya

ಬಂಟರ ಮಹಿಳಾ ವಿಭಾಗದಿಂದ “ಸ್ಪರ್ಶ” ಹೆಣ್ಣು ಮಕ್ಕಳ ಜಾಗೃತಿ ವಿಶೇಷ ಕಾರ್ಯಕ್ರಮ

Suddi Udaya

ಲೋಕಸಭೆ ಚುನಾವಣೆ: ಬಿಜೆಪಿ ಎರಡನೇ ಪಟ್ಟಿ ಪ್ರಕಟ: ದ.ಕ. ಜಿಲ್ಲೆಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಪುಂಜಾಲಕಟ್ಟೆ ಯಕ್ಷದ್ರುವ ಪಟ್ಲ ಫೌಂಡೇಶನ್ ಮಹಿಳಾ ಘಟಕದಿಂದ ಉಮಾ ಡಿ. ಗೌಡರಿಗೆ ಸನ್ಮಾನ

Suddi Udaya

ಅ.15-ಡಿ.31: ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಫೆಸ್ಟಿವಲ್ ಮೆಗಾ ಡಿಸ್ಕೌಂಟ್ ಆಫರ್

Suddi Udaya
error: Content is protected !!