September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಓಡಿಲ್ನಾಳ ಸ.ಉ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಓಡಿಲ್ನಾಳ : ಸರಕಾರಿ ಉನ್ನತ್ತೀಕರಿಸಿದ ಪ್ರಾಥಮಿಕ ಶಾಲೆ ಓಡಿಲ್ನಾಳ ಜೂ 1ರಂದು ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಆರತಿ ಬೆಳಗಿ, ಪೆನ್ಸಿಲ್ ಬಲೂನು ನೀಡಿ ಬ್ಯಾಂಡ್ ಸೆಟ್ಟಿನೊಂದಿಗೆ ಶಾಲಾ ಆವರಣದೊಳಗೆ ಸ್ವಾಗತಿಸಲಾಯಿತು .ಹೊಸದಾಗಿ ಆರಂಭಗೊಂಡ, ವರ್ಣ ರಂಜಿತ ಗೊಂಡಿರುವ ಎಲ್ ಕೆ ಜಿ. ಯು ಕೆಜಿ ತರಗತಿ ಕೋಣೆಯನ್ನು ಶಾಲಾ ಹಿರಿಯ ವಿದ್ಯಾರ್ಥಿ, ಕೊಡುಗೈ ದಾನಿಯಾಗಿರುವ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಯo ರಘುರಾಮ್ ಭಟ್ ಮಠ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು ಶಾಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದಲ್ಲಿ ಮಹಾಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ. ಹಿರಿಯ ವಿದ್ಯಾರ್ಥಿ ಡಾಕ್ಟರ್ ಹರೀಶ್ ಶೆಣೈ ನೀಡಿರುವ 100 ನೋಟು ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿ ಹಾಗೂ ಅವರು ಒಂದು ಕಪಾಟು, ಟೇಬಲ್ , ಟೇಬಲ್ ಫ್ಯಾನ್ , ಟೀಪಾಯಿ, ರಾಕ್ ನ್ನು ಕೂಡ ಕೊಡುಗೆಯಾಗಿ ನೀಡಿರುತ್ತಾರೆ. ಶಾಲಾ ದೈಹಿಕ ಶಿಕ್ಷಕ ಜಯರಾಜ್ ಜೈನ್ ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತೆ ಆರೋಗ್ಯ ಕಾಳಜಿ ಹಾಗೂ ಶಾಲಾ ಕೆಲವು ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕರಾದ ಶ್ರೀಮತಿ ಉಷಾ ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ದ್ವಿ ಭಾಷಾ ತರಗತಿಗೆ ಸಂಭಂದಿಸಿದ ವಿಚಾರಗಳನ್ನು ತಿಳಿಸಿದರು. ನೂತನವಾಗಿ ಎಲ್ ಕೆ ಜಿ .ಯು ಕೆ ಜಿ ಗೆ ಆಯ್ಕೆಯಾದ ಶಿಕ್ಷಕಿ ಶ್ರೀಮತಿ ಪವಿತ್ರ ಇವರನ್ನು ಪರಿಚಿಸಲಾಯಿತು. ಎಸ್‌ ಡಿ ಎಂ ಸಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮದ್ದಡ್ಕ ಅಧ್ಯಕ್ಷತೆ ವಹಿಸಿದ್ದರು‌.

ಕುಮಾರಿ ಶೌಫಾ ಮರಿಯಂ,ರಾಜಶ್ರೀ, ಆಪ್ತಿ ಪ್ರಾರ್ಥಿಸಿದರು. ಶ್ರೀಮತಿ ವಿಲ್ಮೆಂಟ್ ಸೇರಾವೋ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಅಕ್ಷತಾ ಧನ್ಯವಾದ ಕೋರಿದರು. ಎಸ್ ಡಿ ಎಂ ಸಿ ಸರ್ವ ಸದಸ್ಯರು ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ ವರ್ಗ ಸಹಕರಿಸಿದರು.

Related posts

ಬೆಳ್ತಂಗಡಿ: ಡಾ. ಯೂಸುಫ್ ಕುಂಬ್ಲೆ ಅವರ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 35 ಕುಟುಂಬಕ್ಕೆ ಆಹಾರದ ಕಿಟ್ ವಿತರಣೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ. ಯು. ಸಿ ವಿದ್ಯಾರ್ಥಿಗಳಿಗೆ “Ignite 2026” ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ನವಿಲು

Suddi Udaya

ಎಸ್.ಡಿ.ಎಂ ಪ.ಪೂ ಕಾಲೇಜಿನ ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ಅಕ್ಷರ ಪಿ. ಆಯ್ಕೆ

Suddi Udaya

ಮಚ್ಚಿನ ಗ್ರಾಮ ಪಂಚಾಯತ್ ಮಟ್ಟದ 25ನೇ ಜನಸ್ಪಂದನ ಸಭೆ: ನಾಡ ಕಚೇರಿಯ ಬೇಡಿಕೆ – ಚಿರತೆ ಕಾಟದಿಂದ ಜನರಲ್ಲಿ ಆತಂಕ

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ: ಇವಿಎಂ ಮಾದರಿ ಆ್ಯಪ್ ಬಳಸಿ ಮತ ಚಲಾವಣೆ

Suddi Udaya
error: Content is protected !!