July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯಾ’ಸ್ ಟೈಮ್ ಝೋನ್’ ವಾಚ್ ಶೋರೂಂ ಶುಭಾರಂಭ

ಬೆಳ್ತಂಗಡಿ: 80 ವರ್ಷಗಳ ಇತಿಹಾಸ ಹೊಂದಿರುವ ಮುಳಿಯ ಸಂಸ್ಥೆ, ಉದ್ಯಮದ ಲೆಕ್ಕಾಚಾರವನ್ನು ಮಾತ್ರ ಮಾಡದೆ, ತನ್ನ ಕಾರ್ಯ ಬದ್ಧತೆಯನ್ನು ತೋರಿಸಿದೆ. ಕೈ ಗಡಿಯಾರ ಕೇವಲ ಸಮಯ ನೋಡುವ ಸಾಧನವಲ್ಲ, ಅದು ವ್ಯಕ್ತಿಯ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.

ಅವರು ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ ನೂತನ ಉದ್ಯಮವಾದ ‘ಮುಳಿಯಾ’ಸ್ ಟೈಮ್ ಝೋನ್’ ವಾಚ್ ಶೋರೂಂ ನ್ನು ಅನಾವರಣಗೊಳಿಸಿ ಮಾತನಾಡಿದರು.

ಮುಳಿಯ ಗ್ರಾಮೀಣ ಪ್ರದೇಶದ ಧ್ವನಿ:
ಮುಖ್ಯ ಅತಿಥಿ ಚಲನಚಿತ್ರ ನಿರ್ದೇಶಕ, ನಟ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಮಾತನಾಡಿ,
ಗ್ರಾಮೀಣ ಪ್ರದೇಶದ ಧ್ವನಿಯಾಗಿ ಮುಳಿಯ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಊರಿನ ವಿಶೇಷ ಪ್ರತಿಭೆಗಳಿಗೆ ಅವಕಾಶ, ಜನರಿಗೆ ಹೊಸತನವನ್ನು ತರುವಲ್ಲಿ ಮುಳಿಯ ನೂತನ ಕಾರ್ಯವನ್ನು ಮಾಡುತ್ತಿದ್ದು, ಸಂಸ್ಥೆಯು ಇಡೀ ಜಗತ್ತಿಗೆ ಪಸರಿಸಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮುಳಿಯ ಗೋಲ್ಡ್ & ಡೈಮಂಡ್ಸ್ ಎಂ.ಡಿ. ಕೃಷ್ಣನಾರಾಯಣ ಮುಳಿಯ ಮಾತನಾಡಿ, ಹಿಂದಿನ ಕಾಲದ ಮೊಬೈಲ್, ಟಿ.ವಿ ಎಲ್ಲವೂ ಕಾಣೆಯಾಗಿದೆ, ಆದರೆ ವಾಚ್ ಮಾತ್ರ ಇಂದಿಗೂ ಅದೇ ಛಾಪನ್ನು ಮುಂದುವರಿಸಿಕೊಂಡು ಬಂದಿದೆ. ವಾಚ್ ಕೇವಲ ಸಮಯ ನೋಡಲು ಅಲ್ಲ, ವ್ಯಕ್ತಿತ್ವದ ಪ್ರತೀಕ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು ಹಾಗೂ ವಾಚ್ ನ ನೂತನ ಸಂಗ್ರಹವನ್ನು ಪ್ರದರ್ಶಿಸಲಾಯಿತು. ಮುಳಿಯ ಸಂಸ್ಥೆಯ ನಿರ್ದೇಶಕರಾದ ಅಶ್ವಿನಿ ಕೃಷ್ಣ ನಾರಾಯಣ ಮುಳಿಯ, ರೈಡಿಂಗ್ ಜೋಡಿ ಖ್ಯಾತಿಯ ದಂಪತಿಗಳು, ಗ್ರಾಹಕ ಮಿತ್ರರು, ಮುಳಿಯ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಳಿಯ ಗೋಲ್ಡ್ & ಡೈಮಂಡ್ಸ್ ಬೆಳ್ತಂಗಡಿ ಶಾಖೆಯ ಶಾಖಾ ಪ್ರಬಂಧಕ ಲೋಹಿತ್ ಕುಮಾರ್ ಸ್ವಾಗತಿಸಿದರು. ಮುಳಿಯ ಸಿಬ್ಬಂದಿಗಳಾದ ಅಕ್ಷಯ್ ಪ್ರಾರ್ಥಿಸಿ, ಕೃಷ್ಣಪ್ಪ ಧನ್ಯವಾದ ಸಲ್ಲಿಸಿದರು. ವಿನ್ಯಾಸ್ ಭಂಡಾರಿ ನಿರೂಪಿಸಿದರು.

Related posts

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿಶಿಲ ಗ್ರಾ.ಪಂ ನಲ್ಲಿ ಪ್ರತಿಭಟನೆ

Suddi Udaya

ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ: ಬೈಕ್ ಸವಾರ ರೆಖ್ಯ ನಿವಾಸಿ ಥೋಮಸ್ ಸಾವು

Suddi Udaya

ಕಲ್ಮಂಜ: ಉಳ್ಳಾಯ ಉಳ್ಳಾಲ್ತಿ ದೈವಸ್ಥಾನ ಪರಾರಿ ಮಜಲ್ ಗುಂಡ ಇದರ ನೂತನ ದೇಗುಲದ ಶಿಲಾನ್ಯಾಸ

Suddi Udaya

ಉಜಿರೆ: ಎಸ್ ಡಿ ಯಂ ಪಾಲಿಟೆಕ್ನಿಕ್ – ರಾಷ್ಟೀಯ ಯುವ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ನಾಯಕಿಯಾಗಿ ಕು. ನಿಶಾ ಜಿ

Suddi Udaya

ಬೆಳ್ತಂಗಡಿ : ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ ಕುರಿತು ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!