September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂಡಾಜೆ ಕಾಡಿನಲ್ಲಿ ಗುಡ್ಡಜರಿತ

ಬೆಳ್ತಂಗಡಿ: ಕುದುರೆಮುಖ ವನ್ಯಜೀವಿ ವಿಭಾಗದ ಬಂಡಾಜೆ ಕಾಡಿನಲ್ಲಿ ಗುಡ್ಡಜರಿತ ಉಂಟಾಗಿದೆ.
ದೂರದ ಅರಣ್ಯ ಪ್ರದೇಶದಲ್ಲಿ ಗುಡ್ಡ ಹಾಗೂ ಕಲ್ಲುಗಳು ಜರಿದು ಬಿದ್ದಿದ್ದು ಇದನ್ನು ಸುಮಾರು ಒಂದು ಕಿ.ಮೀ.ದೂರದಲ್ಲಿರುವ ಪರಿಸರದ ಜನರು ಕಂಡಿದ್ದಾರೆ.
ಈ ಅರಣ್ಯ ಪ್ರದೇಶದಲ್ಲಿ ಯಾವುದೇ ಜನ ವಾಸ್ತವ್ಯ ಇರುವುದಿಲ್ಲ. 2019ರ ನೆರೆ ಸಂದರ್ಭದಲ್ಲಿ ಬಂಡಾಜೆ ಅರಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಹಲವಾರು ಅವಾಂತರಗಳು ಸಂಭವಿಸಿದ್ದವು.ಈ ನೆನಪು ಇನ್ನೂ ತಾಲೂಕಿನ ಜನರಲ್ಲಿ ಹಸಿರಾಗಿದೆ. ಪ್ರಸ್ತುತ ಅಂತಹ ದೊಡ್ಡ ಪ್ರಮಾಣದ ಜರಿತ ಉಂಟಾಗಿಲ್ಲ.

ಬಂಡಾಜೆ ಅರಣ್ಯದಲ್ಲಿ ಇಂತಹ ಲಘು ಪ್ರಮಾಣದ ಕುಸಿತಗಳು ಮಳೆ ಸಂದರ್ಭ ಆಗಾಗ ನಡೆಯುತ್ತಿರುತ್ತವೆ. ಮಳೆಗಾಲ ಆರಂಭಕ್ಕೆ ಗುಡ್ಡ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಳ್ಳುವುದು ಸಾಮಾನ್ಯವಾಗಿದ್ದು ಕೆಲವೊಂದು ಲಘು ಪ್ರಮಾಣದ ಜರಿತಗಳು ಉಂಟಾಗುತ್ತವೆ. ಆದರೆ ಇದರಿಂದ ಯಾವುದೇ ಅಪಾಯಕಾರಿ ಸನ್ನಿವೇಶ ಉಂಟಾಗುವುದಿಲ್ಲ. ಈ ಬಾರಿ ಸಣ್ಣ ಪ್ರಮಾಣದ ಕುಸಿತ ಕಂಡುಬಂದಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

Related posts

ಚಾರ್ಮಾಡಿ : ಮಿನಿ ಬಸ್ ಪಲ್ಟಿ, ನಾಲ್ಕು ಮಂದಿ ಗಂಭೀರ ಹಲವರಿಗೆ ಗಾಯ

Suddi Udaya

ವೇಣೂರು ಭಗವಾನ್ ಶ್ರೀ ಬಾಹಬಲಿಯ ಮಹಾ ಮಜ್ಜನ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ, ಅಟ್ಟಳಿಗೆ ಹಾಗೂ ಇತರ ಕಾಮಗಾರಿ ವೀಕ್ಷಣೆ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಉಜಿರೆಯಲ್ಲಿ ಕ್ಯಾಂಪಸ್ ನೇಮಕಾತಿ ಚಾಲನೆ

Suddi Udaya

ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಪ್ರೇಮನಾಥ ಹೆಗಡೆ, ಸಿದ್ದಾರ್ಥ ರವರಿಂದ ಕಾಯರ್ತ್ತಡ್ಕ ಹಿ.ಪ್ರಾ. ಶಾಲೆಗೆ ಅನ್ನ ಬಡಿಸುವ ಗಾಡಿ ಕೊಡುಗೆ

Suddi Udaya

ಉಜಿರೆ ಎಸ್.ಡಿ.ಎಂ ನಲ್ಲಿ ಜೀವನ ಕೌಶಲ್ಯ ಹಾಗೂ ವೃತ್ತಿಪರ ಕೌಶಲ್ಯ ಮಾಹಿತಿ ಕಾರ್ಯಾಗಾರ

Suddi Udaya

ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಸದಸ್ಯೆಯ ತಂಡದಿಂದ ಹಲ್ಲೆ: ಎಸ್‌ಡಿಪಿಐ ತೆಕ್ಕಾರು ಗ್ರಾಮ ಸಮಿತಿ ಖಂಡನೆ

Suddi Udaya
error: Content is protected !!